ಮೊದಲೆಲ್ಲ ಹಳ್ಳಿಗಳಲ್ಲಿ ಅನ್ನ ಬಸಿದ ಗಂಜಿ.ಮಿಕ್ಮುಳಿದ ತಂಗಳು ಸಂಗ್ರಹಿಸಲೆಂದೆ ಹಸ ಕರ ಕಟ್ಟಿರುವವರ ಮನೆಗಳ ಮುಂದೆ ಬಾನಿ ಇಡಲಾಗುತಿತ್ತು..ಈಗಲು ಈ ಪದ್ದತಿ ಕೆಲವೆಡೆ ಇದೆ.
ಇನ್ನು ಮಂಡ್ಯದಂತ ನಗರಗಳಲ್ಲಿ ಕಸ ಎಂದರೆ ಅಲ್ಲಿನ ತರಕಾರಿ ಮಾರುಕಟ್ಟೆಗಳಲ್ಲಿ ಬೀಳುವ ಬಾಳೆಕಂದು ಹೊರತು ಮತ್ಯಾವುದು ಕಸ ಎಂದು ಪರಿಗಣಿತವಾಗುತ್ತಿರಲಿಲ್ಲ.ಚೆಲ್ಲಾಡಿದ ತರಕಾರಿ ಬೀಡಾಡಿ ದನಗಳ ಹೊಟ್ಟೆ ಸೇರುತ್ತಿತ್ತು.
ಉಳಿದದ್ದು ಸಹಜವಾಗಿಯೇ ಕರಗಿ ಹೋಗುತ್ತಿತ್ತು.
ಇದ್ದ ಎರಡು ಟ್ರಾಕ್ಟರೋ.ಲಾರಿಯೋ ವಾರಕ್ಕೆರೆಡು ಬಾರಿ ಮಾರುಕಟ್ಟೆಗೆ ಹೋಗಿ ಬಂದರೆ ಅಲ್ಲಿಗೆ ಸಿಟಿ ಕ್ಲೀನಾದಂತೆ ಲೆಕ್ಕ..ಆಗಿನ್ನೂ ಪ್ಲಾಸ್ಟಿಕ್ ಬಳಕೆ ಈ ಮಟ್ಟಕ್ಕಿಲ್ಲದ ಕಾಲ ಅದು.
ಆದರೆ ಈಗ ಎಲ್ಲವೂ ಪ್ಲಾಸ್ಟಿಕ್ ಮಯವಾದ ಕಾಲ.ಪ್ರತೀ ಗಲ್ಲೀ ಮನೆಗಳಿಗೆ ಕಸದ ಆಟೋಗಳು ಪ್ರತಿನಿತ್ಯ ಬರುತ್ತವೆ.ಅದಲ್ಲದೆ ನೂರಾರು ಪೌರಕಾರ್ಮಿಕರು ಕೋಟಿಗಟ್ಟಲೆ ದುಡ್ಡು ಖರ್ಚಾದರೂ ಈ ಮೊದಲಿನ ಸ್ವಚ್ಚತೆ ಕಾಣುತ್ತಿಲ್ಲ.
ಮನೆ ಮನೆಗೆ ಉಚಿತವಾಗಿಯೆ ಕಸ ಸಂಗ್ರಹಿಸಲೆಂದೆ ಪ್ಲಾಸ್ಟಿಕ್ ಡಬ್ಬಗಳನ್ನು ಕೊಟ್ಟರೂ ಕಸದ ನಿಯಂತ್ರಣವಾಗಿಲ್ಲ.ಕಾರಣ ನಾಗರೀಕರಲ್ಲಿನ ಕಸ ನಿರ್ವಹಣೆಯ ಮನೋಧರ್ಮದ ಕೊರತೆ.
ಕಸದ ವೈಜ್ಞಾನಿಕ ನಿರ್ವಹಣೆ ಕೊರತೆ.ಬರೇ ದುಡ್ಡು ನುಂಗುವುದನ್ನೆ ಕೇಂದ್ರವಾಗಿಸಿಕೊಂಡ ಸರಕಾರದ ಯೋಜನೆಗಳು ಕಾರಣವಾಗಿವೆ.
.ಎನ್ ಜಿ ಇ ಟಿ ಸಾವಿರಾರು ಕೋಟಿ ದಂಡ ವಿಧಿಸಿ ಬಾಕೀ ಇರುವ ಕಸದ ವಿಲೇವಾರಿಗೆ ಆದೇಶ ಮಾಡಿದರು ಅದರಲ್ಲು ಕಸ ಹೀರುವ ಚಾಳಿ ಹೋಗಿಲ್ಲ.ಕಸದ ಅವೈಜ್ಞಾನಿಕ ನಿರ್ವಹಣೆ ಯೋಜನೆಗಳಿಂದ ನದಿ ಜಲಮೂಲಗಳು ಹಾಳಾಗುತ್ತಿವೆ.ಪ್ರಾಣಿ ಪಕ್ಷೀಗಳ ಬದುಕು ಅಪಾಯಕ್ಕೆ ಸಿಲುಕಿದೆ.ನಾವು ಕುಡಿಯುವ ನೀರು ಬಳಸಲು ಯೋಗ್ಯವಿಲ್ಲದಂತಾಗಿದೆ.
ಇದೆಲ್ಲ ಒಂದೆಡೆ ಇರಲಿ.ಕಸದ ವೈಜ್ಞಾನಿಕ ನಿರ್ವಹಣೆ ಸಂಬಂದ ಈಗಾಗಲೇ ಚಾಲ್ತಿಯಲ್ಲಿರುವ ಪ್ರಯೋಗವೊಂದನ್ನು ಹಂಚಿಕೊಳ್ಳುವ ಇರಾದೆ ನನ್ನದು.ಅದಕ್ಕೆ ಈ ಇಷ್ಟೆಲ್ಲ ಪೀಠಿಕೆಗಳು.
