ಸೆಪ್ಟೆಂಬರ್ 29ರಂದು ತ್ರಿವಿಧ ಸಂಭ್ರಮ ಸಾಹಿತ್ಯಿಕ ಮಹೋತ್ಸವ ಹಾಗೂ ವೃಕ್ಷಾಂತರಂಗ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜೈ ಕರ್ನಾಟಕ ಪರಿಸತ್ತಿನ ರಾಜ್ಯಾಧ್ಯಕ್ಷರಾದ ಎಸ್ ನಾರಾಯಣ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ತ್ರಿವಿಧ ಸಂಭ್ರಮ ಸಾಹಿತ್ಯ ಮಹೋತ್ಸವದ ಕಾರ್ಯಕ್ರಮದಲ್ಲಿ ವೃಕ್ಷಾಂತರಂಗ ಕೃತಿ ಲೋಕಾರ್ಪಣೆ ಹಾಗೂ ಪರಿಸರದವ್ವ ವಿಶೇಷ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ.
ಸಮಾರಂಭದಲ್ಲಿ ದಿವ್ಯ ಸಾನಿಧ್ಯ ನಿಶ್ಚಲಾನಂದ ಸ್ವಾಮೀಜಿ ವಹಿಸಲಿದ್ದು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಕೃತಿ ಬಿಡುಗಡೆಯನ್ನು ಪುರುಷೋತ್ತಮ್ ಬಿಳಿಮಲೆ ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಲೋಕಾರ್ಪಣೆ ಮಾಡಲಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ರವಿಕುಮಾರ್ ಗಣಿಗರವರು ಉದ್ಘಾಟಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಮ್ ಅಂಕೆ ಗೌಡ ವಹಿಸಲಿದ್ದು. ಪುಸ್ತಕ ಮನೆ ಕೃತಿಯ ಕುರಿತು ವಿಶೇಷ ನುಡಿಗಳನ್ನು ಡಾ. ಕುಮಾರ್ ಜಿಲ್ಲಾಧಿಕಾರಿಗಳು ನುಡಿಯಲಿದ್ದಾರೆ.
ಕೆಆರ್ ನಂದಿನಿ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿಗಳು ಕವಿಗಳಿಗೆ ಪ್ರಶಸ್ತಿ ವಿತರಿಸಲಿದ್ದು. ದ್ವಿಭಾಷ ಕವಿಗಳಾದ ಹರಿಕೃಷ್ಣ ವೆಬ್ ಸೈಟ್ ಬಿಡುಗಡೆಗೊಳಿಸಲಿದ್ದು.ಪುಸ್ತಕ ಕುರಿತು ತೈಲೂರು ವೆಂಕಟ ಕೃಷ್ಣ ಹಿರಿಯ ಸಾಹಿತಿಗಳು
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮುಖ್ಯ ಎಚ್.ಎಸ್ ಮುದ್ದೇಗೌಡ ಅತಿಥಿಗಳಾಗಿ ಧರಣೇಂದ್ರ ಜಯಪ್ರಕಾಶ್ ಗೌಡ ವೀರ ಶಿವಲಿಂಗಯ್ಯ ಡಿಪಿ ಸ್ವಾಮಿ ಜಿಟಿ ವೀರಪ್ಪ ಕೊಳಲು ಶ್ರೀಧರ್ ಶ್ರೀನಿವಾಸ್ ಶೆಟ್ಟಿ ಭಾಗವಹಿಸಿದ್ದಾರೆ ಎಂದು ಎಲ್ಲಾ ಸಾಹಿತ್ಯ ಅಭಿಮಾನಿಗಳು ಸಾರ್ವಜನಿಕರು ಮಾಧ್ಯಮ ಮಿತ್ರರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಡಿ ನಾಗೇಶ್, ಜೆ ಬಸವರಾಜ್, ಎಂ ಪುಟ್ಟಸ್ವಾಮಿ, ಎಂ.ಜಿ ರಾಜೇಶ್, ಮಂಚ ಶೆಟ್ಟಿ ಭಾಗವಹಿಸಿದರು,


