ಜಿಲ್ಲಾಸ್ಪತ್ರೆಯಲ್ಲಿ ಉದ್ಯಾನವನ ನಾಶಪಡಿಸಿ ಕಟ್ಟಡ ನಿರ್ಮಾಣ ಖಂಡಿಸಿ ದೂರು
ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ರೋಗಿಗಳು ಸಾರ್ವಜನಿಕರಿಗೆ ಗಾಳಿ ಬೆಳಕಿಗೆ ಮೀಸಲಾಗಿದ್ದ ಉದ್ಯಾನವನವನ್ನು ನಾಶಪಡಿಸಿ ಕಟ್ಟಡ ನಿರ್ಮಿಸುತ್ತಿರುವ ಕ್ರಮದ ವಿರುದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಕಾರ್ಯದರ್ಶಿ ಶೋಭಾರವರಿಗೆ ಕನ್ನಡ ಪರ ಸಂಘಟನೆಗಳು ದೂರು ಸಲ್ಲಿಸಿವೆ.
ದೂರಿನಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣವಾಗಿನಿಂದ ಸದರಿ ಸ್ಥಳವನ್ನು ಸಾರ್ವಜನಿಕರ ಗಾಳಿ ಬೆಳಕಿಗೆ ಮೀಸಲಿರಿಸಿ ಉದ್ಯಾನವನವನ್ನು ಅಭಿವೃದ್ದಿಪಡಿಸಲಾಗಿತ್ತು.
ಆದರೆ ಏಕಾಏಕೀ ಅಧಿಕಾರಿಗಳು ಜನಪ್ರತಿನಿಧಿಗಳು ಗುತ್ತಿಗೆದಾರರು ಹಿರಿಯ ನಾಗರೀಕರ ಆರೈಕೆ ಕೇಂದ್ರದ ಹೆಸರಲ್ಲಿ ಕಳೆದ ಫೆಬ್ರವರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಿದರು.
ಆ ಸಂಧರ್ಭದಲ್ಲಿ ಸಂಘಟನೆಗಳ ಪ್ರತಿರೋಧಕ್ಕೆ ಕಾಮಗಾರಿ ಸ್ಥಗಿತಗೊಳಿಸಿದ್ದ ಗುತ್ತಿಗೆದಾರರು ಈಗ ಅಧಿಕಾರಿಗಳು ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಕಾಮಗಾರಿ ಆರಂಭಿಸಿದ್ದಾರೆ.
ಭವಿಷ್ಯದಲ್ಲಿ ಮಂಡ್ಯ ನಗರವನ್ನು ಸುಸಜ್ಜಿತವಾಗಿ ರೂಪಿಸುವ ಬದಲು ಗುತ್ತಿಗೆದಾರರ ಜೇಬು ತುಂಬಿಸುವ ಸಲುವಾಗಿ ನಗರವನ್ನು ಕಾಂಕ್ರೀಟ್ ಸ್ಲಂ ಆಗಿ ರೂಪಿಸಲಾಗುತ್ತಿದೆ.
ಒತ್ತುವರಿಯಾಗಿರುವ ಮೆಡಿಕಲ್ ಕಾಲೇಜಿನ ೧೪ ಎಕರೆ ಭೂಮಿ ತೆರವುಗೊಳಿಸುವಲ್ಲಿ ಸರಕಾರ ಮತ್ತು ಅಧಿಕಾರಿಗಳು ವಿಫಲರಾಗಿದ್ದು.ಒತ್ತುವರಿ ತೆರವಿಗೂ ಜಿಲ್ಲೆಯ ಜನರು ಹೋರಾಟ ಮಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ಆರಂಭಿಸಿರುವ ಕಾಮಗಾರಿ ಸ್ಥಗಿತಗೊಳಿಸಬೇಕು.ಉಸ್ತುವಾರಿ ಸಚಿವರು ಭರವಸೆ ನೀಡಿದಂತೆ ಒತ್ತುವರಿ ತೆರವಿಗೆ ಅಗತ್ಯ ಕ್ರಮವಹಿಸಬೇಕು.
ಈಗಾಗಲೇ ಅಗತ್ಯ ಗಾಳಿ ಬೆಳಕು. ಸಾರ್ವಜನಿಕರು ಕೂರಲು ಸ್ಥಳ ಇಲ್ಲದಂತಾಗಿರುವ ಮಿಮ್ಸ್ ಆವರಣವನ್ನು ಅನಗತ್ಯ ಕಾಮಗಾರಿಗಳಿಂದ ಸಂರಕ್ಷಿಸುವಂತೆ ಹಾಗೂ ಒತ್ತುವರಿಯಾಗಿರುವ ಮೆಡಿಕಲ್ ಕಾಲೇಜಿನ ೧೪ ಎಕರೆ ಭೂಮಿ ವಶಕ್ಕೆ ಪಡೆಯಲು ಕ್ರಮವಹಿಸುವಂತೆ ದೂರಿನಲ್ಲಿ ಕೋರಲಾಗಿದೆ.
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ.ಅಮರ್.ಆಟೋ ಘಟಕದ ವೆಂಕಟೇಶ್. ಗೋವಿಂದರಾಜ್. ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಉಪಸ್ಥಿತರಿದ್ದರು.


