ಸಮಾಜ ಸೇವಕ ಬಸವರಾಜು ಯಾರು?
ಈ ಸಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದೆ.
ಈ ಪಟ್ಟಿಯಲ್ಲಿ ಸಮಾಜ ಸೇವೆಯ ಹೆಸರಿನಲ್ಲಿ ಮಂಡ್ಯದಿಂದ ಬಸವರಾಜು ಎಂಬುವರ ಹೆಸರು ಇದೆ.
ಸದರಿ ಸಮಾಜ ಸೇವಕ ಬಸವರಾಜುರವರ ಚಿತ್ರಪಟ ಹಾಗೂ ಅವರ ಪರಿಚಯದ ವಿವರಕ್ಕಾಗಿ ಮಂಡ್ಯ ಜಿಲ್ಲೆಯ ಕನ್ನಡ ಮತ್ತು ಸಂಸ್ಕ್ರತಿ ಸಹಾಯಕ ನಿರ್ದೇಶಕ ನಂದೀಶ್ ರನ್ನು ಹಳೇ ಮೈಸೂರು ಸಂಪರ್ಕಿಸಿದಾಗ ಅವರಿಗೂ ಸಹ ಈ ಬಗ್ಗೆ ಯಾವುದೆ ಮಾಹಿತಿಯಿಲ್ಲ.
ಸ್ಥಳೀಯವಾಗಿ ವರದಿ ಸಲ್ಲಿಕೆಯಾಗಿದ್ದರೆ ಆ ಕುರಿತು ಮಾಹಿತಿ ಲಭ್ಯವಾಗುತಿತ್ತು.ಆದರೆ ಈ ಆಯ್ಕೆ ಬೆಂಗಳೂರಿನಿಂದ ಆಗಿರುವುದರಿಂದ ಬಸವರಾಜು ಯಾರೆಂಬುದು ಕೇಂದ್ರ ಕಚೇರಿಯಿಂದಲೆ ಮಾಹಿತಿ ಬರಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸದ್ಯಕ್ಕೆ ಸದರಿ ಬಸವರಾಜು ಮದ್ದೂರು ತಾಲೂಕಿನ ಕದಲೂರು ಗ್ರಾಮದವರು ಎನ್ನಲಾಗುತ್ತಿದೆ.


