Saturday, October 31, 2026
spot_img

ದಕ್ಷಿಣ ಕರ್ನಾಟಕದಲ್ಲಿ ಕಬ್ಬು ಅರೆಯುವಿಕೆ ಚುರುಕು

**ದಕ್ಷಿಣ ಕರ್ನಾಟಕ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆ ಚುರುಕು: ಒಂದೇ ದಿನ 33,018 ಟನ್ ಕಬ್ಬು ನುರಿತ**

ಮಂಡ್ಯ: ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ಈ ಬಾರಿಯ ಕಬ್ಬು ಅರೆಯುವ ಹಂಗಾಮು ಚುರುಕುಗೊಂಡಿದ್ದು, ಅಕ್ಟೋಬರ್ 30ರಂದು ಒಂದೇ ದಿನ 33,018 ಟನ್ ಕಬ್ಬು ಅರೆಯಲಾಗಿದೆ. ಇದುವರೆಗೆ ಒಟ್ಟು 33,10,480 ಟನ್ ಕಬ್ಬು ನುರಿಸಲಾಗಿದೆ ಎಂದು ಕಾರ್ಖಾನೆಗಳ ವರದಿಯಿಂದ ತಿಳಿದುಬಂದಿದೆ.

ಕಾರ್ಖಾನೆವಾರು ವಿವರ ಹೀಗಿದೆ: ಬನ್ನಾರಿ – ನಂಜನಗೂಡು ಕಾರ್ಖಾನೆಯು ಅಂದು ಅತಿ ಹೆಚ್ಚು ಅಂದರೆ 6,730 ಟನ್ ಕಬ್ಬು ಅರೆದಿದೆ. ಕೊಪ್ಪದ ಎನ್‌ಎಸ್‌ಎಲ್ ಕಾರ್ಖಾನೆ 5,245 ಟನ್, ನಿರಾಣಿ ಶುಗರ್ಸ್ (ಪಾಂಡವಪುರ) 4,571 ಟನ್, ಭಾರತೀನಗರದ ಎಸ್‌ಸಿಎಸ್‌ಎಲ್ ಘಟಕ-1 4,180 ಟನ್ ಹಾಗೂ ಬಾನ್ನಾರಿ – ಕೊಲ್ಲೇಗಾಲ 3,980 ಟನ್ ಕಬ್ಬು ಅರೆದಿವೆ. ಕೆ.ಆರ್.ಪೇಟೆಯ ಹೇಮಗಿರಿ ಶುಗರ್ಸ್ 2,992 ಟನ್, ಶ್ರೀನಿವಾಸಪುರದ ಎಸ್‌ಸಿಎಸ್‌ಎಲ್ ಘಟಕ-2 2,855 ಟನ್ ಹಾಗೂ ಮಂಡ್ಯದ ಎಂಎಸ್‌ಸಿಒ (ಮೈಷುಗರ್) 2,465 ಟನ್ ಕಬ್ಬು ನುರಿಸಿವೆ.

ಇದುವರೆಗಿನ ಒಟ್ಟು ಅರೆಯುವಿಕೆಯಲ್ಲಿ ಎನ್‌ಎಸ್‌ಎಲ್ ಕೊಪ್ಪ 6,06,512 ಟನ್ ಮೂಲಕ ಮೊದಲ ಸ್ಥಾನದಲ್ಲಿದ್ದು, ನಿರಾಣಿ ಶುಗರ್ಸ್ 5,09,680 ಟನ್, ಎಸ್‌ಸಿಎಸ್‌ಎಲ್ ಘಟಕ-1 5,08,270 ಟನ್, ಬನ್ನಾರಿ – ಕೊಳ್ಖೇಗಾಲ 4,40,047 ಟನ್ ಹಾಗೂ ಹೇಮಗಿರಿ ಶುಗರ್ಸ್ 4,02,457 ಟನ್ ಕಬ್ಬು ಅರೆದಿವೆ. ಎಸ್‌ಸಿಎಸ್‌ಎಲ್ ಘಟಕ-2ರಲ್ಲಿ 3,35,424 ಟನ್, ಬನ್ನಾರಿ – ನಂಜನಗೂಡಿನಲ್ಲಿ 3,10,590 ಟನ್ ಹಾಗೂ ಮೈಷುಗರ್‌ನಲ್ಲಿ 1,97,500 ಟನ್ ಕಬ್ಬು ನುರಿಸಲಾಗಿದೆ.

