Tuesday, November 10, 2026
spot_img

ಕರ್ನಾಟಕಕ್ಕು ಬೇಕು ತಮಿಳುನಾಡು ಮಾದರಿ ಅಬಕಾರಿ ನೀತಿ

ತಮಿಳುನಾಡಿನ ವಿಜಯ್ ನೇತೃತ್ವದ ರಾಜ್ಯ ಸರಕಾರ ಅಬಕಾರಿಗೆ ಸಂಬಂದಿಸಿದಂತೆ ಹಲವು ನಿಯಮಗಳನ್ನು ರೂಪಿಸಿದೆ.

ಅದಕ್ಕೆ ಪರಿಸರ ಮತ್ತು ಸಾಮಾಜಿಕ ಕಲ್ಯಾಣ ಸೆಸ್ ಎಂದು ಹೆಸರಿಸಲಾಗಿದೆ.ಇದರ ಪ್ರಕಾರ ನವೆಂಬರ್ 1, 2026 ರಿಂದ ಜಾರಿ. ಈ ಹಿಂದೆ ಮದ್ಯದ ಖಾಲಿ ಬಾಟಲಿಗಳನ್ನು ಮದ್ಯದ ಅಂಗಡಿಗಳಿಗೆ ಹಿಂತಿರುಗಿಸಿದರೆ ಅಂಗಡಿಯವರು ಹತ್ತು ರೂ ವಾಪಸ್ ಮಾಡುತ್ತಿದ್ದರು.

ಈಗ ₹10 ವ್ಯವಸ್ಥೆಯ ಬದಲು, ಪರಿಷ್ಕೃತ ಗರಿಷ್ಠ ಮಾರಾಟ ಬೆಲೆಯಲ್ಲೇ (MRP) ₹10 ಸೆಸ್ ಸೇರಿಸಲಾಗಿದೆ. ಖಾಲಿ ಬಾಟಲಿಯನ್ನು QR ಕೋಡ್ ವ್ಯವಸ್ಥೆ ಹಾಗೂ ಮುಂಬರುವ ರಿವರ್ಸ್ ವೆಂಡಿಂಗ್ ಯಂತ್ರಗಳ ಮೂಲಕ ಹಿಂತಿರುಗಿಸಿ ₹10 ಮರುಪಾವತಿ ಪಡೆಯಬಹುದು.

ಇದಲ್ಲದೆ
ಡಿಜಿಟಲ್ ಮತ್ತು ನಗದು ಪಾವತಿ: ₹1,000ಕ್ಕಿಂತ ಹೆಚ್ಚಿನ ಖರೀದಿಗೆ ಡಿಜಿಟಲ್ ಪಾವತಿ (UPI, ಡೆಬಿಟ್/ಕ್ರೆಡಿಟ್ ಕಾರ್ಡ್) ಕಡ್ಡಾಯ. ₹1,000 ಅಥವಾ ಕಡಿಮೆ ಇದ್ದರೆ ನಗದು ಅಥವಾ ಡಿಜಿಟಲ್ ಎರಡೂ ಆಗಬಹುದು.ಇದರಿಂದ ಮದ್ಯ ಖರೀದಿದಾರರ ವಿವರದ ಜತಗೆ ನಕಲಿ ಮದ್ಯ ಮಾರಾಟಕ್ಕೆ ಬ್ರೇಕ್ ಬೀಳಲಿದೆ.
21 ವರ್ಷದೊಳಗಿನವರಿಗೆ ಮದ್ಯ ಮಾರಾಟ, ಬಾರ್ ಪ್ರವೇಶ ಹಾಗೂ ಅಂಗಡಿ/ಬಾರ್‌ಗಳಲ್ಲಿ ಉದ್ಯೋಗ ಕಟ್ಟುನಿಟ್ಟಾಗಿ ನಿಷೇಧ. ವಯಸ್ಸಿನ ಬಗ್ಗೆ ಸಂಶಯವಿದ್ದರೆ ಮಾರಾಟಗಾರರು ಗುರುತಿನ ಚೀಟಿ ಪರಿಶೀಲಿಸಬೇಕು.
