ಮಂಡ್ಯ: ಮೈಸೂರಿನ ನಾರಾಯಣ ಆಸ್ಪತ್ರೆಯು ಸಂಕೀರ್ಣ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮೊಣಕಾಲು ಸಂಧಿವಾತ (ಅರ್ಥರ್ಥ್ರೈಟಿಸ್) ರೋಗಿಗಳಿಗೆ ಅತ್ಯಂತ ನಿಖರತೆಯ ಸುಧಾರಿತ ‘ರೋಬೋಟಿಕ್ ಟೋಟಲ್ ಕೀಲು ಬದಲಾವಣೆ’ (ಟಿಕೆಆರ್) ಚಿಕಿತ್ಸೆಯನ್ನು ಘೋಷಿಸಿದೆ ಎಂದು ಆಸ್ಪತ್ರೆಯ ಹಿರಿಯ ಮೂಳೆ ಚಿಕಿತ್ಸಾ ತಜ್ಞ ಡಾ.ಉಮೇಶ್ ಚೌಡಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದ್ರೋಗ (ಆಂಜಿಯೋಪ್ಲ್ಯಾಸ್ಟಿ/ಬೈಪಾಸ್), ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಂತಹ ಕಠಿಣ ಸ್ಥಿತಿಯಿರುವ ರೋಗಿಗಳಿಗೂ ಯಶಸ್ವಿಯಾಗಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.
ಈ ಶಸ್ತ್ರಚಿಕಿತ್ಸೆಯ ಮೂಲಕ 3ಡಿ ಶಾರೀರಿಕ ಮ್ಯಾಪಿಂಗ್ ತಂತ್ರಜ್ಞಾನ ಬಳಸಿ ರೋಗಿಯ ಸುತ್ತಮುತ್ತಲಿನ ಅಂಗಾಂಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ. ಇದರಿಂದಾಗಿ ಕನಿಷ್ಠ ನೋವು, ಸಣ್ಣ ಹೊಲಿಗೆ, ಕಡಿಮೆ ರಕ್ತಸ್ರಾವ, ಇತರೆ ಅಂಗಗಳ ಮೇಲೆ ಕಡಿಮೆ ಒತ್ತಡ ಹಾಗೂ ಶೀಘ್ರ ಚೇತರಿಕೆ ಸಾಧ್ಯವಾಗಲಿದ್ದು, ರೋಗಿಗಳು 3 ದಿನಗಳಲ್ಲಿ ಬಿಡುಗಡೆ ಆಗಬಹುದು ಎಂದು ಮಾಹಿತಿ ನೀಡಿದರು.
ಆರೋಗ್ಯವಂತರಾಗಿದ್ದು, ಯಾವುದೇ ಸಮಸ್ಯೆ ಇಲ್ಲದಿದ್ದು, ವೈದ್ಯರ ಸಲಹೆಗಳನ್ನು ಸರಿಯಾಗಿ ಪಾಲಿಸಿದರೆ ಕೀಲು ಬದಲಾವಣೆಯು 20ರಿಂದ 30 ವರ್ಷಗಳವರೆಗೆ ಇರಲಿದೆ. ಮೂಳೆ ಸಂಬಂಧಿತ ನೋವುಗಳಿಗೆ ತಡ ಮಾಡದೇ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಆರ್ಥಟಿಸ್ ಹಂತಕ್ಕೆ ತಲುಪಿ ತುಂಬಾ ನೋವು ಅನುಭವಿಸಬೇಕಾಗುತ್ತದೆ ಎಂದು ಪ್ರಶ್ನೆಗಳಿಗೆ ಉತ್ತರ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ಸೂಪರಿಡೆಂಟ್ ಡಾ.ಅಶೋಕ್, ಸಂಕೀರ್ಣ ಹಾಗೂ ಹೆಚ್ಚಿನ ಅಪಾಯವಿರುವ ಶಸ್ತ್ರಚಿಕಿತ್ಸೆಗಳಿಗಾಗಿ ಇನ್ನು ಮುಂದೆ ಮಂಡ್ಯ ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರು ಬೆಂಗಳೂರು ಅಥವಾ ಚೆನ್ನೈನಂತಹ ಮಹಾನಗರಗಳಿಗೆ ತೆರಳುವ ಅಗತ್ಯವಿಲ್ಲ. ಮೈಸೂರಿನ ನಾರಾಯಣ ಆಸ್ಪತ್ರೆಯಲ್ಲಿಯೇ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ತಗುಲುವಷ್ಟೇ ವೆಚ್ಚದಲ್ಲಿ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಈ ಸುಧಾರಿತ ರೋಬೋಟಿಕ್ ಚಿಕಿತ್ಸೆ ಲಭ್ಯವಿದೆ” ೆ ಎಂದು ತಿಳಿಸಿದರು.
“ಹೆಚ್ಚಿನ ಸಮಸ್ಯೆ ಇರುವಂತಹ ಶಸ್ತ್ರಚಿಕಿತ್ಸೆಗಳ ವೇಳೆ ರೋಗಿಗೆ ವಿಶೇಷ ಕಾಳಜಿ ಹಾಗೂ ತಜ್ಞರ ತಂಡದ ಅಗತ್ಯವಿರುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಬಹುಶಿಸ್ತಿನ ತಂಡ ಇರಲಿದ್ದು, ಹೃದ್ರೋಗ, ಮರಗಟ್ಟುವುದು (ಅರಿವಳಿಕೆ), ಇಂಟೆನ್ಸಿವ್ ಕೇರ್, ರ್ಸಿಂಗ್ ಕೇರ್ ಹಾಗೂ ಫಿಜಿಯೋಥೆರಪಿ ವಿಭಾಗಗಳ ತಜ್ಞರು ಒಂದೇ ಸೂರಿನಡಿ ಲಭ್ಯವಿದ್ದಾರೆ. ಇದರಿಂದ ರೋಗಿಗಳು ವಿಭಿನ್ನ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪುತ್ತದೆ” ಎಂದರು.


