ಭಾರತದ ಚುನಾವಣಾ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಶ್ ಕುಮಾರ್ ನಡೆ ಸಂವಿಧಾನ ವಿರೋಧಿ ಮತ್ತು ಕಾನೂನು ಬಾಹಿರ ವಾಗಿದ್ದು ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.
ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನ ಉಜ್ಞಾನೇಶ್ ಕುಮಾರ್ ಅವರ ಪ್ರತಿ ಕೃತಿ ದಹನ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿ ಕೃತಿ ದಹನಕ್ಕೆ ಅವಕಾಶ ಇಲ್ಲವೆಂದು ಪೋಲಿಸರು ತಡೆಯೊಡ್ಡಿದರು.
ಭೂತದಹನ ಮಾಡಲು ಮುಂದಾದಾಗ ಕಾಂಗ್ರೆಸ್ ಕಾರ್ಯ ಕರ್ತರ ಮತ್ತು ಪೋಲಿಸರು ನಡುವೆ ಪ್ರತಿಕೃತಿ ಕಿತ್ತುಕೊಳ್ಳವ ಯತ್ನದಲ್ಲಿ ಪ್ರತಿಭಟನಾಕಾರರ ಜೊತೆ ಘರ್ಷಣೆ ನಡೆಯಿತು.
ಈ ಸಂಧರ್ಭದಲ್ಲಿ ಮಹಿಳಾ ಪೋಲಿಸ್ ಅಧಿಕಾರಿ ಮಣಿ ಕೆಳಗೆ ಬಿದ್ದರು ಕಾರ್ಯಕರ್ತರಿಂದ ಪ್ರತಿಕೃತಿಯನ್ನು ಕಿತ್ತುಕೊಳ್ಳಲು ಹರಸಾಹಸ ಪಟ್ಟರು.
ನಂತರ ಪ್ರತಿಭಟನಕಾರರನ್ನು ಮನವೊಲಿಸಿದರು. ನಂತರ ಎಸ್ ಪಿ ಆಫೀಸ್ ರಸ್ತೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜ್ಞಾನೇಂದ್ರ ಕುಮಾರ್ ರಾಜೀನಾಮೆ ನೀಡಬೇಕು ಎಸ್ಐಆರ್ ರದ್ದಾಗ ಬೇಕು ಎಂಬ ಘೋಷಣೆಯನ್ನು ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಕುಮಾರ್ ಕೊಪ್ಪ ಮಾತನಾಡಿ ಚುನಾವಣಾ ಆಯೋಗವು ಒಂದು ಪಕ್ಷತೀತ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಂತಹ ಶಕ್ತಿ ಚುನಾವಣಾ ಆಯೋಗಕ್ಕೆ ಇದೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಯ ಪ್ರಮುಖ ಆದರ ಸ್ತಂಭವಾಗಿದೆ, ಆದರೆ ಜ್ಞಾನೇಶ್ ಕುಮಾರ್ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿ ಆರ್ ಎಸ್ ಎಸ್ ಏಜೆಂಟಾಗಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕವಾಗಿದೆ.
ಆದ್ದರಿಂದ ಜ್ಞಾನೇಶ್ ಕುಮಾರ್ ರವರನ್ನು ಹುದ್ದೆಗೆ ರಾಜೀನಾಮೆ ನೀಡಬೇಕು. ಪತ್ರಕರ್ತೆ ರಿತಿಕಾ ಚೋಪ್ರಾ ಅವರ ತನಿಖಾ ವರದಿಯನ್ನು ನ್ಯಾಯಾಲಯ ಮತ್ತು ರಾಷ್ಟ್ರಪತಿಗಳು ಮಾನ್ಯ ಮಾಡಬೇಕು. ಸರ್ವೋಚ್ಚ ನ್ಯಾಯಾಲಯದ ಸಂವಿಧಾನದ 142ನೇ ವಿಧಿಯನ್ನು ಬಳಸಿ ಮುಖ್ಯ ಚುನಾವಣಾ ಅಧಿಕಾರಿಯನ್ನು ದೇಶದ್ರೋಹದ ಮೊಕದ್ದಮೆ ಆಧಾರದ ಮೇಲೆ ಬಂಧಿಸಬೇಕೆಂದು ಒತ್ತಾಯಿಸಿದರು .
ಪ್ರತಿಭಟನೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ ಪ್ರಕಾಶ್ .ಮಾಜಿ ನಗರಸಭಾ ಸದಸ್ಯ ಎಂ ಎನ್ ಶ್ರೀಧರ್.ಎಂಎಸ್ ಅಭಿಲಾಶ್.ಸುಜಾತಮಣಿ.ನಾಗಮಣಿ.ರುದ್ರಪ್ಪ.ತಗ್ಗಳ್ಳಿಯಶೋಧಾ
ವಿಜಯಲಕ್ಷ್ಮಿ ರಘುನಂದನ್ ನಾಗೇಂದ್ರ ಐಶ್ವರ್ಯ ಶಶಿಕಲಾ ನಾಗಮಣಿ ಆಶಿಫ್ ಪಾಷ ಬಸವರಾಜು ಅಂತನಹಳ್ಳಿ ಭಾಗವಹಿಸಿದ್ದರು


