Wednesday, November 11, 2026
spot_img

ನೀರು ತುಂಬಿಸುವಲ್ಲಿ ಶಾಸಕ ಸಚಿವರಿಗೆ ಕಾಳಜಿಯಿಲ್ಲ:ಬಡಗಲಪುರ ಆಕ್ರೋಶ

“ನೀರು ತುಂಬಿಸುವಲ್ಲಿ ಶಾಸಕ, ಸಚಿವರಿಗೆ ಕಾಳಜಿ ಇಲ್ಲ: ಬಡಗಲಪುರ

 

ಗುಂಡ್ಲುಪೇಟೆ: ‘ಗುಂಡ್ಲುಪೇಟೆ ಭಾಗದ ಕೆರೆಗಳಿಗೆ ನೀರು ತುಂಬಿಸುವಲ್ಲಿ ಶಾಸಕ ಶಾಸಕರು ಮತ್ತು ಸಚಿವರಿಗೆ ಕಾಳಜಿ ಇಲ್ಲ. ಡಿಸೆಂಬರ್‌ಗೆ ನೀರು ಬಿಡುತ್ತೇವೆ ಎಂದಿರುವ ಶಾಸಕರು ಯಾವ ಇಸವಿ ಎಂದು ಸ್ಪಷ್ಟ ಪಡಿಸಬೇಕು’ ಎಂದು ರೈತ ಸಂಘಟನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂತರ್ಜಲ ಕುಸಿತವಾಗಿ ಜನ, ಜಾನುವಾರುಗಳಿಗೆ ತೊಂದರೆಯಾಗಿರುವ ಕಾರಣ ನಮ್ಮ ಸಂಘಟನೆ ತಾಲ್ಲೂಕು ಕಚೇರಿ ಮುಂದೆ ನಡೆಸುತ್ತಿರುವ ಧರಣಿ ನೂರು ದಿನಗಳತ್ತ ಸಾಗಿದೆ. ಆದರೆ ಕ್ಷೇತ್ರದ ಶಾಸಕರು 2025 ಕಳೆದು 2026 ಬಂದರೂ ಮತ್ತೆ ಡಿಸೆಂಬರ್

ಮೊದಲ ವಾರ ಕೆರೆಗಳಿಗೆ ನೀರು ಬಿಡುತ್ತೇವೆ ಎಂದಿದ್ದಾರೆ. ಪೈಪ್‌ಲೈನ್ ಕಾರಣ ಸರ್ಕಾರಕ್ಕೆ ಕಾಳಜಿ ಇಲ್ಲದ ಸಂಕೇತವಾಗಿದೆ. ಆದರೂ ನಾವು ನಮ್ಮ ಬೇಡಿಕೆ ಈಡೇರುವ ತನಕ ಧರಣಿ ಕೈಬಿಡುವ ಮಾತೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪ್ರತಿ ತಾಲ್ಲೂಕಿನ ಸಮಸ್ಯೆಗಳು ಭಿನ್ನವಾಗಿರುವ ಚಾಮರಾಜನಗರ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಕೊಡದ ಜನಪ್ರತಿನಿಧಿಗಳಿಗೆ ಸ್ವತಂತ್ರ ದಿನಾಚ-ರಣೆಯಲ್ಲಿ ಬಾವುಟ ಹಾರಿಸುವ ನೈತಿಕತೆ ಇಲ್ಲ. ಗಾಂಧೀಜಿ ರೂಪಿಸಿದ ಚಳವಳಿಯಂತೆ ಮಹತ್ವ ಹೊಂದಿರುವ ಪ್ರೊ.ಎಂ.ಡಿ.ನಂಜುಂಡಸ್ವಾಮಿಯ-ವರ ರೈತ ಚಳವಳಿಗೆ ಎಲ್ಲರೂ ಪಕ್ಷಾತೀತ ಬೆಂಬಲ ಕೊಡಬೇಕು. ಗುಂಡ್ಲುಪೇಟೆ ಮತ್ತು ಹನೂರು ತಾಲ್ಲೂಕಿನ ಜತೆಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ

