Friday, September 18, 2026
spot_img

ಸೆ 21 ರಂದು ಬೆಂಗಳೂರಿನಲ್ಲಿ ವಿಷ್ಣುವರ್ಧನ್ -೭೫ ಸಂಭ್ರಮ

ಡಾ. ವಿಷ್ಣುಸೇನಾ ಸಮಿತಿ ವತಿಯಿಂದ ಡಾ. ವಿಷ್ಣುವರ್ಧನ್ 75ನೇ ಅಮೃತ ಮಹೋತ್ಸವ ಸಂಭ್ರಮ ಸೆಪ್ಟೆಂಬರ್ 21 ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಡಾಕ್ಟರ್ ವಿಷ್ಣು ಸೇನಾ ಸಮಿತಿಯ ಜಿಲ್ಲಾಧ್ಯಕ್ಷರಾದ ವಿಷ್ಣು ವಿಠ್ಠಲ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಬೆಂಗಳೂರು ನಗರದ ಪುಟ್ಟಣ್ಣ ಚಟ್ಟಿ ಭವನದಲ್ಲಿ ಕಾರ್ಯಕ್ರಮವನ್ನು ನಾಡಿನ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಉದ್ಘಾಟಿಸಲಿದ್ದು ಹಾಗೂ ಎಲ್ಲ ಶಾಸಕರು ಸಚಿವರು ಮತ್ತು ವಿಷ್ಣು ಸೇನೆ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಭಾಗವಹಿಸಲಿದ್ದಾರೆ.

ವಿಷ್ಣುವರ್ಧನ್ ಭಾವಚಿತ್ರದ ಸಹಿತ ಕನ್ನಡ ಬಾವುಟದ ಮೆರವಣಿಗೆ ಭಾವಚಿತ್ರಗಳ ಪ್ರದರ್ಶನ 7,000 ಹೆಚ್ಚು ವಾಹನಗಳ ಜಾಥಾ ನೃತ್ಯ ವೈಭವ ಹಾಗೂ ವಿಷ್ಣುವರ್ಧನ್ ನಟನೆಯ ಸುಮಾರು ಪ್ರಸಿದ್ಧ 15 ಹಾಡುಗಳು ಪ್ರಸಿದ್ಧ ನಟ ನಟಿಯರಿಂದ ನೃತ್ಯ ಪ್ರದರ್ಶನ ದ ಮೂಲಕ ಕಾರ್ಯಕ್ರಮವನ್ನು ರಂಜಿಸಲಿದ್ದಾರೆ ಜೊತೆಗೆ ವಿಷ್ಣುವರ್ಧನ್ ಅವರ ಜೊತೆ ಪರಭಾಷೆಯಲ್ಲಿ ನಟಿಸಿರುವ ನಟರುಗಳು ಕೂಡ ಭಾಗವಹಿಸುವುದು ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತರಲಿದೆ. ಈ ಕಾರ್ಯಕ್ರಮಕ್ಕೆ ನಾಡಿನ ವಿಷ್ಣುವರ್ಧನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸತೀಶ್, ಕೃಷ್ಣ, ಮಹೇಶ್, ಸ್ವಾಮಿ, ಸಂಪತ್ ಕುಮಾರ್ ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!