Monday, September 28, 2026
spot_img

ಮೈಶುಗರ್ ಭ್ರಷ್ಟಚಾರ:ಅಧ್ಯಕ್ಷ.ಎಂಡಿ ಪದಚ್ಯುತಿಗೆ ಆಗ್ರಹಿಸಿ ಪ್ರತಿಭಟನೆ

 

ಮೈಶುಗರ್ ಎಂಡಿ ಅಧ್ಯಕ್ಷ ಪದಚ್ಯುತಿಗೆ ಆಗ್ರಹಿಸಿ ಪ್ರತಿಕೃತಿ ದಹನ

ಮೈಶುಗರ್ ಕಾರ್ಖಾನೆಯ ಬಿ ಮಿಲ್ ಅಕ್ರಮ ಮಾರಾಟದ ತನಿಖೆಗೆ ಸಹಕಾರ ನೀಡದ ಮೈಶುಗರ್ ಅಧ್ಯಕ್ಷ ಸಿ‌.ಡಿ ಗಂಗಾಧರ್ ಹಾಗೂ ಎಂ.ಡಿ ಮಂಗಲ್ ದಾಸ್ ಪದಚ್ಯುತಿಗೊಳಿಸುವಂತೆ ರೈತಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಜಂಟಿಯಾಗಿ ಪ್ರತಿಭಟನೆ ನಡೆಸಿದವು.

ನಗರದ ಜೆಸಿ ವೃತ್ತದಲ್ಲಿ ಜಮಾಯಿಸಿದ ಎರಡು ಸಂಘಟನೆಗಳ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮೊದಲಿನಿಂದಲೂ ಮೈಶುಗರ್ ಅಕ್ರಮಗಳ ವಿರುದ್ದ ದನಿ ಎತ್ತಲಾಗಿದೆ.
ನಿಯಮಬಾಹಿರವಾಗಿ ಸರಕಾರದ ಅನುಮತಿಯಿಲ್ಲದೆ ಹದಿನಾರು ಕೋಟಿ ಬೆಲೆ ಬಾಳುವ ಬಿ ಮಿಲ್ ನ್ನು ಮಾರಾಟ ಮಾಡಿದ ಕುರಿತು ಸರ್ಕಾರಕ್ಕೆ ದೂರು ಸಲ್ಲಿಸಿದ ಪರಿಣಾಮ ವಾಣಿಜ್ಯ ಮತ್ತು ಉದ್ದಿಮೆಗಳ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿಯವರು ಈ ಕುರಿತು ತನಿಖೆಗೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ಸಂಬಂದ ಜಿಲ್ಲಾಧಿಕಾರಿಗಳು ತನಿಖಾ ಸಮಿತಿ ರಚಿಸಿದ್ದರೂ ಮೈಶುಗರ್ ಅಧ್ಯಕ್ಷ ಹಾಗೂ ಎಂಡಿ ತನಿಖೆಗೆ ಯಾವುದೆ ಸಹಕಾರ ನೀಡದೆ ತಮ್ಮ ಭಂಡಾಟ ಮುಂದುವರಿಸಿದ್ದಾರೆ.
ಅಧ್ಯಕ್ಷರನ್ನು ಪದಚ್ಯುತಗೊಳಿಸಿ ಎಂ.ಡಿಯನ್ನು ಅಮಾನತ್ತಿನಲ್ಲಿರಿಸಿದರೆ ಮಾತ್ರವೇ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯವಿದೆ.

ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಮೈಶುಗರ್ ಉಳಿವಿಗಾಗಿ ಈರ್ವರನ್ನು ಪದಚ್ಯುತಗೊಳಿಸಿ ತನಿಖಾ ಪ್ರಕ್ರಿಯೆ ಸುಗಮಗೊಳಿಸಬೇಕು ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್‌ಡಿ ಜಯರಾಂ ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲೆಯಲ್ಲಿ ಸಾರ್ವಜನಿಕ ಸ್ವಾಮ್ಯದ ಕಾರ್ಖಾನೆಗಳನ್ನು ರಾಜಕೀಯ ಪುಡಾರಿಗಳು ಮುಳುಗಿಸುತ್ತಿದ್ದಾರೆ.
.ಜಿಲ್ಲೆಯ ಒಂದು ಲಕ್ಷ ಹೈನುಗಾರ ಕುಟುಂಬಗಳ ಬದುಕಿನ ಮೂಲಾಧಾರವಾದ ಮನ್ ಮುಲ್ ನಲ್ಲಿ ಮೆಗಾಡೈರಿ.ನೇಮಕಾತಿ.ಹಾಲು ನೀರು ಹಗರಣದ ನಂತರದ ಹಾಲಿನ ಪುಡಿ ಕಲಬೆರಕೆ ಹಗರಣ ನಡೆದಿದೆ.

ಆದರೆ ಈ ಕುರಿತು ಯಾವುದೆ ಕ್ರಮ ಕೈಗೊಂಡಿಲ್ಲ.ಮೈಶುಗರ್ ನಂತೆ ಮನ್ ಮೂಲ್ ಸಹ ಮುಳುಗುವ ಹಡಗು ಮಾಡಲಾಗಿದೆ.ಈ ಕುರಿತು ಹೈನುಗಾರರು ಪಕ್ಷಭೇಧ ಮರೆತು ಹೋರಾಡುವಂತೆ ಕರೆ ನೀಡಿದರು.

ರೈತಸಂಘದ ಶಿವಳ್ಳಿ ಚಂದ್ರಶೇಖರ್ ಮೈಶುಗರ್ ಹಗರಣಗಳ ಕೊಂಪೆಯಾಗಿದೆ.ಮೈಶುಗರ್ ಆಡಳಿತ ಮಂಡಳಿಯ ಮೇಲಿನ ಹಗರಣಗಳ ತನಿಖೆಗೆ ಸರ್ಕಾರವೇ ನೇಮಿಸಿದ್ದ ಮಹರಾಷ್ಟದ ನಿವೃತ್ತ ಸಕ್ಕರೆ ಆಯುಕ್ತರ ಸಮಿತಿ ವರದಿ ನೀಡಿದ್ದು.ಬಹುತೇಕ ಆರೋಪಗಳು ತನಿಖೆಯಲ್ಲಿ ಸಾಬೀತಾಗಿದ್ದರೂ ಉಸ್ತುವಾರಿ ಸಚಿವರು ಮೌನಕ್ಕೆ ಜಾರಿರುವ ಕಾರಣ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮೈಸೂರು ಅಧ್ಯಕ್ಷ ಹಾಗೂ ಎಂಡಿಯ ಪೋಸ್ಟರ್ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ತೋರಿದರು.

ಕರವೇ ಆಟೋ ಘಟಕದ ವೆಂಕಟೇಶ್ ‌ಸೋಮಶೇಖರ.ಗೋವಿಂದರಾಜ್.ಅಮರ್ ಕಬ್ಬನಹಳ್ಳಿ.ಸುಹಾಸ್.ಮಹದೇವ ಬೂದನೂರು.ಬಸವರಾಜು
ರೈತಸಂಘದ ಜವರೇಗೌಡ.ಗೋಪಾಲಪುರ ಸುರೇಶ್. ನಿಂಗೇಗೌಡ..ಹಾಡ್ಯ ಕೆಂಪೇಗೌಡ ಮೊದಲಾದವರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!