Sunday, November 8, 2026
spot_img

ಪರಿಷ್ಕೃತ ವೆಚ್ಚಕ್ಕೆ ಆಗ್ರಹಿಸಿ 25ರಿಂದ ಕೋಳಿ ಸಾಕಣೆದಾರರ ಮುಷ್ಕರ

ಪರಿಷ್ಕೃತ ವೆಚ್ಚಕ್ಕೆ ಆಗ್ರಹಿಸಿ 25ರಿಂದ ಕೋಳಿ ಸಾಕಣೆದಾರರ ಮುಷ್ಕರ

ಬೆಂಗಳೂರು: ‘ಕೋಳಿ ಸಾಕಣೆ ಪರಿಷ್ಕೃತ ವೆಚ್ಚವನ್ನು ಪಾವತಿಸುವಂತೆ ಇಂಟಿಗ್ರೇಷನ್ ಕಂಪನಿಗಳಿಗೆ ರಾಜ್ಯ ಸರ್ಕಾರ ಕೂಡಲೇ ಸೂಚಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘವು ಇದೇ 25ರಿಂದ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದೆ.

‘ರೈತರು ಮತ್ತು ಕಂಪನಿಗಳ ಒಪ್ಪಂದದನ್ವಯ ಪ್ರತಿ ಕೆ.ಜಿ ಕೋಳಿಗೆ ₹10 ಕನಿಷ್ಠ ಸಾಕಣೆ ವೆಚ್ಚವನ್ನು 6 ತಿಂಗಳ ಹಿಂದೆಯೇ ನಿಗದಿ ಮಾಡಲಾಗಿದ್ದು, ಪಶುಸಂಗೋಪನೆ ಸಚಿವರ ಅನುಮೋದನೆಯನ್ನೂ ಪಡೆಯಲಾಗಿದೆ. ಆದರೆ, ಆದೇಶವನ್ನು ಸರ್ಕಾರ ಇನ್ನೂ ಹೊರಡಿಸಿಲ್ಲ. ಹೀಗಾಗಿ ಅಂದು ರಾಜ್ಯದೆಲ್ಲೆಡೆ ವಿಧಾನಸೌಧ ಚಲೋ ನಡೆಸಲಾಗುವುದು’ ಸಂಘದ ಗೌರವಾಧ್ಯಕ್ಷ ಟಿ. ಯಶವಂತ ಹೇಳಿದ್ದಾರೆ.

‘ನ.25ರಿಂದ ಸಂಜೆ 5 ಗಂಟೆಯಿಂದ ಕೋಳಿ ಮರಿಗಳನ್ನು ಸ್ವೀಕರಿಸುವ ಹಾಗೂ ಬೆಳೆದ ಕೋಳಿಗಳನ್ನು ಕಂಪನಿಗಳಿಗೆ ಪೂರೈಕೆ ಮಾಡುವುದನ್ನು ಸಾಕಣೆದಾರರು ನಿಲ್ಲಿಸಲಿದ್ದಾರೆ’ ಎಂದು ಎಚ್ಚರಿಸಿದ್ದಾರೆ.

‘ಮುಷ್ಕರದಿಂದ ಚಿಕನ್ ಮತ್ತು ಮೊಟ್ಟೆ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಅದನ್ನು ತಪ್ಪಿಸಲು ಪಶು ಸಂಗೋಪನೆ ಇಲಾಖೆ ಆಯುಕ್ತರು ಕೂಡಲೇ ಆದೇಶ ನೀಡಬೇಕು. ಇಂಟಿಗ್ರೇಷನ್ ಕಂಪನಿಗಳ ನೆಪಗಳಿಗೆ ಮಣಿದು ಸಾಕಣೆದಾರರಾದ ರೈತರಿಗೆ ಕಿರುಕುಳ ನೀಡುವುದನ್ನು ತಪ್ಪಿಸಬೇಕು’ ಎಂದಿದ್ದಾರೆ.

‘ಕೋಳಿ ಸಾಕಣೆಯನ್ನು ಕೃಷಿ ಎಂದು ಘೋಷಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕು. ಕೆಎಂಎಫ್ ಮಾದರಿಯಲ್ಲಿ ಕುಕ್ಕುಟ ಸಹಕಾರ ಮಹಾಮಂಡಲ ಅಭಿವೃದ್ಧಿಪಡಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.

ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘವೂ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!