ಪ್ರತಿ ನಿತ್ಯ ಮನೆಗಳಲ್ಲಿ ತರಕಾರಿ ಉಳಿದ ತಂಗಳು ಅದು ಇದು ಅಂತ ಕರಗಬಲ್ಲ ಕಸವೇ ಮನೆಯೊಂದರಲ್ಲಿ ಕನಿಷ್ಟ ಒಂದು ಕೆಜಿಯಷ್ಟು ಉತ್ಪಾದನೆಯಾಗುತ್ತದೆ.
ಈಗ ತಾರಸೀ ಕೈ ತೋಟ ಎಂಬ ಪರಿಕಲ್ಪನೆ ಬಳಸಿ ಸ್ಥಳೀಯ ಸಂಸ್ಥೆಗಳು ಪ್ರತೀ ಕುಟುಂಬಕ್ಕೆ ನಾಲ್ಕೈದು ಮಣ್ಣಿನ ಕುಡಿಕೆ (ಪಾಟ್) ನೀಡುವುದು.ಅದರಲ್ಲಿ ದಿನನಿತ್ಯ ಮನೆಗೆ ಬೇಕಾಗುವ ತರಕಾರಿ ಗಿಡಗಳನ್ನು ಹಾಕುವುದು.ಅವುಗಳಿಗೆ ಗೊಬ್ಬರವಾಗಿ ಈ ಹಸಿ ಕಸ ಬಳಸುವುದು.ಇದರಿಂದ ಕಸದ ವಿಲೇವಾರಿ ಮನೆಗೂ ತರಕಾರಿ ಲಭ್ಯವಾಗುತ್ತದೆ.
ಮಂಡ್ಯದಂತ ಕ್ಲಾಸ್ ೧ ನಗರಗಳಲ್ಲಿ ಕನಿಷ್ಟ ೨೦ ಸಾವಿರ ಮನೆಗಳಿವೆ.ಇಲ್ಲಿ ಪ್ರತಿ ಮನೆಯಿಂದ ದಿನವೊಂದಕ್ಕೆ ಕನಿಷ್ಟ ಒಂದು ಕೆಜಿ ಹಸಿ ಕಸ ನಿರ್ವಹಿಸಿದರೆ.ವಾರ್ಷಿಕ ೭೨ ಲಕ್ಷ ಕೆಜಿ ಸಂಗ್ರಹ.ಸಾಗಾಣಿಕೆ.ಅದಕ್ಕಾಗಿ ನೂರಾರು ಪೌರಕಾರ್ಮಿಕರ ನಿಯೋಜನೆ ತಪ್ಪಲಿದೆ..ಇದು ರಾಜ್ಯ ಮಟ್ಟಕ್ಕೆ ವಿಸ್ತರಣೆಯಾದರೆ ಕೋಟಿಗಟ್ಟಲೆ ಟನ್ ಕಸದ ವೈಜ್ಞಾನಿಕ ವಿಲೇವಾರಿ ಸಾಧ್ಯವಾಗಲಿದೆ.
ಇದರಿಂದ ಕಸದ ವೈಜ್ಞಾನಿಕ ನಿರ್ವಹಣೆ.ಪರಿಸರ ಉಳಿವು.ಸಾವಯವ ತರಕಾರಿ ಲಭ್ಯವಾಗಲಿದೆ.
ಇನ್ನು ಸಾಕಷ್ಟು ಕೈತೋಟದ ಸ್ಥಳ ಇರುವವರಿಗೆ ಬೇರೆಯದೆ ಅವಕಾಶ ಕಲ್ಪಿಸಬಹುದು.ಆರಂಭಿಕ ಹಂತದಲ್ಲೆ ಕಸದ ವಿಂಗಡಣೆ ಮಾಡಿ.ಅಯಾ ಗ್ರಾಪಂಗಳಿಗೆ ಉಚಿತ ಕಾಂಪೋಸ್ಟ್ ಗೊಬ್ಬರ ಒದಗಿಸಬಹುದಾಗಿದೆ.ಈಗ ಸ್ಥಳೀಯ ಸಂಸ್ಥೆಗಳು ನಾಮಕಾವಾಸ್ತೆ ಗೊಬ್ಬರ ಮಾರುತ್ತಿವೆ.
ಸರಕಾರ ಅನಗತ್ಯ ವಾಹನಗಳ ಖರೀದಿ.ನೇಮಕಾತಿ.ಇತ್ಯಾದಿಗೆ ಕೋಟಿಗಟ್ಟಲೆ ಸುರಿಯುವ ಬದಲು ಈ ರೀತಿಯ ಹಾದಿ ತುಳಿದರೆ ಖಂಡಿತ ಸುಸ್ಥಿರ ಬದಲಾವಣೆ ಸಾಧ್ಯವಾಗಲಿದೆ.
ಆದರೆ ವಾಹನ ಕಂಪನಿಗಳ ಲಾಭಿ.ಕಸದ ಮಾಫಿಯಾ.ಅಧಿಕಾರಿ ಜನಪ್ರತಿನಿಧಿಗಳ ಸಿಂಡಿಕೇಟ್ ಇದಕ್ಕೆ ಅವಕಾಶ ಕಲ್ಪಿಸಿತೆ ಎಂಬುದು ಮಾತ್ರ ಸದಾ ಕಾಡುವ ಪ್ರಶ್ನೆಯಾಗಿದೆ.


