Friday, October 9, 2026
spot_img

ಮಂಡ್ಯ ಮೆಡಿಕಲ್ ಕಾಲೇಜು ಜಾಗ ಒತ್ತುವರಿ:ಯಾರ್ಯಾರ ಪಾಲು ಎಷ್ಟು?

ಮಿಮ್ಸ್ ಜಾಗ ಒತ್ತುವರಿ: ಯಾರ್ಯಾರು ಎಷ್ಟು ಒತ್ತುವರಿ ಮಾಡಿದ್ದಾರೆ?

ಮಂಡ್ಯ: ಮಿಮ್ಸ್‌ಗೆ ಭೂಸ್ವಾಧೀನವಾದ 39.33 ಎಕರೆಯಲ್ಲಿ 14.24.08 ಎಕರೆ (ಎಕರೆ.ಗುಂಟೆ.ಎಂಟುಆಣೆ) ಒತ್ತುವರಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ತನಿಖಾ ತಂಡ ದೃಢಪಡಿಸಿದೆ.2025 ಜುಲೈ 1 ರಂದು ಕರ್ನಾಟಕ ರಕ್ಷಣಾ ವೇದಿಕೆ.ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.ಕರುನಾಡ ಸೇವಕರು ಸಂಘಟನೆಗಳು ಮೆಡಿಕಲ್ ಕಾಲೇಜು ಮತ್ತು ತೆರವುಗೊಳಿಸುವಂತೆ ಜಂಟೀ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗಾಗಿ ಜಿಲ್ಲಾಧಿಕಾರಿ ಡಾ.ಕುಮಾರ್ ಅಂದೇ ಈ ಸಮಿತಿ ರಚಿಸಿ ಆದೇಶ ಹೊರಡಿಸಿದ್ದರು.ಸಮಿತಿಯ ಅಂತಿಮ ವರದಿಯಂತೆ.

ಉಪವಿಭಾಗಾಧಿಕಾರಿ, ತಹಶೀಲ್ದಾರ್, ಭೂದಾಖಲೆಗಳ ಸಹಾಯಕ ನಿರ್ದೇಶಕರು, ನಗರಸಭೆ ಪೌರಾಯುಕ್ತರು, ಮಿಮ್ಸ್ ನಿರ್ದೇಶಕರು ಮತ್ತು ಮುಖ್ಯ ಆಡಳಿತಾಧಿಕಾರಿ ಸಹಿ ಮಾಡಿರುವ ಈ ವರದಿ (25.09.2026) ಒತ್ತುವರಿದಾರರ ಪಟ್ಟಿಯನ್ನೂ ನೀಡಿದೆ.

ಒಟ್ಟು ಚಿತ್ರಣ
ತಮಿಳು ಕಾಲೋನಿ ನಿವಾಸಿಗಳು: 9.17.00 ಎಕರೆ ಭೂ ಪ್ರದೇಶದಲ್ಲಿ ಅತಿಕ್ರಮಿಸಿದ್ದಾರೆ. (ಸರ್ವೆ ನಂ. 829/5, 824/6, 824/4, 825/2, 824/3, 16/1, 19/4, 18, 19/1, 19/2, 19/3, 21/3, 20/1)
ಸರ್ಕಾರಿ ಕಟ್ಟಡಗಳು (2): 2.11.04 ಎಕರೆ
ಖಾಸಗಿ ಕಟ್ಟಡಗಳು (18): 12.13.04 ಎಕರೆ (ಇದರಲ್ಲಿ ತಮಿಳು ಕಾಲೋನಿಯ ಭಾಗವೂ ಸೇರಿದೆ)