ಚಿಲ್ಲರೆ ಅಂಗಡಿಗಳು ಮತ್ತು ಅವುಗಳಿಗೆ ಹೊಂದಿಕೊಂಡ ಬಾರ್‌ಗಳು ಮಧ್ಯಾಹ್ನ 12 ರಿಂದ ರಾತ್ರಿ 10 ರವರೆಗೆ ಮಾತ್ರ ತೆರೆಯಬೇಕು. ಪರವಾನಗಿ ವಿವರ ಹಾಗೂ ತಮಿಳು–ಇಂಗ್ಲಿಷ್‌ನಲ್ಲಿ ಆರೋಗ್ಯ/ರಸ್ತೆ ಸುರಕ್ಷತಾ ಎಚ್ಚರಿಕೆ (“ಮದ್ಯಪಾನ ಆರೋಗ್ಯಕ್ಕೆ ಹಾನಿಕರ”, “ಸುರಕ್ಷಿತವಾಗಿರಿ – ಕುಡಿದು ವಾಹನ ಚಲಾಯಿಸಬೇಡಿ”) ಪ್ರದರ್ಶಿಸಬೇಕು.
ಬಾರ್ ಮತ್ತು ಪರವಾನಗಿ ಸುಧಾರಣೆ: ಬಾರ್‌ನ ಗರಿಷ್ಠ ಅನುಮತಿತ ವಿಸ್ತೀರ್ಣ ಪರಿಷ್ಕರಣೆ, ಜಿಲ್ಲಾ ಮಟ್ಟದಲ್ಲಿ ಅನುಮೋದನೆ ಸರಳೀಕರಣ, ಹೆಚ್ಚಿನ ತಪಾಸಣೆ ಮತ್ತು ಜಾರಿ.
ವ್ಯಸನ ಮುಕ್ತಿ ಯೋಜನೆ: ಮದ್ಯ ಅವಲಂಬನೆ ತಡೆಯಲು ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ ಯೋಜನೆ ಘೋಷಿಸಲಾಗಿದೆ.

ತಮಿಳು ನಾಡಿನ ಈ ಅಬಕಾರಿ ನೀತಿಯಿಂದ ಕರ್ನಾಟಕವೂ ಸಹ ಸಾಕಷ್ಟು ಗುಣಪಾಠಗಳನನ್ನು ಕಲಿಯುವ ಅವಶ್ಯವಿದೆ.
ತಮಿಳುನಾಡಿನ ಪಾಠ: ಕರ್ನಾಟಕದ ಮದ್ಯ ನೀತಿಗೂ ಬೇಕು ಸ್ಪಷ್ಟತೆ, ಶಿಸ್ತು, ಹೊಣೆಗಾರಿಕೆ
ಮದ್ಯ ಮಾರಾಟ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಆದಾಯ ತರುವ ಕ್ಷೇತ್ರ. ೪೦ ಸಾವಿರ ಕೋಟಿಗೂ ಹೆಚ್ಚಿನ ವರಮಾನ ಅಬಕಾರಿಯಿಂದಲೆ ರಾಜ್ಯಕ್ಕೆ ಲಭ್ಯವಾಗುತ್ತದೆ.ಆದರೆ ಆದಾಯದ ಜೊತೆ ಆರೋಗ್ಯ, ರಸ್ತೆ ಸುರಕ್ಷತೆ, ಪರಿಸರ ಮತ್ತು ಕೌಟುಂಬಿಕ ಬದುಕಿನ ಮೇಲಿನ ಹೊರೆಯನ್ನೂ ಸರ್ಕಾರ ಹೊರಬೇಕು. ನವೆಂಬರ್ 1, 2026 ರಿಂದ ತಮಿಳುನಾಡು ಜಾರಿಗೆ ತಂದ ಹೊಸ ನಿಯಮಗಳು ಈ ಸಮತೋಲನಕ್ಕೆ ಒಂದು ಮಾದರಿ ನೀಡುತ್ತವೆ ಎಂಬುದು ನೀತಿ ವಿಶ್ಲೇಷಕರ ವಾದ. ಕರ್ನಾಟಕ ಇವುಗಳಿಂದ ಕಲಿಯಬೇಕಾದ್ದು ಸಾಕಷ್ಟಿದೆ.
