ಮುಂಬರುವ ಬಜೆಟ್ಟಿನಲ್ಲಿ ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಹಾಗೂ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರಲು ರಾಜ್ಯ ಸರಕಾರವನ್ನು ಒತ್ತಾಯಿಸಿ ಇಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನರಸಿಂಹ ಮೂರ್ತಿಯವರಿಗೆ ಮಂಡ್ಯ ಜಿಲ್ಲಾ ಪೌರಕಾರ್ಮಿಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಜಿಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪೌರಕಾರ್ಮಿಕರು.
ರಾಜ್ಯ ಕಾಂಗ್ರೆಸ್ ಸರಕಾರ ಚುನಾವಣೆ ಸಂಧರ್ಭದಲ್ಲಿ ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಘೋಷಿಸಿತ್ತು.
ಅದರಂತೆ ರಾಜ್ಯ ಸರಕಾರ ಬಾಕೀ ಉಳಿದಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು.ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರುವಂತೆ ಆಗ್ರಹಿಸಿದರು.
ಮುಂದುವರಿದು
ಮುಂಬರುವ ಮಂಡ್ಯ ನಗರಸಭೆಯ ಬಜೆಟ್ನಲ್ಲಿ ನಗರವನ್ನು ಸ್ವಚ್ಛಗೊಳಿಸಿ, ಅಂದಗೊಳಿಸಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಬೇಡಿಕೆಗಳನ್ನು ಸೇರ್ಪಡೆಗೊಳಿಸುವಂತೆ ಮತ್ತು ಈ ಸಂಬಂಧ ಒಂದು ಸಭೆ ಆಯೋಜಿಸುವಂತೆ ಹಾಗೂ ಶೇ24.1ರ ನಿಧಿಯಲ್ಲಿ ಶೇ.20ರಷ್ಟು ಹಣವನ್ನು ಪೌರಕಾರ್ಮಿಕರ ಅಭಿವೃದ್ಧಿಗೆ ವಿನಿಯೋಗಿಸಲು ಸರಕಾರದ ಆದೇಶವಿದ್ದರೂ ಅದು ಜಾರಿಗೆ ಬಂದಿಲ್ಲ. ಅಧಿಕಾರಿಗಳು ಪೌರಕಾರ್ಮಿಕರ ಅವಶ್ಯಕತೆ ಬದಲು ತಮಗೆ ಬೇಕಾದ್ದನ್ನು ಬಜೆಟ್ನಲ್ಲಿ ಸೇರ್ಪಡೆಗೊಳಿಸುವ ಪದ್ದತಿ ಔಚಿತ್ಯಪೂರ್ಣವಾಗಿಲ್ಲ ಎಂದು ಆಕ್ಷೇಪಿಸಿದರು.
ಈ ಕೆಳಗಿನ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ನಗರಸಭೆ ಬಜೆಟ್ಟಿನಲ್ಲಿ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದರು.
1. ಪೌರಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೆ ಶಾಲಾ ಕಾಲೇಜು ಶುಲ್ಕ ಭರಿಸಬೇಕು.
ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ನೀಡಬೇಕು.
ಪೌರಕಾರ್ಮಿಕರ ಮನೆಗಳ ದುರಸ್ತಿಗೆ ಹಣ ಮೀಸಲಿಡಬೇಕು.
3. ಎಲ್ಲ ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಆರೋಗ್ಯ ವಿಮೆ ನೀಡಬೇಕು.
4. ಅರ್ಹ ಅಭ್ಯರ್ಥಿಗಳು ಇಲ್ಲದ ಸ್ಥಳೀಯ ಸಂಸ್ಥೆಗಳಿಗೆ ಪೌರಕಾರ್ಮಿಕರನ್ನು ನೇಮಕಗೊಳಿಸಿ ನಿಯೋಜಿಸಲು ಅವಕಾಶ
ಇದ್ದರು ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ. ಇದರಿಂದ ಪೌರಕಾರ್ಮಿಕರು ನೇಮಕಾತಿಯಿಂದ ವಂಚಿತರಾಗುವಂತಾಗಿದೆ.
5. ಬಾಕಿ ಉಳಿದಿರುವ ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ಮತ್ತು ಈಗಾಗಲೇ ಗೃಹಭಾಗ್ಯ ಯೋಜನೆಯಡಿ
ನಿರ್ಮಾಣಗೊಂಡಿರುವ ಮನೆಗಳನ್ನು ಪೌರಕಾರ್ಮಿಕರಿಗೆ ಹಂಚಿಕೆ ಮಾಡಲು ಕ್ರಮವಹಿಸಬೇಕು.
6. ಅರ್ಹ ಸ್ವಚ್ಚತಾ ಸಿಬ್ಬಂದಿಗೆ ಸ್ಥಳೀಯ ಸಂಸ್ಥೆಗಳಿಂದ ಸಫಾಯಿ ಕರ್ಮಚಾರಿ ಗುರುತಿನ ಚೀಟಿ ನೀಡಬೇಕು.
ನಿವೇಶನರಹಿತ ಪೌರಕಾರ್ಮಿಕರಿಗೆ ನಿವೇಶನ ವಿತರಿಸಲು ಭೂಮಿ ಗುರುತಿಸಬೇಕು.
7 ಎಲ್ಲ ಹೊರಗುತ್ತಿಗೆ ಚಾಲಕರು ಲೋಡರ್ಸ್ ಕ್ಲೀನರ್ಸ್ ಯೂಜಿಡಿ ಕಾರ್ಮಿಕರು.ನೀರುಗಂಟಿಗಳುಸ್ಯಾನಿ ಟರಿ ಸೂಪರ್ ವೈಸರು.ನೆಲಭರ್ತಿ ಕಾರ್ಮಿಕರು.ಬೀದಿ ದೀಪ ನಿರ್ವಾಹಕರು ಸ್ಮಶಾನ ಕಾವಲುಗಾರರನ್ನು ನೇರಪಾವತಿಗೆ ತರುವ ಘೋಷಣೆ ಹೊರಡಿಸಬೇಕು.
ಈ ಎಲ್ಲ ಬೇಡಿಕೆಗಳ ಅನುಷ್ಠಾನದ ಕುರಿತು ಶೀಫ್ರವಾಗಿ ಅಧಿಕಾರಿಗಳು ಮತ್ತು ಪೌರಕಾರ್ಮಿಕರ ನಡುವಿನ ಜಂಟಿ ಸಭೆಯನ್ನು ಆಯೋಜಿಸುವಂತೆ ಒತ್ತಾಯಿಸಿದರು.
ಹೋರಾಟದ ನೇತೃತ್ವವನ್ನು ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ. ಜಿಲ್ಲಾಧ್ಯಕ್ಷ ಎನ್ ನಾಗರಾಜು.ಶಿವಕುಮಾರ. ತಂಗ.ರಾಜೇಶ.ಬನ್ನಯ್ಯ.ಲಿಂಗಮಯ್ಯ. ಮಹದೇವ.ರಾಜೂಗೌಡ.ಎಸ್.ಕೆ. ವಹಿಸಿದ್ದರು.
ಮನವಿ ಸ್ವೀಕರಿಸಿದ ಯೋಜನಾ ನಿರ್ದೇಶಕರು ನಾಳೆ ಈ ಸಂಬಂದ ಸಭೆ ಆಯೋಜಿಸಿ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.


