2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 62 ಸಾಧಕರಿಗೆ ಗೌರವ
ಬೆಂಗಳೂರು, ಅ.30: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 62 ಗಣ್ಯರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಿಸಿದೆ. 71ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಕುರಿತು ಆದೇಶ ಹೊರಡಿಸಿದೆ.
ಜಾನಪದ ಕ್ಷೇತ್ರದಿಂದ ದಾವಲಸಾಬ ಅತ್ತಾರ (ಕೊಪ್ಪಳ), ಶ್ರೀಮತಿ ಗೌರಮ್ಮ (ಚಾಮರಾಜನಗರ), ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ), ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ), ಈರಣ್ಣ ರುದ್ರಾಕ್ಷಿ (ರಾಯಚೂರು), ಶಿವಲಿಂಗಪ್ಪ ಎಂ (ಕೊಪ್ಪಳ) ಹಾಗೂ ಸುರೇಶ್ ರಾಮಚಂದ್ರ ಜೋಶಿ (ವಿಜಯಪುರ) ಆಯ್ಕೆಯಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಡಾ. ಸಿ.ಎ. ಶ್ರೀಧರ್ (ಮೈಸೂರು), ಡಾ. ಎ. ನಾರಾಯಣ ಸ್ವಾಮಿ (ಹಾಸನ) ಮತ್ತು ವಿ. ಮುರಳಿ (ಬೆಂಗಳೂರು ಗ್ರಾಮಾಂತರ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೃತ್ಯ ಕ್ಷೇತ್ರದಲ್ಲಿ ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ) ಅವರನ್ನು ಆಯ್ಕೆ ಮಾಡಲಾಗಿದೆ.
ಚಲನಚಿತ್ರ/ಕಿರುತೆರೆ ವಿಭಾಗದಲ್ಲಿ ಕೆ. ವೆಂಕಟರಮಣ (ಬಾಬಜೀ) (ಧಾರವಾಡ), ಅಶೋಕ್ (ಬೆಂಗಳೂರು ಗ್ರಾಮಾಂತರ) ಮತ್ತು ಕೆ.ಎಸ್. ರವೀಂದ್ರನಾಥ್ (ಬೆಂಗಳೂರು ನಗರ) ಅವರಿಗೆ ಗೌರವ ಸಂದಿದೆ. ಯಕ್ಷಗಾನ ಕ್ಷೇತ್ರದಲ್ಲಿ ಗೋಪಾಲ ಗಾಣಿಗ (ಉಡುಪಿ), ಬಯಲಾಟ ಕ್ಷೇತ್ರದಲ್ಲಿ ಶ್ರೀಮತಿ ಹುಲಿಗೆಮ್ಮ (ಬಳ್ಳಾರಿ) ಪ್ರಶಸ್ತಿ ಪಡೆದಿದ್ದಾರೆ.
ರಂಗಭೂಮಿ ಕ್ಷೇತ್ರದಲ್ಲಿ ಡಿ. ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ (ಬೆಂಗಳೂರು ಗ್ರಾಮಾಂತರ), ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ (ಧಾರವಾಡ), ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ), ಶ್ರೀಮತಿ ಕೆ.ಆರ್. ಸುಮತಿ (ಮೈಸೂರು), ಎಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ) ಹಾಗೂ ಹೊನ್ನ ನಾಯಕ (ಮೈಸೂರು) ಆಯ್ಕೆಯಾಗಿದ್ದಾರೆ. ಶಿಲ್ಪಕಲೆಯಲ್ಲಿ ಜಿ.ಬಿ. ಹಂಸಾನಂದ ಆಚಾರ್ಯ (ವಿಜಯನಗರ) ಮತ್ತು ಕಾಡಪ್ಪ ಪರಶುರಾಮ ಗಾಡಿವಡ್ಡರ್ (ಬೆಳಗಾವಿ), ಚಿತ್ರಕಲೆಯಲ್ಲಿ ಸಿ.ಬಿ. ಸೋಮಶೆಟ್ಟಿ (ಬೀದರ್), ಕರಕುಶಲ ಕ್ಷೇತ್ರದಲ್ಲಿ ಶ್ರೀಮತಿ ಶಾಂತಾಬಾಯಿ (ಬೀದರ್) ಅವರಿಗೆ ಪ್ರಶಸ್ತಿ ದೊರೆತಿದೆ.
ಕೃಷಿ ಕ್ಷೇತ್ರದಲ್ಲಿ ಎಚ್.ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ) ಹಾಗೂ ಬಿ.ಎ. ಚನ್ನಪ್ಪಗೌಡ (ಬೆಂಗಳೂರು), ಪರಿಸರ ಕ್ಷೇತ್ರದಲ್ಲಿ ಡಾ. ಸ್ವಾಮಿ ಆನಂದ್ ಆರ್ (ಮೈಸೂರು) ಆಯ್ಕೆಯಾಗಿದ್ದಾರೆ. ವಿಜ್ಞಾನ/ತಂತ್ರಜ್ಞಾನ ವಿಭಾಗದಲ್ಲಿ ಪ್ರೊ. ರಾಜಾಸಾಬ್ ಎ.ಎಚ್ (ಕಲಬುರಗಿ) ಮತ್ತು ಕೆನಡಾದ ಡಾ. ರಾಜಶೇಖರ ಮೂರ್ತಿ ಅವರಿಗೆ ಗೌರವ ಸಂದಿದೆ.