ವಿರುದ್ಧ ರೂಪಿಸುವ ಸಂಘಟಿತ ಹೋರಾಟಕ್ಕೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಹಾಲಿನ ದರ ಏರಿಕೆಗೆ ಬೆಂಬಲ: ಹಾಲಿನ ದರದಲ್ಲಿ ಪ್ರತಿ ಲೀಟರ್‌ಗೆ ₹8 ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಶೋಭಾ ಕರಂದ್ಲಾಜೆ, ವಿಜಯೇಂದ್ರ ಸೇರಿದಂತೆ ಕೆಲವರು ಪ್ರತಿಭಟನೆ ನಡೆಸುತ್ತಿರುವು-ದು ಸರಿಯಲ್ಲ. ಹಸು ಸಾಕಾಣಿಕೆ ಮಾಡುವುದು ಸುಲಭದ ಕೆಲಸವಲ್ಲ. ಹಸುಗಳ ನಿರ್ವಹಣೆಗೆ ದಿನವಿಡೀ ಒಬ್ಬರು ಕೆಲಸ ಮಾಡಬೇಕಾಗುತ್ತದೆ. ಹೈನುಗಾರರ ಶ್ರಮ ಮತ್ತು ಉತ್ಪಾದನಾ ವೆಚ್ಚದ ಅರಿವಿಲ್ಲದೆ ಹಾಲಿನ ದರ ಏರಿಕೆ ವಿರೋಧಿಸುವುದು ಸರಿಯಲ್ಲ ಎಂದರು.

ಡೀಸೆಲ್ ಹಾಗೂ ಅಕ್ಕಿ ಬೆಲೆ ಏರಿಕೆಯಾದಾಗ

ಇದೇ ರೀತಿಯಲ್ಲಿ ಹೋರಾಟ ನಡೆಸುತ್ತಾರೆಯೇ. ರೈತರಿಗೆ ಕನಿಷ್ಠ ಆದಾಯದ ಭದ್ರತೆ ಒದಗಿಸುವುದು ಅಗತ್ಯ ಎಂದರು.

ಕಬ್ಬಿಗೆ ಸಮಾನ ನೀತಿ ಜಾರಿಯಾಗಲಿ: ಸರ್ಕಾರ ಬೆಳಗಾವಿ ಭಾಗದ ಕಬ್ಬು ಬೆಳೆಗಾರರಿಗೆ ಮಾತ್ರ ಸೀಮಿತವಾಗಿ ಕೈಗೊಂಡಿರುವ ನಿರ್ಧಾರ ಅವೈ-ಜ್ಞಾನಿಕವಾಗಿದೆ. ರಾಜ್ಯದ ಎಲ್ಲ ಭಾಗಗಳ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಒಂದೇ ರೀತಿಯ ನೀತಿ ಅನ್ವಯವಾಗಬೇಕು. ಸಮಾನ ನೀತಿಯನ್ನು ಕೇಂದ್ರ ರೂಪಿಸಬೇಕು ಎಂದರು.

ಸರ್ವೋದಯ ಪಕ್ಷದಿಂದ ಚುನಾವಣೆ ಕಣಕ್ಕೆ: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ರೈತ ಸಂಘದಿಂದ ತಾಲ್ಲೂಕಿಗೆ ಒಬ್ಬರನ್ನು ಸರ್ವೋದಯ ಪಕ್ಷದಿಂದ

ಕಣಕ್ಕಿಳಿಸುವುದಾಗಿ ತಿಳಿಸಿದರು.

ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಎ.ಎಂ. ಮಹೇಶ್‌ಪ್ರಭು ಮಾತನಾಡಿ, ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ಕೊಡದೆ ಅತಂತ್ರ ಸ್ಥಿತಿ ಉಂಟಾಗಿರುವ ವಿಷಯದಲ್ಲಿ ಅರಣ್ಯ ಸಚಿವರು ಮೊದಲು ಅವರ ಗಡಿ ಗುರುತು ಮಾಡಿಕೊಳ್ಳಬೇಕು. ಸಿ.ಎಂ ಅಧ್ಯಕ್ಷತೆಯಲ್ಲಿ ಸಭೆಕರೆದು ಸಮಸ್ಯೆ ಮುಗಿಸಬೇಕು ಎಂದರು.

ಸಂಘಟನೆ ಜಿಲ್ಲಾಘಟಕದ ಅಧ್ಯಕ್ಷ ಶಿವಪುರ ಮಹದೇವಪ್ಪ, ಮುಖಂಡ ಹಕ್ಕಲಾಪುರ ಕುಮಾರ್, ರಾಜಶೇಖರಪ್ಪ, ಮಲ್ಲಯ್ಯನಪುರ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಕೋಡಹಳ್ಳಿ ಪ್ರಸಾದ್, ಮುಖಂಡ ಮಹೇಶ್, ಮಲ್ಲಣ್ಣ, ನೀಲಮ್ಮ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!