27ರಂದು ಡಾ.ಬಿ .ಆರ್ ರವಿ ಕಾಂತೇಗೌಡ ಸ್ನೇಹ ಬಳಗದಿಂದ ಈಚೆಗೆ ನಿವೃತ್ತರಾದ ಹಿರಿಯ ಪೋಲಿಸ್ ಅಧಿಕಾರಿ ರವಿಕಾಂತೆಗೌಡರಿಗೆ ಅಭಿನಂದನ ಸಮಾರಂಭ ಆಯೋಜಿಸಲಾಗಿದೆ ಎಂದು ನೇಗಿಲಯೋಗಿ ಟ್ರಸ್ಟಿನ ಅಧ್ಯಕ್ಷರಾದ ರಮೇಶ್ ತಿಳಿಸಿದರು .
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಬಿ .ಆರ್ ರವಿ ಕಾಂತೇಗೌಡ ನಿವೃತ್ತಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕರ್ನಾಟಕ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಗೊಂಡಿದ್ದಾರೆ . ಇವರ ಸೇವಾ ಅವಧಿಯಲ್ಲಿ ಕಳಂಕ ರಹಿತವಾಗಿ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ಮಂಡ್ಯ ಜಿಲ್ಲೆಯ ಸಾಹಿತಿಗಳಾದ ಬೆಸಗರಹಳ್ಳಿ ರಾಮಣ್ಣವರ ಪುತ್ರರಾಗಿ ಅಪ್ಪನ ಮಾರ್ಗದಂತೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಆಸಕ್ತಿ ಹೊಂದಿರುವ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.
ನಿವೃತ್ತಿಯಾದ ನಂತರವೂ ಸಮಾಜಕ್ಕೆ ಇಂಥವರ ಸೇವೆ ಅವಶ್ಯಕತೆ ಇದೆ ಅದರಿಂದ ಇವರ ಸ್ನೇಹ ಬಳಗವು ಅಭಿನಂದನ ಸಮಾರಂಭವನ್ನು ಆಯೋಜಿಸಿದೆ ಎಂದರು.
ಸೆಪ್ಟೆಂಬರ್27 ರಂದು ಸಂಜೆ 5:00 ಗಂಟೆಗೆ ಬಿಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಪರಮ ಪೂಜ್ಯ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಶ್ರೀ ಮಾದಾರ ಚೆನ್ನಯ್ಯ ಗುರು ಪೀಠ ಚಿತ್ರದುರ್ಗ
ಮುಖ್ಯ ಅತಿಥಿಗಳಾಗಿ ಗೋಪಾಲ್ ಬಿ . ಹೊಸೂರ್ ಐಪಿಎಸ್ ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್
ಉಮಾ ಪ್ರಶಾಂತ್ ಪೋಲೀಸ್ ಅಧಿಕ್ಷಕರು ಸಿಐಡಿ ಬೆಂಗಳೂರು
ಬಿ.ಕೆ. ಶಿವರಾಮ್ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಪೊಲೀಸ್
ಬಿ. ಕೆ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಕರ್ನಾಟಕ ಸರ್ಕಾರ
ಪ್ರೊಫೆಸರ್. ಎಸ್. ಬಿ ಶಂಕರೇಗೌಡ
ಉಪಸ್ಥಿತಿ ಡಾ. ರವಿಕಾಂತೇಗೌಡ ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕರ್ನಾಟಕ ಸರ್ಕಾರ ಭಾಗವಹಿಸಲಿದ್ದಾರೆ,
ಮಂಡ್ಯ ಜಿಲ್ಲೆಯ ಬೆಸಗರಹಳ್ಳಿ ರಾಮಣ್ಣನವರ ಅಭಿಮಾನಿಗಳು ಹಾಗೂ ಸಮಾಜ ಮುಖಿ ಕೆಲಸದಲ್ಲಿ ತೊಡಗಿರುವ ಎಲ್ಲ ಸ್ನೇಹಿತರು ಮಾಧ್ಯಮ ಮಿತ್ರರು ಕಾರ್ಯಕ್ರಮಕ್ಕೆ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೋಕಾನಂದ, ಮುರುಳಿ, ರಾಕೇಶ್, ದೇವೇಗೌಡ, ಕೃಷ್ಣೆಗೌಡ ಡಾ.ಚಂದ್ರಶೇಖರ್ ಭಾಗವಹಿಸಿದರು


