30ರ ಮಹಿಳೆಗೆ ಒಂಬತ್ತನೇ ಮದುವೆ
ಹಣ ಸುಲಿಗೆ ಚಾಳಿಗೆ ಬಿದ್ದ ಪತ್ನಿ–ಆರೋಪ 7ನೇ ಗಂಡನಿಗೆ ಮುಕ್ತಿ
ಬೆಂಗಳೂರು: ‘ಪತ್ನಿಯ ಕುಕೃತ್ಯದಿಂದ ಏಳನೇ ಗಂಡನಾಗಿ ಮೋಸ ಹೋಗಿದ್ದೇನೆ. ನನ್ನ ವಿರುದ್ಧ ಕ್ರೌರ್ಯ ಮತ್ತು ಕಿರುಕುಳದ ಗುರುತರವಾದ ಸುಳ್ಳು ಆರೋಪ ಹೊರಿಸಿದ್ದಾಳೆ. ಎಂಬ ಪತಿಯೊಬ್ಬರ ಅಹವಾಲಿಗೆ ಕಿವಿಯಾಗಿರುವ ಹೈಕೋರ್ಟ್ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ.
‘ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 498ಎ (ವಿವಾಹಿತ ಮಹಿಳೆಯ ವಿರುದ್ಧ ಕ್ರೌರ್ಯ) ಅಡಿಯಲ್ಲಿ ನನ್ನ ವಿರುದ್ಧದಾಖಲಾಗಿರುವ ದೋಷಾರೋಪ ಪಟ್ಟಿ ರದ್ದುಪಡಿಸ ಬೇಕು’ ಎಂದು ಕೋರಿ ಹೊಸಪೇಟೆಯ ರಾಜಕಾರಣಿ ರಾಜಾ ಹುಸೇನ್ (47) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು
ಅರ್ಜಿದಾರರ ವಿರುದ್ಧ ಪತ್ನಿ ಮಾಡಿರುವ ಆರೋಪಗಳು ವಿಚಾರಣೆಗೆ ಅಗತ್ಯವಾದ ನಿರ್ದಿಷ್ಟ ಮತ್ತು ವಾಸ್ತವಿಕ ಅಡಿಪಾಯವನ್ನೇ ಹೊಂದಿಲ್ಲ. ಇಂತಹ ಟೊಳ್ಳು ದೂರಿಗೆ ಪ್ರಾಸಿಕ್ಯೂಷನ್ ಮಣೆ ಹಾಕಿರುವುದು ಸಮರ್ಥನೀಯವಲ್ಲ ನ್ಯಾ.ಎಂ.ನಾಗಪ್ರಸನ್ನ
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಸಿ.ಪರಮೇಶ್ವರಪ್ಪ, ‘ಪ್ರತಿವಾದಿ ಪತ್ನಿ ತಬಸ್ಸುಮ್ (30) ಮದುವೆಯಾಗುವುದು, ಕುಟುಂಬದಲ್ಲಿ ಬಿರುಕು ಮೂಡಿಸುವುದು, ಪ್ರಕರಣ ಗಳನ್ನು ಹೂಡುವುದು, ಅವುಗಳನ್ನು
ಕೌಟುಂಬಿಕ ಕ್ರೌರ್ಯದ ಆರೋಪ
ಉಡುಪಿಯ ಮೀನು ಮಾರುಕಟ್ಟೆ ಬಳಿ, ‘ಹೀನಾ ಎಂಟರ್ಪ್ರೈಸಸ್’ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿರುವ ತಬಸ್ಸುಮ್ ಮೊದಲ ಮದುವೆ 2004ರಲ್ಲಿ ನಡೆದಿತ್ತು. ಆಗ ಅವರಿಗೆ 16 ವರ್ಷ. ಪರಸ್ಪರರ ಸ್ನೇಹದ ಪರಿಣಾಮ ತಬಸ್ಸುಮ್ ಅವರನ್ನು ರಾಜಾ ಹುಸೇನ್ 2022ರ ಜನವರಿ 13ರಂದು ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಸ್ವಲ್ಪ ಕಾಲ ದಂಪತಿ ಮತ್ತು ಅರ್ಜಿ ದಾರರ ಕುಟುಂಬದ ಸದಸ್ಯರು ಒಂದೇ ಮನೆಯಲ್ಲಿ ವಾಸವಾಗಿದ್ದರು.
