ಮಂಡ್ಯ: ಚನ್ನಪಟ್ಟಣ ಮೂಲದ ಬೋರ್‌ವಲ್ ರಾಮಚಂದ್ರ ಎಂಬಾತ ತಮ್ಮ ಕಬ್ಬಿನ ಗದ್ದೆ ನಾಶಮಾಡಿದ್ದು. ವಿನಃ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಬಿ.ಹೊಸೂರು ಗ್ರಾಮದ ನಿವಾಸಿ ಎಚ್.ಎನ್.ರೂಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಪದ್ಮ ಬಸವರಾಜು ಅವರಿಂದ ೨ ಎಕರೆ ಜಮೀನು ಪಡೆದ ಬೋರ್‌ವೆಲ್ ರಾಮಚಂದ್ರ ಪಕ್ಕದ ೧೦ ಗುಂಟೆ ಸ್ಥಳವನ್ನು ಕಬಳಿಸಲು ಮುಂದಾಗಿದ್ದ.
ನ್ಯಾಯಾಲಯದಲ್ಲಿ ಹೋರಾಟ ನಡೆಸಿ ವ್ಯವಸಾಯ ಮಾಡುತ್ತಿದ್ದೇವೆ. ಆದರೂ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ನಮ್ಮ ಜಮೀನಿನ ಕಬ್ಬಿಗೆ ಹಾಗೂ ಆಲೆ ಮನೆಗೆ ಬೆಂಕಿ ಹಚ್ಚಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೆವು, ಈ ಸಂಬಂಧ ಸರಿಯಾದ ಸಾಕ್ಷಿ ಸಿಗದ ಕಾರಣ ಪೊಲೀಸರು ಕ್ರಮ ವಹಿಸಿಲ್ಲ. ಆದ್ದರಿಂದ ಈಗ ಮತ್ತೆ ೩೦-೪೦ ಮಂದಿಯ ಜತೆ ಆಗಮಿಸಿ ಟ್ಯಾಕ್ಟರ್ ಮೂಲಕ ೮ ತಿಂಗಳ ಕಬ್ಬು ಹಾಳು ಮಾಡಿದ್ದಾರೆ ಎಂದು ದೂರಿದರು.
ವಿಷಯ ತಿಳಿದು ಗ್ರಾಮಸ್ಥರ ಸಹಕಾರದೊಂದಿಗೆ ಆತನನ್ನು ಮತ್ತು ಆತನ ಸಂಗಡಿಗರನ್ನು ಸ್ಥಳದಿಂತ ತಪ್ಪಿಸಿಕೊಳ್ಳದಂತೆ ತಡೆಯಲಾಯಿತು. ಆದರೆ ನಮ್ಮ ಕರೆಗೆ ಸ್ಪಂಧಿಸದ ಪೊಲೀಸರು ಶಾಸಕ ರವಿಕುಮಾರ್ ಮೂಲಕ ಕರೆ ಮಾಡಿಸಿದ ನಂತರ ಸ್ಥಳಕ್ಕೆ ಬಂದರು. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಸ್ಥಳದಲ್ಲಿ ಆತನ ಪರವಾಗಿಯೇ ಮಾತನಾಡಿದ ಪೊಲೀಸರು. ಮೂರು ಕಾರ್, ಒಂದು ಟ್ರಾಕ್ಟರ್ ಪೈಕಿ, ಒಂದು ಕಾರ್ ಮತ್ತು ಟ್ರ್ಯಾಕ್ಟರ್ ವಶಕ್ಕೆ ಪಡೆದರು. ಸಂತ್ರಸ್ಥರಾದ ನಮ್ಮನ್ನು ಗದರಿಸಿದ ಪೊಲೀಸರು. ಎಫ್‌ಐಆರ್ ದಾಖಲಿಸಲು ಮೀನಾಮೇಷ ಎಣಿಸಿ, ಕಾಯಿಸಿ ಎಫ್‌ಐಆರ್ ದಾಖಲಿಸಲಾಯಿತು ಎಂದು ಘಟನೆ ವಿವರಿಸಿದರು.
ಕೂಡಲೇ ಪೊಲೀಸರು ಆರೋಪಿ ಹಾಗೂ ಸಹಚರರ ವಿರುದ್ದ ಕ್ರಮ ಕೈಗೊಂಡು ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಕೋರ್ಟ್ ಆದೇಶದಂತೆ ವ್ಯವಸಾಯಕ್ಕೆ ಅನುವು ಮಾಡಿಕೊಡಬೇಕು. ಆರೋಪಿಯು ಜೆಡಿಎಸ್ ಪಕ್ಷದ ನಾಯಕ ಎಂದು ಹೇಳಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ನನ್ನ ಪರ ಇದ್ದಾರೆ ಎಂದು ಬೆದರಿಕೆ ಒಡ್ಡುತ್ತಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆದಿಚುಂಚನಗಿರಿಯ ಕಾರ್‍ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಅವರು ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಪತಿ ಎಚ್.ಎಸ್.ಚಂದ್ರು, ತಮ್ಮ ಎಚ್.ಎನ್.ಶಿವಕುಮಾರ್, ಕುಮಾರ್, ಸರೋಜ, ಪದ್ಮ, ಸವಿತ ಇದ್ದರು.