೧. ವಯಸ್ಸಿನ ಗೊಂದಲಕ್ಕೆ ಅಂತ್ಯ ಹಾಡಿ. ಕರ್ನಾಟಕದಲ್ಲಿ ಅಬಕಾರಿ ಕಾಯ್ದೆ ಒಂದು ವಯಸ್ಸು ಹೇಳಿದರೆ, ನಿಯಮಗಳು ಇನ್ನೊಂದು ಹೇಳುತ್ತವೆ. ಇಂಥ ಗೊಂದಲದಲ್ಲಿ ಬಾರ್ ಮಾಲೀಕರು ತಮಗೆ ಅನುಕೂಲವಾದ ವ್ಯಾಖ್ಯಾನ ಆಯ್ದುಕೊಳ್ಳುತ್ತಾರೆ, ಅಪ್ರಾಪ್ತರಿಗೂ ಮದ್ಯ ಸಿಗುತ್ತದೆ. ತಮಿಳುನಾಡಿನಂತೆ 21 ವರ್ಷವನ್ನು ಕಾಯ್ದೆಯಲ್ಲೇ ಸ್ಪಷ್ಟವಾಗಿ ನಮೂದಿಸಿ, ಅಂಗಡಿ, ಬಾರ್ ಪ್ರವೇಶ ಮತ್ತು ಉದ್ಯೋಗಕ್ಕೂ ಅನ್ವಯಿಸಿದರೆ ಜಾರಿ ಸುಲಭವಾಗುತ್ತದೆ.
೨. ಬಾಟಲಿ ಸೆಸ್ ಮತ್ತು ಮರುಬಳಕೆ. ರಸ್ತೆ ಬದಿ, ಕೃಷಿ ಭೂಮಿ ಮತ್ತು ಕಾಡಿನ ಅಂಚಿನಲ್ಲಿ ಒಡೆದ ಮದ್ಯದ ಬಾಟಲಿಗಳು ಕರ್ನಾಟಕದಲ್ಲೂ ಸಾಮಾನ್ಯ ದೃಶ್ಯ. ₹10 ಸೆಸ್ ಹಾಕಿ, ಖಾಲಿ ಬಾಟಲಿ ಮರಳಿಸಿದರೆ ಅದೇ ಮೊತ್ತ ಮರುಪಾವತಿ ಮಾಡುವ QR ಆಧಾರಿತ ವ್ಯವಸ್ಥೆ ಗ್ರಾಹಕರಿಗೆ ಆರ್ಥಿಕ ಪ್ರೋತ್ಸಾಹ ನೀಡುತ್ತದೆ. ಅದು ಕಸ ಕಡಿಮೆ ಮಾಡಿ, ಪರಿಸರ ಸ್ನೇಹಿ ಮರುಬಳಕೆಗೆ ದಾರಿ ಮಾಡುತ್ತದೆ.
೩. ಡಿಜಿಟಲ್ ಪಾವತಿ ಪಾರದರ್ಶಕತೆ. ₹1,000 ಮೇಲಿನ ಖರೀದಿಗೆ ಡಿಜಿಟಲ್ ಪಾವತಿ ಕಡ್ಡಾಯ ಮಾಡಿದರೆ ಮಾರಾಟದ ದಾಖಲೆ ನಿಖರವಾಗುತ್ತದೆ. ಹೆಚ್ಚುವರಿ ದರ ವಸೂಲಿ ಮತ್ತು ಲೆಕ್ಕವಿಲ್ಲದ ನಗದು ವ್ಯವಹಾರಕ್ಕೆ ಕಡಿವಾಣ ಬೀಳುತ್ತದೆ. ಸಣ್ಣ ಮೊತ್ತಕ್ಕೆ ನಗದು ಉಳಿಸಿರುವುದರಿಂದ ಸಾಮಾನ್ಯ ಗ್ರಾಹಕನಿಗೂ ತೊಂದರೆ ಇಲ್ಲ.
