Friday, November 20, 2026
spot_img

ಮಂಡ್ಯ:ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ಧಾರ್ಮಿಕ ಘೋಷಣೆ! ವ್ಯಕ್ತಿ ಬಂಧನ

**ಮಂಡ್ಯದ ಮಹಾವೀರ ಸರ್ಕಲ್‌ನಲ್ಲಿ ರಸ್ತೆ ಅಡ್ಡಗಟ್ಟಿ ‘ಧಾರ್ಮಿಕ’ ಘೋಷಣೆ: ಸ್ಕೂಟರ್ ಸವಾರ ಬಂಧನ**

*ವಿಡಿಯೋದಲ್ಲಿ ಘೋಷಣೆ ಸ್ಪಷ್ಟ; ಪೊಲೀಸ್ ಪ್ರಕಟಣೆಯಲ್ಲಿ ಘೋಷಣೆಯ ಉಲ್ಲೇಖವಿಲ್ಲ*

ಮಂಡ್ಯ, ನ.20: ನಗರದ ಮಹಾವೀರ ಸರ್ಕಲ್‌ನಲ್ಲಿ ಇಂದು ಬೆಳಗ್ಗೆ ಸ್ಕೂಟರ್ ಅನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ವಾಹನ ಸಂಚಾರಕ್ಕೆ ಅಡ್ಡಿಪಡಿಸಿ, ಜೋರಾಗಿ ಘೋಷಣೆ ಕೂಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ ವ್ಯಕ್ತಿಯನ್ನು ಮಂಡ್ಯ ಪೂರ್ವ ಪೊಲೀಸರು ಬಂಧಿಸಿದ್ದಾರೆ.

ಬೆಳಗ್ಗೆ 9 ರಿಂದ 9.15ರ ಅವಧಿಯಲ್ಲಿ ಘಟನೆ ನಡೆದಿದೆ. ವ್ಯಕ್ತಿಯು ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ, ಜನಸಾಮಾನ್ಯರಿಗೆ ಕಿರುಕುಳ ನೀಡುವ ಉದ್ದೇಶದಿಂದ ಘೋಷಣೆ ಕೂಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ವ ಠಾಣೆಯ ಪಿಎಸ್‌ಐ ಶ್ರೀಧರ್ ಎಂ.ಸಿ. ಅವರು ಸ್ವಯಂ ವರದಿ ತಯಾರಿಸಿ ದೂರು ದಾಖಲಿಸಿದ್ದಾರೆ.

ಶಂಕರ್ ಮಠ, 4ನೇ ಕ್ರಾಸ್ ನಿವಾಸಿ ಉಮ್ಮರ್ ಫಾರೂಕ್ ಬಿನ್ ಅಬ್ದುಲ್ ಸತ್ತಾರ್ (34) ಬಂಧಿತ ಆರೋಪಿ. ಸ್ಕೂಟರ್ ಸಮೇತ ಆತನನ್ನು ವಶಕ್ಕೆ ಪಡೆಯಲಾಗಿದೆ.

**ಹಾಕಿರುವ ಸೆಕ್ಷನ್‌ಗಳು:** ಮಂಡ್ಯ ಪೂರ್ವ ಠಾಣೆಯಲ್ಲಿ ಮೊ.ಸಂ. 166/2026ರಡಿ ಈ ಕೆಳಗಿನ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ:

