Sunday, November 8, 2026
spot_img

ಮಕ್ಕಳನ್ನು ಭಿಕ್ಷಾಟನೆಗೆ ಬಳಸಿದ ಆರೋಪ:ಎಫ್ ಐ ಆರ್ ದಾಖಲು

**ಮಕ್ಕಳನ್ನು ಭಿಕ್ಷಾಟನೆಗೆ ಬಳಸಿದ ಆರೋಪ: ಎಫ್‌ಐಆರ್ ದಾಖಲು**

ಮಳವಳ್ಳಿ (ಮಂಡ್ಯ): ಮಕ್ಕಳನ್ನು ಭಿಕ್ಷಾಟನೆಗೆ ದೂಡಿ ಹಣ ಸಂಗ್ರಹಿಸುತ್ತಿದ್ದ ಪ್ರಕರಣವನ್ನು ಮಳವಳ್ಳಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜಂಟಿ ತಂಡ ಪತ್ತೆಹಚ್ಚಿದೆ.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಸಂತೋಷ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಇ. ನಂಜಮಣಿ ಹಾಗೂ ಪೊಲೀಸ್ ಠಾಣೆಯ ಎಸ್‌ಐ ಹರ್ಷವರ್ಧನ್ ನೇತೃತ್ವದ ತಂಡವು ಪಟ್ಟಣದ ಅನಂತ್‌ರಾಂ ವೃತ್ತದ ಬಳಿ ಜಂಟಿ ಕಾರ್ಯಾಚರಣೆ ನಡೆಸಿತು. ಈ ವೇಳೆ ಭಿಕ್ಷೆ ಬೇಡುತ್ತಿದ್ದ ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿಯ ನಾಲ್ವರು ಮಕ್ಕಳನ್ನು ರಕ್ಷಿಸಿ, ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ.

ರಕ್ಷಿಸಲಾದ ಮಕ್ಕಳನ್ನು ಬಾಲಮಂದಿರದಲ್ಲಿ ಇರಿಸಲಾಗಿದ್ದು, ಅವರಿಗೆ ಆಪ್ತ ಸಮಾಲೋಚನೆ ನೀಡಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಮಕ್ಕಳ ಭಿಕ್ಷಾಟನೆಯಿಂದ ಬರುತ್ತಿದ್ದ ಹಣವನ್ನು ಗಾಮನಹಳ್ಳಿಯ ರವಿ ಎಂಬಾತ ಪಡೆಯುತ್ತಿದ್ದ ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿ ರವಿಯನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!