ಮಾಧ್ಯಮ ಕ್ಷೇತ್ರದಲ್ಲಿ ಡಿ. ಉಮಾಪತಿ (ಚಿತ್ರದುರ್ಗ) ಮತ್ತು ಶ್ರೀಮತಿ ಎಂ.ಪಿ. ಸುಶೀಲ (ಬೆಂಗಳೂರು ನಗರ), ಛಾಯಾಚಿತ್ರ ವಿಭಾಗದಲ್ಲಿ ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ) ಪ್ರಶಸ್ತಿ ಪಡೆದಿದ್ದಾರೆ.
ಸಂಕೀರ್ಣ ವಿಭಾಗದಲ್ಲಿ ಶ್ರೀಮತಿ ರುಕ್ಮಿಣಿ ಬಾಯಿ ನಾಗಪ್ಪ ವಾಷ್ಕರ್ (ಬಾಗಲಕೋಟೆ), ಡಾ. ಡಿ.ಎಸ್. ಚೌಗಲೆ (ಬೆಳಗಾವಿ), ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಬೆಂಗಳೂರು), ರವಿ ಪ್ರವೀಣ್ ನೊರ್ಹೋನಾ (ಬೆಂಗಳೂರು), ಎಂ.ಆರ್. ಜೈಶಂಕರ್ (ಚಿಕ್ಕಮಗಳೂರು), ಪ್ರಸಾದ್ ಬಿದ್ದಪ್ಪ (ಕೊಡಗು) ಮತ್ತು ವಾಸಪ್ಪ ಯಲ್ಲಪ್ಪ ಕುಸಗೂರ (ಹಾವೇರಿ) ಆಯ್ಕೆಯಾಗಿದ್ದಾರೆ. ವಾಸ್ತುಶಾಸ್ತ್ರ ಕ್ಷೇತ್ರದಲ್ಲಿ ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ) ಅವರಿಗೆ ಪ್ರಶಸ್ತಿ ಲಭಿಸಿದೆ.
ಸಮಾಜಸೇವೆ ಕ್ಷೇತ್ರದಲ್ಲಿ ಗದಗದ ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ, ಮಂಡ್ಯದ ಬಸವರಾಜು, ಶಿವಮೊಗ್ಗದ ಕಾಗೋಡು ತಿಮ್ಮಪ್ಪ, ದಾವಣಗೆರೆಯ ಡಾ. ಎಸ್.ಎಂ. ಎಲಿ, ಉತ್ತರ ಕನ್ನಡದ ಡಾ. ಜಿ.ಎಸ್. ಚಂದ್ರಶೇಖರ್ (ಆದರ್ಶ ಚಾರಿಟಬಲ್ ಟ್ರಸ್ಟ್), ಕಲಬುರಗಿಯ ಡಾ. ಶಿವಾನಂದ ಮಹಾಸ್ವಾಮಿ, ಚಿಕ್ಕಬಳ್ಳಾಪುರದ ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ, ದಕ್ಷಿಣ ಕನ್ನಡದ ಎ.ಸಿ. ಭಂಡಾರಿ (ಅ.ಭಾ. ತುಳು ಒಕ್ಕೂಟ) ಹಾಗೂ ಬಾಗಲಕೋಟೆಯ ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ ಆಯ್ಕೆಯಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಬೆಂಗಳೂರಿನ ಡಾ. ವಿಜಯೇಂದ್ರ ಹೊನ್ನೂರಪ್ಪ ಮತ್ತು ಬೆಳಗಾವಿಯ ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ, ಆಡಳಿತ ಕ್ಷೇತ್ರದಲ್ಲಿ ಬೆಂಗಳೂರು ನಗರದ ತೆರೇಸಾ ಭಟ್ಟಾಚಾರ್ಯ ಹಾಗೂ ನವದೆಹಲಿಯ ಡಾ. ಕೆ.ಎಸ್. ಸೋಮಶೇಖರ್, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರದ ಡಾ. ಕೆ.ಎನ್. ವೆಂಕಟ ಕೃಷ್ಣಾರಾವ್ ಅವರಿಗೆ ಪ್ರಶಸ್ತಿ ದೊರೆತಿದೆ.
ಸಾಹಿತ್ಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಡಾ. ಇಂದಿರಾ ಹೆಗ್ಗಡೆ, ರಾಯಚೂರಿನ ವೀರಹನುಮಾನ್, ತುಮಕೂರಿನ ಪ್ರೊ. ನಾರಾಯಣಘಟ್ಟ (ನಾಹೋ) ಮತ್ತು ಡಾ. ಕರಿಗೌಡ ಬೀಚನಹಳ್ಳಿ, ಚಿಕ್ಕಮಗಳೂರಿನ ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ ಹಾಗೂ ಯಾದಗಿರಿಯ ಡಾ. ಸಿದ್ಧರಾಮ ಹೊನ್ಕಲ್ ಆಯ್ಕೆಯಾಗಿದ್ದಾರೆ.


