Thursday, September 24, 2026
spot_img

ಮನ್ ಮೂಲ್ ಸಮಗ್ರ ತನಿಖೆಗೆ ವಿವಿಧ ಸಂಘಟನೆಗಳ ಆಗ್ರಹ

ಮನ್ ಮೂಲ್ ಹಗರಣ ಸಮಗ್ರ ತನಿಖೆಗೆ ಆಗ್ರಹ
ಮಂಡ್ಯ ಮನ್ ಮೂಲ್ ನಲ್ಲಿ ನಡೆದಿರುವ ಹಗರಣಗಳ ಸಮಗ್ರ ತನಿಖೆ ನಡೆಸುವಂತೆ ವಿವಿಧ ಕನ್ನಡಪರ ಹಾಗೂ ರೈತಪರ ಸಂಘಟನೆಗಳು ಆಗ್ರಹಿಸಿವೆ.
ನಗರದ ಪ್ರವಾಸಿ ಮಂದಿರದಲ್ಲಿ ಮನ್ ಮುಲ್ ಸಾಲು ಸಾಲು ಹಗರಣ.ಮುಂದೇನು ಎಂಬ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್ ನಾರಯಣ್ ಮನ್ ಮುಲ್ ಹಾಗೂ ಮೈಶುಗರ್ ಜಿಲ್ಲೆಯ ಜೀವನಾಡಿಗಳಾಗಿವೆ.
ಹೈನುಗಾರಿಕೆಯಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ.ಆದರೆ ಮನ್ ಮುಲ್ ಹಗರಣಗಳಿಂದ ರೈತರ ಬದುಕನ್ನು ಅನಿಶ್ಚಿತಗೊಳಿಸಿದೆ.ಯಾವುದೆ ರಾಜಕೀಯ ನಾಯಕರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಯಕರ್ನಾಟಕ ಸಂಘಟನೆಯ ಯೋಗಣ್ಣ ಮಾತನಾಡಿ ಅಸಿಟೇಟ್ ಕಾರ್ಖಾನೆ.ಮೈಶುಗರ್ ಕಾರ್ಖಾನೆಯ ನಂತರ ಭ್ರಷ್ಟರ ಕಣ್ಣು ಈಗ ನಂದಿನಿ ಬ್ರಾಂಡ್ ಮೇಲೆ ಬಿದ್ದಿದೆ.
ರೈತರ ಬದುಕು ಮನ್ ಮುಲ್ ಮೇಲೆ ನಿಂತಿದೆ.ರಾಜ್ಯ ಸರ್ಕಾರ ಯಾವುದೆ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಎಲ್ಲ ರಾಜಕೀಯ ಪಕ್ಷಗಳು ಮನ್ ಮುಲ್  ನ ಸಾಲು ಸಾಲು ಹಗರಣಗಳಿಗೆ ಕೊಡುಗೆ ನೀಡಿವೆ.ಯಾವುದೆ ಹಗರಣಗಳು ಸರಿಯಾದ ದಿಕ್ಕಿನಲ್ಲಿ ತನಿಖೆಯಾಗದೆ ಯಾರೊಬ್ಬರಿಗೂ ಶಿಕ್ಷೆಯಾಗದ ಕಾರಣ ಹಗರಣಗಳು ಸಾಲು ಸಾಲಾಗಿ ಜರುಗುತ್ತಿವೆ.ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲು ರಾಜಕೀಯ ಒತ್ತಡ ಹೇರಿ ತನಿಖೆಯ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆಯೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ಅಭಿಪ್ರಾಯಪಟ್ಟರು.
ಹಿರಿಯ ಸಹಕಾರಿ ಕೃಷ್ಣೇಗೌಡ ಮಾತನಾಡಿ  ಮೆಗಾಡೈರಿ ಹಗರಣದಲ್ಲಿ ಆರೋಪಿತರಿಂದ ೭೦ ಕೋಟಿ ವಸೂಲು ಮಾಡುವಂತೆ ಆದೇಶಿಸಿದ್ದರೂ ಈವರೆಗೂ ವಸೂಲು ಮಾಡಿಲ್ಲ.ಹಗರಣದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭಾಗೀಯಾಗಿರುವುದರಿಂದ ಹಾಲು ಉತ್ಪಾದಕರು ಸಕ್ರಿಯಗೊಳ್ಳದೆ ನ್ಯಾಯ ಪಡೆಯುವುದು ಕಷ್ಟ ಸಾಧ್ಯ ಎಂದರು.
ಸಭೆಯಲ್ಲಿ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆಂಪಮ್ಮ.ರೈತಸಂಘದ ತಾಲೂಕು ಅಧ್ಯಕ್ಷ ಅಣ್ಣಯ್ಯ.
ಆಟೋ ವೆಂಕಟೇಶ್. ಗೋವಿಂದರಾಜ್.ಸೋಮಶೇಖರ.ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಅಭಿ ಒಕ್ಕಲಿಗೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
೧.ಕಳೆದ ಹತ್ತು ವರ್ಷಗಳಿಂದ ಮನ್ ಮುಲ್ ನಲ್ಲಿ ನಡೆದಿರುವ ಮೆಗಾ ಡೈರಿ.ನೇಮಕಾತಿ.ಹಾಲು ನೀರು.ಹಾಲಿನ ಪುಡಿ ಹಗರಣಗಳು ಒಳಗೊಂಡ ಬಹುಕೋಟಿ ಹಗರಣಗಳ ಸಮಗ್ರ ತನಿಖೆಗಾಗಿ ಸಿಬಿಐ ತನಿಖೆಗೆ ನೀಡಬೇಕು
೨.ಹಾಲಿನ ಪುಡಿ ಕಲಬೆರಕೆ ಹಗರಣದ ತನಿಖೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ಯಾವುದೇ ಜನಪ್ರತಿನಿಧಿ ಹಸ್ತಕ್ಷೇಪ ನಡೆಸಬಾರದು
೩.ಪ್ರಾಸ್ತವಿತ ಹಾಲಿನ ದರ ಏರಿಕೆಯ ಸಂಪೂರ್ಣ ಲಾಭವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಬೇಕು.
೪.ಹಗರಣದಲ್ಲಿ ಮನ್ ಮುಲ್ ಅಡಳಿತ ವರ್ಗಕ್ಕೆ ಜೀವಾವಧಿ ಶಿಕ್ಷೆ ವಿಧಿಸಬೇಕು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!