Friday, May 29, 2026
spot_img

ಮೃತ ಮಹಿಳೆಯರ ಬೆತ್ತಲೆ ಚಿತ್ರ ತೆಗೆದ ಮೆಡಿಕಲ್ ಕಾಲೇಜು ನೌಕರ

ರಾಜ್ಯದ ಸರಕಾರಿ ಶವಾಗಾರಗಳಲ್ಲಿ ಶವ ಪರೀಕ್ಷೆಗೆ ತರುವ ಶವಗಳನ್ನು ವಿದ್ಯಾರ್ಥಿಗಳ ಕಲಿಕೆಗೆ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ನಿಯಮಬಾಹಿರವಾಗಿ ಮಾರಾಟ ಮಾಡಿದ ಪ್ರಕರಣಗಳ ಬೆನ್ನ ಹಿಂದೆಯೆ ಮೃತ ಮಹಿಳೆಯರ ಬೆತ್ತಲೆ ಪೋಟೊಗಳನ್ನು ತೆಗೆಯುತ್ತಿದ್ದ ವಿಕೃತ ಪ್ರಕರಣವೊಂದು ಗಡಿನಾಡು ಬೀದರ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ವರದಿಯಾಗಿದೆ.

*ಬೀದರ್‌ನ ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಸಮಾಜ ತಲೆತಗ್ಗಿಸುವಂತ ಘಟನೆ ಬೆಳಕಿಗೆ ಬಂದಿದೆ.

ಆಸ್ಪತ್ರೆಯ ಶವಾಗಾರದಲ್ಲಿ ಮೃತ ಮಹಿಳೆಯರ ಬೆತ್ತಲೆ ಪೊಟೋ ಸಂಗ್ರಹಿಸುತ್ತಿದ್ದ ಕಾಮುಕ
ಶವಾಗಾರದಲ್ಲಿ ಅಟೆಂಡರ್ ಆಗಿದ್ದ ಮುನೀರ್ ಅಹ್ಮದ್‌ನಿಂದ ಎಂಬುವವನೆ ಈ ವಿಕೃತ ಎನ್ನಲಾಗಿದೆ.

ಹಲವಾರು ವರ್ಷಗಳಿಂದ ಇದೇ ಆಸ್ಪತ್ರೆಯಲ್ಲಿ ಹೊರಗುತ್ತಿಹೆಯಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತದ್ದ ಮುನೀರ್ ಶವ ಪರೀಕ್ಷೆಗೆ ತಂದ ಮಹಿಳೆಯರ ಶವಗಳ ಪೋಟೊಗಳನ್ನು ಮೊಬೈಲ್ ನಲ್ಲಿ ಶೇಖರಿಸುತ್ತಿದ್ದ ಎನ್ನಲಾಗಿದೆ.

ಆರೋಪಿಯ ಮೊಬೈಲ್‌ನಲ್ಲಿ ಮೃತ ಮಹಿಳೆಯರ ಹಲವು ಬೆತ್ತಲೆ ಚಿತ್ರಗಳು ಪತ್ತೆಯಾಗಿದ್ದು.

ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ ಬ್ರಿಮ್ಸ್ ಮುಖ್ಯಸ್ಥ ಪ್ರೊ. ಡಾ. ಮೋಸಿನ್ ಉಲ್ ಹಕ್ ದೂರು ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಅಟೆಂಡರ್ ಮುನೀರ್ ಅಹ್ಮದ್ ಪರಾರಿಯಾಗಿದ್ದಾನೆ.

ಆರೋಪಿಯ ಕೃತ್ಯದಿಂದಾಗಿ ಮಹಿಳೆಯರ ಘನತೆಗೆ ವೈದ್ಯಕೀಯ ಸಂಸ್ಥೆಯ ಗೌಫ್ಯತೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಪ್ರಕರಣ ದಾಖಲಿಸಿಕೊಂಡ ಪೋಲಿಸರು ಮುಂದಿನ ಕ್ರಮ ಜರುಗಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!