ಸರ್ಕಾರಿ ಸಂಸ್ಥೆಗಳು
ಕಲ್ಲು ಕಟ್ಟಡ ಮತ್ತು ಮಹಿಳಾ ಕಾಲೇಜು, ಎಸ್‌ಸಿ/ಎಸ್‌ಟಿ ಸರ್ಕಾರಿ ಹಾಸ್ಟೆಲ್ ಮತ್ತು ಸರ್ಕಾರಿ ಪ್ರೌಢಶಾಲೆ ಜಾಗವು ಸರ್ವೆ ನಂ. 829/5, 824/6, 825/1ಎ ಮತ್ತು 21/3ರಲ್ಲಿ ವಿವಿಧ ಭಾಗಗಳಲ್ಲಿ (0.00.12 ರಿಂದ 1.00.04 ಎಕರೆವರೆಗೆ) ಇದೆ. ಸಂಚಾರಿ ಮತ್ತು ಮಹಿಳಾ ಪೊಲೀಸ್ ಠಾಣೆ ಸರ್ವೆ ನಂ. 827/2ರಲ್ಲಿ 0.04.00 ಎಕರೆಯಲ್ಲಿದೆ.

ಸಂಸ್ಥೆಗಳು
ರೋಟರಿ ಕ್ಲಬ್ ಶಿಕ್ಷಣ ಸಂಸ್ಥೆ, ಮಂಡ್ಯ: ಸರ್ವೆ ನಂ. 827/5, 827/1ಬಿ, 828/1, 828/2, 824/6, 825/2, 824/3ರಲ್ಲಿ ಒಂಬತ್ತು ಭಾಗಗಳಲ್ಲಿ ಒತ್ತುವರಿ ಇದೆ. ಅತಿ ದೊಡ್ಡ ಭಾಗಗಳು 0.17.08 ಮತ್ತು 0.17.04 ಎಕರೆ. ಒಟ್ಟು ಲೆಕ್ಕದ ಪ್ರಕಾರ ಒಟ್ಟು ಸುಮಾರು 1.10.12 ಎಕರೆ.

ವರ್ತಕರ ಸಂಘ ವಾಣಿಜ್ಯ ಮಳಿಗೆ (ಭಾಗಶಃ): ಸರ್ವೆ ನಂ. 827/3ರಲ್ಲಿ 0.05.04 ಎಕರೆ.
ವ್ಯಕ್ತಿಗಳು (ವರದಿಯಲ್ಲಿ ಹೆಸರಿಸಿದಂತೆ)
ಹೆಸರು
ಸರ್ವೆ ನಂ.
ವಿಸ್ತೀರ್ಣ (ಎ.ಗುಂ.ಆಣೆ)
ಶ್ರೀ ರಾಜಮಲ್ಲಯ್ಯ ಬಿನ್ ವೆಂಕಯ್ಯ
ಸರ್ವೇ ನಂ 827/3, 827/2 ರಲ್ಲಿ
0.01.12 ಮತ್ತು 0.09.00

ಹೆಚ್.ಎಂ. ಶ್ರೀನಿವಾಸ್
ಸರ್ವೇ ನಂ 827/5, 828/1
0.03.08 ಮತ್ತು 0.00.08

ಹೆಚ್.ಎಲ್. ಪುಟ್ಟಯ್ಯ ಬಿನ್ ಪಟೇಲ್ ಲಿಂಗೇಗೌಡ
ಸರ್ವೇ ನಂ 827/5 ರಲ್ಲಿ
0.04.00
ಡಾ. ಪರಮೇಶ್ವರ್ ಸಿ.ಎನ್ ( ಎಸ್ ಡಿ ಜಯರಾಂ ಆಳಿಯ)
827/5, 824/6, 825/2, 824/3
ಐದು ಭಾಗ, ಒಟ್ಟು ಸುಮಾರು 0.10.12 ಗುಂಟೆ ಭೂಮಿಯಲ್ಲಿದ್ದಾರೆ.

