ಏಕರೂಪ ಸಮಾನ ಶಿಕ್ಷಣಕ್ಕಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನವಂಬರ್ 28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಇಂಡುವಾಳು ಚಂದ್ರಶೇಖರ್ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಸರ್ಕಾರಿ ಶಾಲೆಗಳು 40,000ಕ್ಕೂ ಹೆಚ್ಚಿವೆ. ಆದರೆ ಸಮಾನ ಗುಣಮಟ್ಟದ ಶಿಕ್ಷಣ ದೊರೆಯದಂತೆ ಇಂದು ಶಾಲೆಗಳು ಮುಚ್ಚುವಂತಹ ಪರಿಸ್ಥಿತಿಗೆ ಸರ್ಕಾರವೇ ಪರೋಕ್ಷವಾಗಿ ಮೂಲಸೌಕರ್ಯಗಳನ್ನು ನೀಡದೆ ಸರ್ಕಾರಿ ಶಾಲೆ ಗಳು ಮುಚ್ಚುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ LKG ಇಂದ ಐದನೇ ತರಗತಿಯವರೆಗೆ ದ್ವಿಭಾಷ ನೀತಿ ಸಿಬಿಎಸ್ಸಿ ಗುಣಮಟ್ಟದ ಶಿಕ್ಷಣವನ್ನು ಮೂಲಭೂತ ಸೌಕರ್ಯವನ್ನು ನೀಡಬೇಕಾಗಿ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿಯೂ 6ನೇ ತರಗತಿಯಿಂದ 12ನೇ ತರಗತಿಯವರೆಗೆ ನವೋದಯ ಮಾದರಿಯ ಸಿಬಿಐಸಿ ಗುಣಮಟ್ಟದ ವಸತಿ ಶಾಲೆ ಶಿಕ್ಷಣ ವನ್ನು ನೀಡಬೇಕು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 80,000 ಹುದ್ದೆಗಳನ್ನು ಭರ್ತಿ ಮಾಡಿ ಸರ್ಕಾರಿ ಶಾಲೆ ಶಿಕ್ಷಕರ ಬೋಧಕ್ಕೆ ತರ ಕೆಲಸಗಳಿಗೆ ನಿಯೋಜಿಸಬೇಕು ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರ ಶಾಲೆಯಲ್ಲಿ ಓದಬೇಕು ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲ ಆವರಣಗಳಲ್ಲಿ ಕಟ್ಟಡಗಳಲ್ಲಿ ನಡೆದಿರುವ ಕಳಪೆ ಗುಣಮಟ್ಟವನ್ನು ಎಸ್ಐಟಿ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಶಾಸಕರ ಚೀಲಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸಮಾನ ಶಿಕ್ಷಣ ವೇದಿಕೆಯ
ಸಂತೋಷ್ ರವರು ಮಾತನಾಡಿ ರಾಜ್ಯದ ಎಸ್ಡಿಎಂಸಿಗಳ 40,000 ಅಧ್ಯಕ್ಷರು ಒಳಗೊಂಡಂತೆ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ರೀತಿಯಲ್ಲಿ ಏಕರೂಪ ಸಮಾನ ಶಿಕ್ಷಣಕ್ಕಾಗಿ ಅನಿರ್ದಿಷ್ಟ ಅವಧಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.
ಪ್ರತಿಯೊಂದು ಜಿಲ್ಲೆಯಲ್ಲೂ ಈ ವಿಷಯಗಳ ಬಗ್ಗೆ ಚರ್ಚಿಸಿ ಹೆಚ್ಚಿನ ಪ್ರಮಾಣದಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲು ಪ್ರಚಾರ ಮಾಡುತ್ತಿದ್ದೇವೆ ಈ ಹೋರಾಟವು ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಎಂದು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಕೀಳಗಟ್ಟ ನಂಜುಂಡಯ್ಯ ಬನ್ನೂರ್ ನಾರಾಯಣ್ ತುಮಕೂರು ಯೋಗಾನಂದಾ ಉಪಸ್ಥಿತರಿದ್ದರು.


