ಪ್ರೋತ್ಸಾಹಿತ ಜಾಹೀರಾತು ಹೆಚ್ಚಳ:ವಾರ್ತಾ ಇಲಾಖೆ ಆಯುಕ್ತ ಕಳವಳ
ಪ್ರೋತ್ಸಾಹಿತ ಜಾಹೀರಾತುಗಳು ನೈಜ ಪತ್ರಿಕೋದ್ಯಮವನ್ನು ಬೆಂಬಲಿಸುವುದಕ್ಕಾಗಿ ರೂಪಿಸಿದ್ದು ಆದರೆ ಅದು ಸರಿಯಾದ ದಿಕ್ಕಿನಲ್ಲಿ ಸಾಗದಿರುವುದು ಸ್ಪಷ್ಟವಾಗಿದೆ ಎಂದು ವಾರ್ತಾ ಇಲಾಖೆಯ ಆಯುಕ್ತ ಎಂ.ಎನ್ ಅನುಚೇತ್ ಕಳವಳ ವ್ಯಕ್ತಪಡಿಸಿದ್ದರು.
ರಾಜ್ಯ ವಾರ್ತಾ ಇಲಾಖೆಯಲ್ಲಿ ಸೇವಾ ಪೋರ್ಟಲ್ ತೊಡಕುಗಳ ಕುರಿತು ಪಿಐಬಿ ಆಯೋಜಿಸಿದ್ದ ಸಭೆಯಲ್ಲಿ ಪತ್ರಕರ್ತರನ್ಮುಉದ್ದೇಶಿಸಿ ಮಾತನಾಡಿದ ಅವರು
ಪತ್ರಿಕೋದ್ಯಮವನ್ನೆ ವೃತ್ತಿಯಾಗಿಸಿಕೊಂಡವನ್ನು ಪ್ರೋತ್ಸಾಹ ಜಾಹೀರಾತುಗಳನ್ನು ಜಾರಿಗೆ ತರಲಾಯಿತು.
ಆದರೆ ಈಗ ವ್ಯತಿರಿಕ್ತ ಪರಿಣಾಮಗಳು ಕಾಣಿಸತೊಡಗಿವೆ. ೨೦೨೨ ರಲ್ಲಿ ಪ್ರೋತ್ಸಾಹಿತ ಜಾಹೀರಾತುಗಳಿಗಾಗಿ ರಾಜ್ಯ ಸರ್ಕಾರ ೪೪ ಕೋಟಿ ಬಿಡುಗಡೆ ಮಾಡಿದರೆ ಈಗದು ೮೯ ಕೋಟಿ ತಲುಪಿದೆ.
ಕಾರಣ ಪ್ರೋತ್ಸಾಹಿತ ಜಾಹೀರಾತುಗಳಿಗಾಗಿಯೆ ಪತ್ರಿಕೆಗಳನ್ನು ಆರಂಭಿಸುವ ಪ್ರವೃತ್ತಿ ಶುರುವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗುಣಮಟ್ಟದ ಪತ್ರಿಕೆಗಳು ಈಗಲೂ ಸಹ ಪ್ರಕಟಗೊಳ್ಳುತ್ತಿವೆಯಾದರೂ ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ.ಅದಕ್ಕಾಗಿ ಮಾಧ್ಯಮ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.
ಮುಂದುವರಿದು ಈಗ ಮೊಬೈಲ್ ಹಿಡಿದ ಎಲ್ಲರು ಪತ್ರಕರ್ತರು ಎಂದಾಗಿಬಿಟ್ಟಿದೆ.ಸೋಷಿಯಲ್ ಮೀಡಿಯಾ ಪರಿಣಾಮ ಮೊಬೈಲ್ ಹೊಂದಿರುವ ಎಲ್ಲರು ಪತ್ರಕರ್ತರು ಎಂದೇ ಕರೆದುಕೊಳ್ಳುತ್ತಾರೆ.ನಿಜವಾದ ಪತ್ರಕರ್ತ ಯಾರು ಎಂಬುದನ್ನು ನಿರ್ಧರಿಸಲು ಒಂದು ಗಂಭೀರ ಚರ್ಚೆಯಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.


