ಹಾಲಿನ ಪುಡಿ ಹಗರಣ:ಬಿಜೆಪಿಯಿಂದ ಆ ೭ ರಂದು ಮನ್ ಮುಲ್ ಚಲೋ
ಮಂಡ್ಯದ ಮನ್ ಮುಲ್ ನಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಸೇರಿದಂತೆ ಈ ಹಿಂದಿನ ನೇಮಕಾತಿ ಹಗರಣ.ಹಾಲು ನೀರು ಹಗರಣ ಮೆಗಾಡೈರಿ ಹಗರಣಗಳ ಸಮಗ್ರ ತನಿಖೆಗಾಗಿ ಸಿಬಿಐ ಗೆ ಪ್ರಕರಣವನ್ನು ವರ್ಗಾಯಿಸುವಂತೆ ಆಗ್ರಹಿಸಿ ಆಕ್ಟೋಬರ್ ೦೭ ರಂದು ಮನ್ ಮುಲ್ ಚಲೋ ನಡೆಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಸುದ್ದಿಗೋಷ್ಡಿಯನ್ನು ಉದ್ದೇಶಿಸಿ ಮಾತನಾಡಿದ ಅವರು.ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂದಾಗಿನಿಂದ ರೈತ ವಿರೋಧಿಯಾಗಿದೆ.ರೈತರ ಜೀವನಾಡಿ ಮನ್ ಮುಲ್ ನಲ್ಲಿ ಹಾಲಿನ ಪುಡಿ ಕಲಬೆರಕೆ ಪ್ರಕರಣ ರೈತರ ಬದುಕನ್ನು ಸಂಕಷ್ಟಕ್ಕೊಡ್ಡಿದೆ.
ಮನ್ ಮುಲ್ ನಲ್ಲಿ ನಡೆದಿರುವ ಹಗರಣಗಳ ಸಮಗ್ರ ತನಿಖೆಗೆ ಸಿಬಿಐ ಸೂಕ್ತವಾಗಿದ್ದು.ರಾಜ್ಯ ಸರ್ಕಾರದ ತನಿಖೆಗೆ ನಮಗೆ ಯಾವುದೆ ನಂಬಿಕೆ ಉಳಿದಿಲ್ಲ. ಪ್ರಮುಖ ಆರೋಪಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದು ಯಾವುದೆ ನ್ಯಾಯ ಸಿಗುವ ವಿಶ್ವಾಸವಿಲ್ಲ.
ಈ ಹಗರಣ ಮಂಡ್ಯ ಮನ್ ಮುಲ್ ಗೆ ಮಾತ್ರ ಸಿಮೀತವಾಗಿಲ್ಲ.ಇಡೀ ರಾಜ್ಯಕ್ಕೆ ವ್ಯಾಪಿಸಿದೆ.ಇದರಲ್ಲಿ ರೈತರ ಬದುಕಿನ ಪ್ರಶ್ನೆಯಿದೆ.ತನಿಖೆ ದಾರಿ ತಪ್ಪಬಾರದು.ಆದ್ದರಿಂದ ಸಿಬಿಐ ತನಿಖೆಯಿಂದ ಮಾತ್ರವೆ ಹಗರಣದ ಅಸಲಿ ಮುಖ ಬಯಲಿಗೆಳೆಯಲು ಸಾಧ್ಯವಿದೆ.ಮನ್ ಮುಲ್ ಚಲೋದಿಂದ ನ್ಯಾಯ ಸಿಗದಿದ್ದರೆ ರಾಜ್ಯ ನಾಯಕರೊಡಗೂಡಿ ಗೆಜ್ಜೆಲಗೆರೆ ಮನ್ ಮುಲ್ ಗೆ ಮಂಡ್ಯ ನಗರದಿಂದ ಪಾದಯಾತ್ರೆ ನಡೆಸಲಾಗುವುದು ಎಂದರು.
ಮಾಜಿ ಸಚಿವ ಕೆ.ಸಿ.ನಾರಾಯಣ ಗೌಡ ಮಾತನಾಡಿ.ಹಸು ಎಮ್ಮೆ ಸಾಕಿ ಅದರ ಗಂಜಲ ಬಳಿದು ಮಹಿಳೆಯರು ಮನ್ ಮುಲ್ ಕಟ್ಟಿದ್ದಾರೆ.ರೈತರ ಬದುಕಿನ ಪ್ರಶ್ನೆ ಗಂಭೀರವಾಗಿದೆ.ಪಾದಯಾತ್ರೆಯಲ್ಲಿ ಬಿಜೆಪಿಯ ನಾಯಕರಾದ ಆರ್ ಅಶೋಕ್.ವಿಜೇಯೇಂದ್ರ.ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವಾರು ರಾಜ್ಯ ನಾಯಕರು ಭಾಗೀಯಾಗಲಿದ್ದಾರೆ ಎಂದರು.
ಗೋಷ್ಡಿಯಲ್ಲಿ ಅಶೋಕ್ ಜಯರಾಂ.ಎಸ್ ಪಿ ಸ್ವಾಮಿ.ಸಿ.ಟಿ ಮಂಜುನಾಥ್ ಉಪಸ್ಥಿತರಿದ್ದರು