ಇತ್ಯರ್ಥಪಡಿಸುವುದು ಮತ್ತು ಅದರಿಂದ ಹಣ ಗಳಿಸುವುದನ್ನು ಚಾಳಿಯನ್ನಾಗಿ ಮಾಡಿಕೊಂಡಿದ್ದಾರೆ. ಈಗಾಗಲೇ ಆಕೆ ಒಂಬತ್ತು ಬಾರಿ ಮದುವೆಯಾಗಿದ್ದಾರೆ’ ಎಂದು ದೂರಿದ್ದರು.
ಈ ದೂರನ್ನು ಅಲ್ಲಗಳೆದಿದ್ದ ತಬಸ್ಸುಮ್ ಪರ ವಕೀಲರು, ‘ಅರ್ಜಿದಾರರು ಪ್ರಕರಣಕ್ಕೆ ಸಂಬಂಧಿಸಿ ದಂತೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಕೆಲವು ವಿವಾಹ ಪ್ರಮಾಣ ಪತ್ರಗಳು ನಕಲಿ ಇವೆ’ ಎಂದು ಪ್ರತಿಪಾದಿಸಿದರು.
ವಾದ-ಪ್ರತಿವಾದ ನ್ಯಾಯಪೀಠ, ವಿವಾಹ ಆಲಿಸಿದ ‘ಒಬ್ಬರು ಹಲವು ಮಾಡಿಕೊಂಡಿದ್ದಾರೆ ఎంబ ಕಾರಣದಿಂದಲೇ ಅವರ ಚಾರಿತ್ರ್ಯದ ಮೇಲೆ ದೋಷಾರೋಪ ಹೊರಿಸಲಾಗದು ಮತ್ತು ಒಬ್ಬ ಮಹಿಳೆ ತನ್ನ ಹಿಂದಿನ ಪತಿಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದಾಳೆ ಎಂಬ ಕಾರಣಕ್ಕಾಗಿಯೇ, ಆಕೆ ನಂತರದಲ್ಲಿ ಸಲ್ಲಿಸುವ ದೂರು ಪರಿಗಣನೆಗೆ ಅರ್ಹವಲ್ಲ ಎಂಬುದನ್ನು
ಕೌಟುಂಬಿಕ ಮನಃಸ್ತಾಪ ಉಂಟಾದ ಕಾರಣ ತಬಸ್ಸುಮ್ ರಾಜಾ ಹುಸೇನ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಅದೇ ವರ್ಷದ ಜುಲೈನಲ್ಲಿ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ರಾಜಾ ಹುಸೇನ್ ವಿರುದ್ಧ ಐಪಿಸಿ ಕಲಂ 498ಎ ಅಡಿಯಲ್ಲಿ ಉಡುಪಿಯ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯಕ್ಕೆ 2023ರ ಏಪ್ರಿಲ್ 3ರಂದು ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಅಷ್ಟಕ್ಕೂ, ‘ರಾಜಾ ಹುಸೇನ್ ಮಂಡಿಸಿರುವ ದಾಖಲೆಗಳನ್ನು ಪರಿಶೀಲಿಸಿದರೆ ಇವರು ತಬಸ್ಸುಮ್ ಅವರ ಏಳನೇ ಪತಿ ಎಂಬುದು ವೇದ್ಯ ವಾಗುತ್ತದೆ ಹಾಗೂ 2023ರ ನಂತರ ಎಂಟು ಮತ್ತು ಒಂಬತ್ತನೇ ಲಗ್ನವನ್ನೂ ಮಾಡಿಕೊಂಡಿದ್ದಾರೆ ಎಂಬುದರ ಪುರಾವೆಗಳು ಅರ್ಜಿದಾರರ ವಾದಕ್ಕೆ ಮಹತ್ವ ಒದಗಿಸುತ್ತವೆ’ ಎಂದು ಉಲೇಖಿಸಿದೆ.


