Tuesday, October 27, 2026
spot_img

ಮೈಶುಗರ್ ಅಕ್ರಮ ;ಕ್ರಮಕ್ಕೆ ಆಗ್ರಹಿಸಿ ಸಿಎಂ ಆಗಮನದಂದು ಪ್ರತಿಭಟನೆ ಎಚ್ಚರಿಕೆ

 

ಮೈಶುಗರ್ ತನಿಖಾ ವರದಿ ಜಾರಿಗೆ ಆಗ್ರಹಿಸಿ ಆಕ್ಟೋಬರ್ 31 ರಂದು ಪ್ರತಿಭಟನಾ ಧರಣಿ

ಮೈಶುಗರ್ ಕಾರ್ಖಾನೆಯಲ್ಲಿ ನಡೆದಿರುವ ಅಕ್ರಮ ಹಾಗೂ ಅವ್ಯವಹಾರಗಳ ಸಂಬಂದ ಸರಕಾರ ನೇಮಿಸಿದ್ದ ತನಿಖಾ ಸಮಿತಿಯ ವರದಿ ಅನ್ವಯ ಅಗತ್ಯ ಕ್ರಮ ಜರುಗಿಸಲು ಮುಖ್ಯಮಂತ್ರಿಗಳಿಗೆ ಆಗ್ರಹಿಸಿ ಆಕ್ಟೋಬರ್31 ರಂದು ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ( ಸಂಜಯ) ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ತಿಳಿಸಿದರು.

 

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೆಶಿಸಿ ಮಾತನಾಡಿದ ಅವರು.

ಮೈಶುಗರ್ ಅಕ್ರಮಗಳ ತನಿಖೆಗೆ ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತ ಗಾಯಕವಾಡ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ಸಮಿತಿಯು ವರದಿಯನ್ನು ಸಲ್ಲಿಸಿ ಬಹುತೇಕ ಅಕ್ರಮಗಳು ಸಾಬೀತಾಗಿವೆ.ಸಮಿತಿಯು ಕಾರ್ಖಾನೆಯ ಅಭಿವೃದ್ದಿಗಾಗಿ ಹಲವು ಸುಧಾರಣಾ ಕ್ರಮಗಳನ್ನು ತನ್ನ ವರದಿಯಲ್ಲಿ ಮಂಡಿಸಿದೆ.

ಆದರೆ ವರದಿಯ ಜಾರಿಗೆ ಕ್ರಮವಹಿಸದ ರಾಜ್ಯ ಸರಕಾರವೇ ಮೈಶುಗರ್ ಅಕ್ರಮಗಳಿಗೆ ಕುಮ್ಮಕ್ಕು ನೀಡಿ ಸಾರ್ವಜನಿಕ ಉದ್ದಿಮೆಯೊಂದರ ಅಧಪತನಕ್ಕೆ ತಾನೇ ನೇತೃತ್ವ ವಹಿಸಿದೆ ಎಂದು ಆರೋಪಿಸಿದರು.

ಬಿ ಮಿಲ್ ನ್ನು ಗುಜರಿ ಲೆಕ್ಕದಲ್ಲಿ ಅಕ್ರಮವಾಗಿ ಮಾರಾಟ ಮಾಡಿದ ಸಂಬಂದ ರೈತ ಹಾಗೂ ಕನ್ನಡ ಸಂಘಟನೆಗಳ ತೀವ್ರ ಹೋರಾಟದ ಕಾರಣಕ್ಕೆ ಮಣಿದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಿದೆ.

