ಮನ್ ಮುಲ್ ಹಗರಣ:ಪೋಲಿಸರ ತನಿಖೆಯಲ್ಲಿ ನಂಬಿಕೆಯಿಲ್ಲ
ಮನ್ ಮುಲ್ ನಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲಿ ಪೋಲಿಸರ ತನಿಖೆ ಮೇಲೆ ನಮಗೆ ಯಾವುದೆ ವಿಶ್ವಾಸವಿಲ್ಲ ಇದರ ಬದಲು ಸಿಬಿಐ ಅಥವಾ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮಾಜೀ ಶಾಸಕ ಸುರೇಶ್ ಗೌಡ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಂಡ್ಯದಲ್ಲಿ ಮಾತನಾಡಿದ ಅವರು.ನಮ್ಮ ನಿರೀಕ್ಷೆ ಹುಸಿಯಾಗಿದ್ದು ಪೋಲಿಸ್ ತನಿಖೆ ವ್ಯತಿರಿಕ್ತ ದಿಕ್ಕಿನಲ್ಲಿ ಸಾಗಿದ್ದು.ಪೋಲಿಸ್ ತನಿಖೆಯಿಂದ ಹೈನುಗಾರರಿಗೆ ನ್ಯಾಯ ಸಿಗುವುದಿಲ್ಲ.ಈ ಹಿಂದೆ ಮೆಗಾಡೈರಿ ಹಾಲು ನೀರು ಹಗರಣದ ಹೆಸರು ಹೇಳಿ ಅಧಿಕಾರಕ್ಕೆ ಬಂದವರು ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ನಂದಿನಿ ಬ್ರಾಂಡ್ ದೇಶ ವಿದೇಶದಲ್ಲು ಹೆಸರುವಾಸಿಯಾಗಿದೆ. ಇದಕ್ಕೆ ಕೆಟ್ಟ ಹೆಸರು ಬಂದರೆ ರೈತರ ಪರಿಸ್ಥಿತಿ ಏನಾಗಲಿದೆ.
ಸಚಿವರಾದೊಡನೆ ಚಲುವರಾಯಸ್ವಾಮಿ ಜಿಲ್ಲೆಗೆ ಭೇಟಿ ಕೊಟ್ಟಾಗ ಮೊದಲು ಅವರು ಮನ್ ಮುಲ್ ಗೆ ಭೇಟಿ ನೀಡಿದರು.ಆದರೆ ಈಗ ಅಲ್ಲಿ ಹಗರಣದ ಸದ್ದು ಕೇಳುತ್ತಿದೆ ಎಂದರು.
ಮೆಗಾಡೈರಿ ಪ್ರಕರಣದ ಆರೋಪಿಗಳನ್ನೆ ಡೈರಿಗೆ ಅಧ್ಯಕ್ಷರನ್ನಾಗಿಸಿದರು.ನಮ್ಮ ಪಕ್ಷದ ರಾಮಚಂದ್ರ ರಘು ನಂದನ್ ಕಾಲದಲ್ಲಿ ಹಾಲು ನೀರು ಹಗರಣ ಹೊರಬಿದ್ದಾಗ ಹಲಗೂರಿನಿಂದ ಕಿಕ್ಕೇರಿವರೆಗೆ ಅಂಗಿ ಬಟ್ಟೆ ಬಿಚ್ಚಿಕೊಂಡು ಹೋದವರು ಈಗ ಅದರ ತನಿಖೆ ಏನಾಯಿತು ಎಂದು ತಿಳಿಸಬೇಕು ಸಚಿವ ಚಲುವರಾಯಸ್ವಾಮಿ ಯನ್ನು ಲೇವಡಿಯಾಡಿದರು.
ಮನ್ ಮುಲ್ ನಲ್ಲಿ ಕಲಬೆರಕೆ ನಡೆದಿರೋದು ಸತ್ಯ.ಈಗ ಬಂಧಿತರು ನೆಪ ಮಾತ್ರ.ಅಸಲಿ ತಿಮಿಂಗಿಲಗಳು ಹೊರಗೆ ಇವೆ.ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೆಲ ನಿರ್ದೇಶಕರು ೬ ತಿಂಗಳ ಹಿಂದೆಯೆ ಗಮನಕ್ಕೆ ತಂದರೂ ಸಚಿವರು ಮೌನವಹಿಸಿದ್ದು ಯಾಕೆ ಎಂದರು.
ಸೂಪರ್ ಸೀಡ್ ಮಾಡಿಲ್ಲ ಯಾಕೆ:ಮುಂದುವರಿದು ಅವರು ಇಷ್ಟೆಲ್ಲ ಹಗರಣ ನಡೆದರೂ ಈವರೆಗೂ ಮನ್ ಮುಲ್ ಸೂಪರ್ ಸೀಡ್ ಮಾಡಿಲ್ಲ ಯಾಕೆ.ಶಾಲಾ ಮಕ್ಕಳು ಅಂಗನವಾಡಿ ಮಕ್ಮಳಿಗೆ ಕೊಡುವ ಹಾಲಿನಲ್ಲಿ ವಿಷ ಬೆರೆಸಿದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು.
ಕಲಬೆರಕೆಯಲ್ಲಿ ಎಲ್ಲರ ಪಾತ್ರವಿದೆ. ಎಲ್ಲರಿಗೂ ಮಂತ್ಲೀ ಹೋಗುತ್ತದೆ.ಇಷ್ಟೆಲ್ಲ ನಡೀತಿದ್ರೂ ಜಿಲ್ಲಾಧಿಕಾರಿ ಸಹ ಗಪ್ ಚುಪ್ ಆಗಿದ್ದಾರೆ.ಅವರನ್ನು ಗಪ್ ಚುಪ್ ಆಗಿರಲೆಂದೆ ನೇಮಿಸಿದಂತಿದೆ ಎಂದರು.
ಪ್ರಕರಣವನ್ನು ಪಕ್ಷದಿಂದ ವಿಧಾನಸಭೆಯಲ್ಲು ಸಹ ಪ್ರಶ್ನಿಸಲಾಗುತ್ತದೆ.ಪೋಲಿಸರು ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆಯಿದೆ.ಇದು ಸಿಬಿಐ ತನಿಖೆಗೆ ಸೂಕ್ತವಾದ ಪ್ರಕರಣವಾಗಿದ್ದು.ಜಿಲ್ಲಾ ಉಸ್ತುವಾರಿ ಮಂತ್ರಿ ಈ ಕುರಿತು ಪ್ರತಿಕ್ರಿಯಿಸಬೇಕು ಎಂದರು.
ಗೋಷ್ಡಿಯಲ್ಲಿ ಮಾಜಿ ಶಾಸಕ ಅನ್ನದಾನಿ. ಡಿ.ಸಿ.ತಮ್ಮಣ್ಣ.ಕೃಷ್ಣರಾಜ ಪೇಟೆ ಶಾಸಕ ಎಚ್ ಟಿ ಮಂಜು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ರಮೇಶ್.ಉಪಸ್ಥಿತರಿದ್ದರು


