Friday, October 30, 2026
spot_img

ಹಿಂದುಳಿದವರ ಹೋರಾಟದಿಂದ ಮೀಸಲಾತಿ ಸಾಧ್ಯ:ಪುಟ್ಟಸಿದ್ದ ಶೆಟ್ಟಿ ಅಭಿಮತ

ಹಿಂದುಳಿದವರ ಹೋರಾಟದಿಂದ ಮೀಸಲಾತಿ ಸಾಧ್ಯ

ಮಂಡ್ಯ:  ಹಿಂದುಳಿದ ವರ್ಗಗಳು ಒಗ್ಗಟ್ಟಿನ ಹೋರಾಟದ ಮೂಲಕ ಲೋಕಸಭೆ ಮತ್ತು ವಿಧಾನಸಭೆಗೆ ಮೀಸಲಾತಿಯನ್ನು ಪಡೆಯಲು ಸಾಧ್ಯ ಎಂದು ವಿಧಾನ ಪರಿಷತ್‌  ಮಾಜಿ ಸದಸ್ಯ ಪುಟ್ಟಸಿದ್ದಶೆಟ್ಟಿ ಹೇಳಿದರು.

ನಗರದ ಅಂಬೇಡ್ಕರ್‌ ಭವನದ ಮಿನಿ ಸಭಾಂಗಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಆಯೋಜನೆಗೊಂಡಿದ್ದ ಲೋಕಸಭೆ ವಿಧಾನ ಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಬೇಡವೇ ಎಂಬ ವಿಚಾರ ಕುರಿತ ಚಿಂತನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ರಾಜಕೀಯ ಬಲವರ್ಧನೆಗೆ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಲೋಕಸಭೆ ವಿಧಾನಸಭೆಗೂ ಮೀಸಲಾತಿಯ ಅನಿವಾರ್ಯತೆ ಇದೆ. ಈ ಬಗ್ಗೆ ಗಂಭೀರ ಚಿಂತನೆ ಮತ್ತು ತೀವ್ರತರವಾದ ಹೋರಾಟದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಸಂಘಟನೆಗಳು ಮುಂದಾಗಬೇಕು ಎಂದು ಆಶಿಸಿದರು.

ಸ್ವಾತಂತ್ರ್ಯ ನಂತರ ದೇಶ ಮತ್ತು ರಾಜ್ಯದಲ್ಲಿ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಮತದಾನಕ್ಕೆ ಸೀಮಿತವಾಗಿದ್ದು ನಿರೀಕ್ಷಿತ ಮಟ್ಟದಲ್ಲಿ ಅಧಿಕಾರವನ್ನು ಹಿಡಿಯಲು ಸಾಧ್ಯವಾಗಿಲ್ಲ. ರಾಜ್ಯದ ಮಟ್ಟಕ್ಕೆ ಜನಸಂಖ್ಯೆಗೆ ಅನುಗುಣವಾಗಿ ವಿಧಾನ ಸಭೆಯಲ್ಲಿ ಶಾಸಕರ ಸಂಖ್ಯಾಬಲ ಇಲ್ಲದಿರುವುದು ರಾಜಕೀಯ ಹಿನ್ನಡೆಗೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಿದರು.

ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನ  ಗಂಭೀರವಾಗಿ ಪರಿಗಣಿಸುವಂತಾಗಬೇಕು. ಅರಸು ಮಾದರಿಯಲ್ಲಿ ಹಿಂದಿನ ಜನಪ್ರತಿನಿಧಿಗಳು ಸೂಕ್ಷ್ಮ ಸಮುದಾಯಗಳನ್ನು ಗುರುತಿಸಿ ರಾಜಕೀಯ ಪ್ರಾತಿನಿಧ್ಯವನ್ನು ನೀಡಬೇಕು. ವಿಶೇಷವಾಗಿ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಬಲವರ್ಧನೆಗೆ ಪೂರಕವಾದ ಕಾರ್ಯಕ್ರಮಗಳು ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್‌.ಸಂದೇಶ್‌ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಲೋಕಸಭೆ ವಿಧಾನಸಭೆಯ ಮೀಸಲಾತಿಯನ್ನು ಕೇಳುವುದು ಮಹತ್ವದ ವಿಷಯವಾಗಿದೆ. ಮೇಲ್ನೋಟಕ್ಕೆ ಇದು ಅಸಾಧ್ಯವೆನಿಸಿದರು. ಪಕ್ಷಾತೀತವಾಗಿ ಎಲ್ಲ ಸಮುದಾಯಗಳ ಸಂಘಟಿತ ಹೋರಾಟದ ಮೂಲಕ ಯಶಸ್ಸನ್ನು ಗಳಿಸಲು ಸಾಧ್ಯವೆಂದು ಪ್ರತಿಪಾದಿಸಿದರು.

ಸದ್ಯದ ಸ್ಥಿತಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮಾತ್ರವೇ ಮೀಸಲಾತಿಯಿದ್ದು ಲೋಕಸಭೆ ವಿಧಾನಸಭೆಗೆ ಈ ಅವಕಾಶ ಇರುವುದಿಲ್ಲ. ರಾಜಕೀಯ ಪಕ್ಷಗಳು ಹಿಂದುಳಿದವರ ಕುರಿತು ಕನಿಕರ ವ್ಯಕ್ತಪಡಿಸುವ ಬದಲಾಗಿ ಬದ್ಧತೆಯನ್ನು ಪ್ರದರ್ಶಿಸಬೇಕು. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು 2028ರ ಚುನಾವಣೆಯಲ್ಲಿ ಹಿಂದುಳಿದವರಿಗೆ ಕನಿಷ್ಠ 75 ಕ್ಷೇತ್ರಗಳನ್ನು ಮೀಸಲಿಟ್ಟು ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ರೈತ ಮುಖಂಡ ದೊಡ್ಡಯ್ಯ, ವಿವಿಧ ಹಿಂದುಳಿದ ಸಮುದಾಯದ ಮುಖಂಡರಾದ ಎಂ.ಕೃಷ್ಣ, ನಾಗರತ್ನ, ಎಚ್‌.ಪಿ.ಸತೀಶ್, ಮಲ್ಲರಾಜೇ ಅರಸ್‌, ಸಾತನೂರು ಕೃಷ್ಣ, ಅಮ್ಜದ್‌ಪಾಷ, ವೈ.ಸಿ.ಪ್ರದೀಪ್, ಸಿ.ಸಿದ್ದಶೆಟ್ಟಿ, ಚಂದ್ರನಾಯಕ್‌, ಶಶಿಕುಮಾರ್, ದೇವರಾಜು, ದ್ರಾಕ್ಷಾಯಿಣಿ, ಶಕುಂತಲಾ, ಲೋಕೇಶ್‌ ಕೊಡಿಯಾಲ, ಪುಟ್ಟಸ್ವಾಮಿ, ಎಚ್‌.ಡಿ.ಜಯರಾಂ ಭಾಗವಹಿಸಿದ್ದರು.

………….

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!