ಈವರೆಗೂ ತನಿಖೆಗೆ ಸಹಕರಿಸದ ಮೈಶುಗರ್ ಎಂ.ಡಿ ಹಾಗೂ ಅಧ್ಯಕ್ಷರು ಯಾವ ರಾಜಕೀಯ ಬೆಂಬಲದಿಂದ ಜಿಲ್ಲಾಧಿಕಾರಿಯ ಪರೀಶೀಲನೆಗೆ ಅವಕಾಶವಿಯದೆ ಧಾರ್ಷ್ಯ ತೋರಿದ್ದಾರೆ ಎಂಬುದು ಜಿಲ್ಲೆಯ ಜನರಿಗೆ ತಿಳಿದಿದೆ.
ಮಂಡ್ಯ ಜಿಲ್ಲಾಧಿಕಾರಿಗಳು ಅಸಹಾಯಕರಂತೆ ವರ್ತಿಸದೆ ಕಾನೂನುಬದ್ದ ಅಧಿಕಾರ ಚಲಾಯಿಸಿ ಬಿ ಮಿಲ್ ಅಕ್ರಮ ಮಾರಾಟದ ವರದಿಯನ್ನು ಸಲ್ಲಿಸಬೇಕು.ಹೈಕೋರ್ಟ್ ಆದೇಶದಂತೆ ನಾಗರಾಜಪ್ಪ ಆಸ್ತಿ ಮುಟ್ಟುಗೋಲಿಗೆ ಕ್ರಮವಹಿಸಬೇಕು.
ಕಾರ್ಖಾನೆಯ ಭವಿಷ್ಯದ ದೃಷ್ಟಿಯಿಂದ ಹಾಲೀ ಅಧ್ಯಕ್ಷ ಹಾಗೂ ಎಂಡಿಯನ್ನು ವಜಾಗೊಳಿಸಿ ತನಿಖೆಗೆ ಅನುವು ಮಾಡಿಕೊಡಬೇಕಿದೆ ಎಂದರು.

ಪೂರ್ಣಪ್ರಮಾಣಾದ ಐಎಎಸ್ ಅಧಿಕಾರಿಯನ್ನು ಆಡಳಿತ ವ್ಯವಸ್ಥಾಪಕರಾಗಿ ನೇಮಿಸಿ ನಿಯಮಬದ್ದ ನಿರ್ವಹಣೆಯನ್ನು ಖಚಿತಪಡಿಸುವ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ತೋರಬೇಕಿದೆ. ಕಾರ್ಖಾನೆಗೆ ಕಬ್ಬು ಸಾಗಿಸುವ ಎತ್ತಿನ ಗಾಡಿಗಳಿಗೆ ಅಗತ್ಯ ವಿಮೆ ನೀಡಬೇಕು.ಚಾಲಕರು ಎತ್ತಿನ ಗಾಡಿ ಸವಾರರಿಗೆ ರಿಯಾಯತಿ ದರದಲ್ಲಿ ಕಾರ್ಖಾನೆಯ ಆವರಣದಲ್ಲಿ ಕ್ಯಾಂಟೀನ್ ಆರಂಭಿಸಬೇಕು.ಬಾಕೀ ಇರುವ ₹50 ರೂಗಳ ಜತೆಗೆ ಟನ್ ಕಬ್ಬಿಗೆ 5500 ರೂ ನಿಗದಿಪಡಿಸಲು.ಮತ್ತು ಮಂಡ್ಯ ಜಿಲ್ಲೆಯ ಅಲೆಮನೆಗಳ ಪುನಶ್ಚೇತನಕ್ಕೆ ಅಗತ್ಯ ಸುಲಭ ಸಾಲ ಸೌಲಭ್ಯ.ಆಧುನಿಕ ತಂತ್ರಜ್ಞಾನ ವರ್ಗಾವಣೆಗೆ ಕೆಎಂಎಫ್ ಮಾದರಿಯಲ್ಲಿ ಸಹಕಾರಿ ಸಂಸ್ಥೆ ಆರಂಭಕ್ಕೆ ಆಗ್ರಹಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸ್ಥಳೀಯರಿಗೆ ಉದ್ಯೋಗ ಇಲ್ಲ: ದೇಶದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಉದ್ಯೋಗ ಇಲ್ಲ ಎಂಬುದು ನಿಜಕ್ಕು ಶೋಚನೀಯ ಸಂಗತಿಯಾಗಿದೆ.ರಾಜ್ಯದುದ್ದಕ್ಕು ಉದ್ಯೋಗ ವಹಿವಾಟು ಎಲ್ಲದರಲ್ಲು ಕನ್ನಡಿಗರನ್ನು ವಂಚಿಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ರಾಜಧಾನಿ ಮಾತ್ರವಲ್ಲದೆ ಮಂಡ್ಯ ಮೈಶುಗರ್ ನಲ್ಲು ಕನ್ನಡಿಗರಿಗೆ ಉದ್ಯೋಗ ಇಲ್ಲವಾಗಿದೆ.ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಚ್ಚಿನ ಜವಾಬ್ದಾರಿ ಹೊತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಭದ್ರತೆ ಸಿಗುವಂತೆ ನೋಡಿಕೊಳ್ಳಬೇಕು ಎಂದರು.ಗೋಷ್ಡಿಯಲ್ಲಿ ಕರವೇ ಆಟೋ ಘಟಕದ ಸೋಮಶೇಖರ್. ಪುರ ರವಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!