೪. ಸಮಯದ ಮಿತಿ ಮತ್ತು ಎಚ್ಚರಿಕೆ ಫಲಕ. ಮಧ್ಯಾಹ್ನ 12 ರಿಂದ ರಾತ್ರಿ 10 ರವರೆಗೆ ಮಾತ್ರ ಮಾರಾಟ ಎಂಬ ನಿಯಮ ತಡರಾತ್ರಿ ಕುಡಿದು ವಾಹನ ಚಲಾಯಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಬೆಂಗಳೂರಿನಂಥ ನಗರದಲ್ಲಿ ಇದು ಬಹಳ ಪ್ರಸ್ತುತ. ಕನ್ನಡ–ಇಂಗ್ಲಿಷ್‌ನಲ್ಲಿ ಎಚ್ಚರಿಕೆ ಫಲಕ ಕಡ್ಡಾಯ ಮಾಡಿದರೆ ಸಂದೇಶ ಸ್ಥಳೀಯರಿಗೆ ನೇರ ತಲುಪುತ್ತದೆ.
೫. ವ್ಯಸನಮುಕ್ತಿ ಕೇಂದ್ರಗಳು. ಮದ್ಯದಿಂದ ಬರುವ ಆದಾಯದ ಒಂದು ಭಾಗವನ್ನು ವ್ಯಸನ ಚಿಕಿತ್ಸೆಗೆ ಮರಳಿ ಹೂಡುವುದು ನೈತಿಕ ಹೊಣೆ. ತಮಿಳುನಾಡು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ತೆರೆಯುವ ಯೋಜನೆ ಘೋಷಿಸಿದೆ. ಕರ್ನಾಟಕದ 224 ಕ್ಷೇತ್ರಗಳಲ್ಲೂ ಅಂಥ ಜಾಲ ರೂಪಿಸಿದರೆ ಗ್ರಾಮೀಣ ಕುಟುಂಬಗಳಿಗೆ ದೊಡ್ಡ ನೆರವಾಗುತ್ತದೆ.
6. ಇದಲ್ಲದೆ ನಿಗದಿಪಡಿಸಿದ ಎಂ ಆರ್ ಪಿಗಿಂತ ಶೇ ೩೦ ರಷ್ಟು ಹೆಚ್ಚುವರಿ ಬೆಲೆಗೆ ಕರ್ನಾಟಕದಲ್ಲಿ ಮದ್ಯ ಮಾರಾಟವಾಗುತ್ತದೆ.ಜೊತೆಗೆ ರೆಸ್ಟೋರೆಂಟ್ ಹೋಟೆಲ್ ಗಳಲ್ಲು ಅನಧಿಕೃತ ಮದ್ಯ ಸರಬರಾಜು ಆಗುತ್ತದೆ. ಇದು ಅಬಕಾರಿ ನಿಯಮಗಳಿಗೆ ವಿರುದ್ದವಾದುದು.ಈ ರೀತಿಯ ಹೆಚ್ಚುವರಿ ಹಣವನ್ನು ಎಂ ಎಂ (ಮಂತ್ಲೀ ಮಾಮೂಲು) ಹೆಸರಲ್ಲಿ ಪ್ರತಿ ಬಾರ್ ವೈನ್ ಷಾಪುಗಳಿಂದ ಸಂಗ್ರಹಿಸಲಾಗುತ್ತದೆ.ಈ ರೀತಿಯಲ್ಲಿ ಸಂಗ್ರಹ ಹಣ ಅಬಕಾರಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ಅಬಕಾರಿ ಮಂತ್ರಿವರೆಗೆ ಸಂದಾಯವಾಗುತ್ತದೆ.ಅದೇ ಕಾರಣಕ್ಕೆ ಅಬಕಾರಿ ಅಧಿಕಾರಿಗಳು ಎಂ ಆರ್ ಪಿ ಜಾರಿಗೆ ಹೆಚ್ಚಿನ ಒತ್ತು ಕೊಡುವುದಿಲ್ಲ.ಈ ಹಿನ್ನೆಲೆಯಲ್ಲಿ ಎಂ ಆರ್ ಪಿ ಕಟ್ಟುನಿಟ್ಟಿನ ಜಾರಿ ಅವಶ್ಯವಿದೆ.ಇದಕ್ಕಾಗಿ ನಾಗರಿಕ ಸಂಘಟನೆಗಳು ದನಿ ಏರಿಸಬೇಕಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!