ಸಕ್ಕರೆ ಇಳುವರಿ (ರಿಕವರಿ) ವಿಚಾರದಲ್ಲಿ ಶ್ರೀನಿವಾಸಪುರದ ಎಸ್‌ಸಿಎಸ್‌ಎಲ್ ಘಟಕ-2 ಅಂದು ಶೇ 10.35ರಷ್ಟು ಇಳುವರಿ ದಾಖಲಿಸಿ ಮುಂಚೂಣಿಯಲ್ಲಿದೆ. ನಿರಾಣಿ ಶುಗರ್ಸ್ ಶೇ 10.20 ಹಾಗೂ ಹೇಮಗಿರಿ ಶುಗರ್ಸ್ ಶೇ 10.05ರಷ್ಟು ಇಳುವರಿ ಪಡೆದಿವೆ. ಮತ್ತೊಂದೆಡೆ ಮೈಷುಗರ್‌ನಲ್ಲಿ ಶೇ 8.36 ಹಾಗೂ ಬಾನ್ನಾರಿ – ನಂಜನಗೂಡಿನಲ್ಲಿ ಶೇ 8.70ರಷ್ಟು ಮಾತ್ರ ಇಳುವರಿ ಕಂಡುಬಂದಿದೆ. ಇದುವರೆಗಿನ ಒಟ್ಟಾರೆ ಇಳುವರಿಯಲ್ಲಿ ಎಸ್‌ಸಿಎಸ್‌ಎಲ್ ಘಟಕ-2 (ಶೇ 9.96) ಮತ್ತು ಹೇಮಗಿರಿ (ಶೇ 9.82) ಮುಂದಿವೆ.

ಕಾರ್ಖಾನೆಗಳ ಯಾರ್ಡ್‌ನಲ್ಲಿ ಇನ್ನೂ ಕಬ್ಬು ಬಾಕಿ ಇದ್ದು, ನಿರಾಣಿ ಶುಗರ್ಸ್‌ನಲ್ಲಿ 1,875 ಟನ್, ಎಸ್‌ಸಿಎಸ್‌ಎಲ್ ಘಟಕ-1ರಲ್ಲಿ 1,800 ಟನ್, ಬನ್ನಾರಿ – ಕೊಳ್ಳೇಗಾಲದಲ್ಲಿ 1,310 ಟನ್ ಬಾಕೀ ಇದೆ.

ಕುಂಟುತ್ತಾ ಸಾಗಿದ್ದ ಮೈಶುಗರ್ ನ ಕಬ್ನು ಅರೆಯುವಿಕೆ ರೈತಪರ ಕನ್ಮಡ ಹೋರಾಟಗಾರರ ತೀವ್ರ ಹೋರಾಟದ ಪರಿಣಮವಾಗಿ ಒಟ್ಟು ಗುರಿಯ ಶೇ ೬೦ ರಷ್ಟನ್ಮು ತಲುಪಿದೆ.

ಈ ಹಿಂದೆ ನಿಗದಿತ ಗುರಿ ತಲುಪದೆ ಏಜೆನ್ಸಿಗೆ ಹೆಚ್ಚುವರಿಯಾಗಿ ಮೈಶುಗರ್ ಹಣ ಪಾವತಿಸಿತ್ತು.

ಈ ಬಾರಿ ಸಂಘಟನೆಗಳ ನಿರಂತರ ಕಣ್ಗಾವಲು ಕಾರಣಕ್ಕೆ ಮೈಶುಗರ್ ಆಡಳಿತ ಮಂಡಳಿಗೆ ಚುರುಕು ಮುಟ್ಟಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!