– **ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 270:** ಇದು ಸಾರ್ವಜನಿಕ ಉಪದ್ರವ (ಪಬ್ಲಿಕ್ ನ್ಯೂಸೆನ್ಸ್) ಕುರಿತದ್ದು. ಸಾರ್ವಜನಿಕರಿಗೆ ಅಥವಾ ಆ ಪ್ರದೇಶದ ಜನರಿಗೆ ಸಾಮಾನ್ಯವಾಗಿ ತೊಂದರೆ, ಅಪಾಯ ಅಥವಾ ಕಿರಿಕಿರಿ ಉಂಟುಮಾಡುವ ಕೃತ್ಯ ಇದರ ವ್ಯಾಪ್ತಿಗೆ ಬರುತ್ತದೆ. ಇದರ ಶಿಕ್ಷೆಯನ್ನು ಕಲಂ 292ರಲ್ಲಿ ನಿಗದಿ ಮಾಡಲಾಗಿದ್ದು, ಗರಿಷ್ಠ ₹1,000 ದಂಡ ವಿಧಿಸಬಹುದು.
– **ಬಿಎನ್‌ಎಸ್ ಕಲಂ 285:** ಸಾರ್ವಜನಿಕ ರಸ್ತೆಯಲ್ಲಿ ಅಪಾಯ ಅಥವಾ ಅಡಚಣೆ ಉಂಟುಮಾಡುವುದಕ್ಕೆ ಸಂಬಂಧಿಸಿದೆ. ರಸ್ತೆಗೆ ಅಡ್ಡಲಾಗಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಇದನ್ನು ಅನ್ವಯಿಸಲಾಗಿದೆ. ಇದಕ್ಕೆ ಗರಿಷ್ಠ ₹5,000 ದಂಡ ವಿಧಿಸಬಹುದು.
– **ಮಾನಸಿಕ ಆರೋಗ್ಯ ಕಾಯ್ದೆ (ಮೆಂಟಲ್ ಹೆಲ್ತ್‌ಕೇರ್ ಆಕ್ಟ್, 2017) ಕಲಂ 100:** ಮಾನಸಿಕ ಅಸ್ವಸ್ಥರೆಂದು ಭಾವಿಸಲಾದ ವ್ಯಕ್ತಿಗಳ ವಿಷಯದಲ್ಲಿ ಪೊಲೀಸ್ ಅಧಿಕಾರಿಗಳ ಕರ್ತವ್ಯಗಳನ್ನು ಈ ಕಲಂ ವಿವರಿಸುತ್ತದೆ. ಅಂತಹ ವ್ಯಕ್ತಿಯನ್ನು ರಕ್ಷಣೆಗೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ಇದರ ಉದ್ದೇಶ. ಇದು ಶಿಕ್ಷಾರ್ಹ ಅಪರಾಧದ ಕಲಂ ಅಲ್ಲ, ಆರೋಪಿಯ ಮಾನಸಿಕ ಸ್ಥಿತಿಯ ಕುರಿತ ಪ್ರಕ್ರಿಯೆಗೆ ಸಂಬಂಧಿಸಿದ್ದು.

**ಘೋಷಣೆ ಕುರಿತು ಗೊಂದಲ:** ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿ “ಯಾವುದೋ ಘೋಷಣೆ” ಕೂಗಿದ್ದಾನೆ ಎಂದಷ್ಟೇ ಹೇಳಲಾಗಿದ್ದು, ಘೋಷಣೆ ಯಾವುದೆಂದು ಉಲ್ಲೇಖಿಸಿಲ್ಲ. ಈ ಬಗ್ಗೆ ವಿಚಾರಿಸಿದಾಗ, ವ್ಯಕ್ತಿ ಕೂಗಿದ ಘೋಷಣೆ ತಮಗೆ ಕೇಳಿಸುತ್ತಿಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಆದರೆ ಘಟನೆಯ ವಿಡಿಯೋದಲ್ಲಿ ವ್ಯಕ್ತಿ “ಅಲ್ಲಾ ಹೋ ಅಕ್ಬರ್” ಎಂದು ಕೂಗುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. (ಐಪಿಎಸ್), ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಮಂಡ್ಯ ಉಪವಿಭಾಗದ ಡಿವೈಎಸ್‌ಪಿ ಎಚ್.ಎಲ್. ಲಕ್ಷ್ಮೀನಾರಾಯಣಪ್ರಸಾದ್ ಹಾಗೂ ನಗರ ವೃತ್ತ ಪ್ರಭಾರ ಸಿಪಿಐ ನವೀನ್ ಸುಪೇಕರ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶ್ರೀಧರ್ ಎಂ.ಸಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಎಎಸ್‌ಐ ಟಿ. ಲಿಂಗರಾಜು, ಹೆಡ್ ಕಾನ್‌ಸ್ಟೆಬಲ್‌ಗಳಾದ ಉಮರ್ ಅಹಮದ್ ಫಾರೂಖಿ (ಹೆಚ್‌ಸಿ 47), ಅನಿಲ್ ಕುಮಾರ್ ಎಂ.ಆರ್. (ಹೆಚ್‌ಸಿ 316) ಹಾಗೂ ಸಿಡಿಆರ್ ವಿಭಾಗದ ಲೋಕೇಶ್ ಮತ್ತು ರವಿಕಿರಣ್ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

 

 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!