ಕ್ರೀಡಾಂಗಣಾದ ಆವರಣದಲ್ಲಿ ಕನ್ನಡ ಭವನ:ಹೊಸ ಪ್ರಾಸ್ತವನೆಗೆ ಇಬ್ಬಣಗಳ ಸಮ್ಮತ
ಮಂಡ್ಯ ನಗರದ ಒಳಾಂಗಣ ಕ್ರೀಡಾಂಗಣಾದ ಆವರಣದಲ್ಲಿ ಕನ್ನಡ ಭವನ ನಿರ್ಮಿಸುವ ಪ್ರಯತ್ನಕ್ಕೆ ಕ್ರೀಡಾಪಟುಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ನಗರದ ಪ್ರವಾಸಿ ಮಂದಿರದಲ್ಲಿ ಇಬ್ಬಣಗಳ ಸಭೆಯನ್ನು ಸಚಿವ ಚಲುವರಾಯಸ್ವಾಮಿ ಆಯೋಜಿಸಿದ್ದರು.
ಸಭೆಯ ಆರಂಭದಲ್ಲಿ ಮಾತನಾಡಿದ ಸಚಿವರು ಎಸ್ ಎಂ ಕೃಷ್ಣರ ಕಾಲದಿಂದಲೂ ಪರ ವಿರೋಧದ ಕಾರಣದಿಂದ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.ಈಗ ನಾವು ಯಾರೊಂದಿಗೂ ಸಂಘರ್ಷಕ್ಕೆ ಸಿದ್ದರಿಲ್ಲ.ಒಮ್ಮತದ ಸಮ್ಮತಿ ಸೂಚಿಸಿದರೆ ಕನ್ನಡ ಭವನ ಕಟ್ಟಲು ಸಿದ್ದರಿದ್ದೇವೆ.ಇಲ್ಲವಾದಲ್ಲಿ ಶಾಸಕರ ಅನುದಾನವನ್ನು ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ.ಮುಂದಿನ ಮಾರ್ಚ್ ಗೆ ಅನುದಾನ ವಾಪಸ್ ಆಗುವುದರಿಂದ ಈ ನಿರ್ಧಾರ ಅನಿವಾರ್ಯ ಎಂದರು.
ಇದೇ ವೇಳೆ ಮಾತನಾಡಿದ ರೆಡ್ ಕ್ರಾಸ್ ನ ಮೀರಾ ಶಿವಲಿಂಗಯ್ಯ ಈಗಾಗಲೇ ಶಂಕುಸ್ಥಾಪನೆ ಆಗಿರುವುದರಿಂದ ಕ್ರೀಡಾಂಗಣಾದ ಆವರಣದಲ್ಲೆ ಕನ್ನಡ ಭವನ ನಿರ್ಮಿಸುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ ವಾಲಿಬಾಲ್ ಕ್ರೀಡಾಂಗಣಕ್ಕೆ ಹೆಚ್ಚಿನ ಸ್ಥಳಾವಕಾಶ ನೀಡಲಾಗಿದೆ.ಈವರೆಗೆ ಕ್ರೀಡಾಂಗಣಾದ ಭೂಮಿ ಕ್ರೀಡಾ ಇಲಾಖೆಯ ಹೆಸರಿನಲ್ಲಿ ಇರಲಿಲ್ಲ.ಅದನ್ನೆಲ್ಲ ಖಾತೆ ಮಾಡಿದ್ದೇವೆ ಎಂದರು.
ಕ್ರೀಡಾಪಟುಗಳ ಪರವಾಗಿ ಮಾತನಾಡಿದ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ. ೧೯೪೮ ರಲ್ಲಿ ಕ್ರೀಡಾ ಉದ್ದೇಶ ಹಾಗೂ ಸರಕಾರಿ ಶಾಲೆಗಾಗಿ ಭೂ ಸ್ವಾಧೀನಪಡಿಸಲಾಗಿದೆ.ಕಳೆದ ನಾಲ್ಕು ದಶಕಗಳಿಂದ ವಾಲಿ ಬಾಲ್ ತರಬೇತಿ ನಡೆದಿದ್ದು.ಈ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಮಹೇಶ್ವರ್ ರಾವ್ ಒಳಾಂಗಣ ಕ್ರೀಡಾಂಗಣಾಕ್ಕೆ ಆವರಣ ಬೇಲಿ ನಿರ್ಮಿಸಿದ್ದಾರೆ.
ಕಾಲಕಾಲಕ್ಕೆ ಆಗಿ ಹೋದ ಜಿಲ್ಲಾಧಿಕಾರಿಗಳು ಈಗಿನ ಕಲಾಮಂದಿರ.ಹೊಂಬೇಗೌಡ ಕಾನೂನೂ ಕಾಲೇಜಿಗೆ ನಿಯಮಬಾಹಿರವಾಗಿ ಕ್ರೀಡಾ ಭೂಮಿ ಮಂಜೂರು ಮಾಡಿದ್ದಾರೆ.ಸರಕಾರಿ ಖರಾಬಿನಲ್ಲಿನ ಭೂಮಿ ಈಗಿನ ವಿವಿ ರಸ್ತೆಯ ಕಡೆಗಿದೆ.ಆದರೆ ಯಾವುದೆ ನಕ್ಷೇ ಇಲ್ಲದೆ ಒಳಾಂಗಣ ಕ್ರೀಡಾಂಗಣಾದಲ್ಲಿ ಖರಾಬು ಭೂಮಿ ಗುರುತಿಸುವುದು ಸರಿಯಲ್ಲ.
ನಗರ ಕೇಂದ್ರದಲ್ಲಿ ಕ್ರೀಡಾ ಚಟುವಟಿಕೆಗೆ ಇರುವ ಸಿಮೀತ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಇದರ ಬದಲು ಈಗಾಗಲೇ ಶಿಥಿಲವಾಗಿರುವ ಹಳೇಯ ತಾಲೂಕು ಕಚೇರಿ ಇಲ್ಲವೆ ಮಂಡ್ಯ ನಗರಸಭೆಗೆ ಸೇರಿದ ಗಾಂಧಿನಗರದ ನೀರು ಶುದ್ದೀಕರಣದ ಘಟಕದ ೧೩ ಎಕರೆ ಭೂಮಿ ಯಾವುದೆ ಬಳಕೆಗೆ ಬಾರದೆ ಖಾಲಿ ಬಿದ್ದಿದ್ದು.ಇಲ್ಲಿ ಕನ್ನಡ ಭವನ ನಿರ್ಮಿಸುವಂತೆ ಆಗ್ರಹಿಸಿದರು.
ನಗರಸಭೆಗೆ ಸೇರಿದ ೧೩ ಎಕರೆ ಭೂಮಿಗೆ ತಾನೂ ಬೇರೊಂದು ಅಭಿವೃದ್ಧಿ ಪ್ರಸ್ತಾವನೆ ಸಿದ್ದ ಮಾಡಿಕೊಂಡಿದ್ದು.ಅಲ್ಲೀ ಕನ್ನಡ ಭವನಕ್ಕೆ ಸ್ಥಳ ನೀಡಲು ಸಾಧ್ಯವಿಲ್ಲವೆಂದು ಶಾಸಕ ಗಣಿಗ ರವಿಕುಮಾರ್ ತಿಳಿಸಿದರು.ಕಡೇಗೆ ಏನೊಂದು ಯಾವುದೆ ತೀರ್ಮಾನವಾಗದೆ ಸಭೆ ಬರ್ಖಾಸ್ತು ಆಯಿತು.
ಕಡೇಗೆ ಸಭೆಯಿಂದ ಹೊರ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು ಹಾಗೂ ಕ್ರೀಡಾಪಟುಗಳು ನಗರಸಭೆಗೆ ಸೇರಿದ ನೀರು ಶುದ್ದೀಕರಣ ಘಟಕದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ಭೂಮಿ ನೀಡುವಂತೆ ಒಮ್ಮತದ ಮನವಿ ಸಲ್ಲಿಸಲು ಒಮ್ಮತದ ತೀರ್ಮಾನ ಕೈಗೊಂಡರು.
ಈ ಸಂಧರ್ಭದಲ್ಲಿ ಜಿಪಂ ಸಿಇಓ ಕೆ ಆರ್ ನಂದಿನಿ. ಪಣ್ಣೇದೊಡ್ಡಿ ಹರ್ಷ.ಕರವೇ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ. ಅಮರ್ ಕಬ್ಬನಹಳ್ಳಿ.ಗೋವಿಂದರಾಜ್.ವಾಲಿಬಾಲ್ ಅಸೋಸಿಯೇಷನ್ ನ ಸೋಮಶೇಖರ. ಉಮೇಶ್. ಎಂ.ಎಸ್ ಸತ್ಯಾನಂದಾ.ಕರ್ನಾಟಕ ಸಂಘದ ಜಯಪ್ರಕಾಶ್ ಗೌಡ.ಪ್ರೋ ಜಿ.ಟಿ ವೀರಪ್ಪ.ಉಪಸ್ಥಿತರಿದ್ದರು.