ಶ್ರೀಮತಿ ನಾಗರತ್ನ ಬಿನ್ ಜಿ.ಕೆ. ಕೆಂಪೇಗೌಡ
20/1
0.03.00

ಗಿರಿಜಾಮಣಿ ಕೋಂ ಡಾ. ಬಿ.ಎನ್. ಜಯಂತ್ ಕುಮಾರ್
20/1
0.02.04

ಡಾ. ಕೆ.ಟಿ. ವನಿತಾ ಕೋಂ ಡಾ. ಬಿ.ಎನ್. ಜಯಂತ್ ಕುಮಾರ್
ಸರ್ವೇ ನಂ 20/1
0.02.04

ಕೆ.ಎನ್. ಶಶಿಕಲಾ ಮತ್ತು ಕೆ.ಎನ್. ರಂಗನಾಥ
20/1
0.02.04

ಈ. ಮನೋಹರ್ ಬಿನ್ ಲೇ ಎಳುಮಲೈ ಮೊದಲಿಯಾರ್
20/1
0.02.04

ಮೀರಾ ಕೋಂ ಶಿವಲಿಂಗಯ್ಯ
20/1
0.02.00

ಕೆ.ಎಸ್. ಸಂತಾನ ಗೋಪಾಲ್, ಕೆ.ಎಸ್. ಸುಧಾ, ಕೆ.ಎಸ್. ಸುರೇಶ್, ಕೆ.ಎಸ್. ಪ್ರಸಾದ್
20/1
0.02.04

ಉಷಾ ಕೋಂ ಸಂಕರ್ಷಣ ಮೂರ್ತಿ
20/1
0.02.04

ಡಿ.ಸಿ. ಯದುನಾಥ್, ಸುರಭಿ ಎಂ.ವೈ., ಚಿರಂತನ್
20/1
0.01.00

ವರದಿಯ ಪ್ರಮುಖ ಅಂಶಗಳು
ರಾಜಮಲ್ಲಯ್ಯ ಅವರ ಜಾಗವನ್ನು ನಗರಸಭೆಯು “ಅಕ್ವೈರ್” ಆದ ಜಾಗದಲ್ಲಿ ರಚಿಸಿದ ಬಡಾವಣೆಯ ನಿವೇಶನವೆಂದು ವರದಿ ಉಲ್ಲೇಖಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವೈಯಕ್ತಿಕ ಪ್ರಕರಣ (SLP(C) 028202/2023) ಬಾಕಿ ಇದೆ.

ಪುಟ್ಟಯ್ಯ ಅವರ ಭಾಗವನ್ನು ದಾನಪತ್ರ ಮತ್ತು ವಾಗಿರುವ ಪತ್ರದ ಆಧಾರದಲ್ಲಿ ಸಂಬಂಧಿಕರಿಗೆ ವರ್ಗಾಯಿಸಲಾಗಿದ್ದು, ಇದಕ್ಕೆ ಖಾತೆ ದಾಖಲಾಗಿಲ್ಲ ಎಂದು ವರದಿ ಹೇಳಿದೆ.

ಈ ಜಾಗಗಳಿಗೆ ನಗರಸಭೆ ಈಗಾಗಲೇ ಖಾತೆ ನೀಡಿದೆ. ಆದರೆ ಯಾವ ದಾಖಲೆಗಳ ಆಧಾರದ ಮೇಲೆ ನೀಡಲಾಗಿದೆ ಎಂಬುದಕ್ಕೆ ಪೂರಕ ದಾಖಲೆಗಳಿಲ್ಲ. ಸಕ್ಷಮ ಪ್ರಾಧಿಕಾರದ ಮಂಜೂರಾತಿ ಇಲ್ಲದೆ ಖಾಸಗಿಯವರಿಗೆ ಖಾತೆ ನೀಡಲು ಅವಕಾಶವಿಲ್ಲ ಎಂದು ತಂಡ ಹೇಳಿದೆ. ಅಕ್ರಮ ಖಾತೆಗಳನ್ನು ರದ್ದುಪಡಿಸಲು ಪೌರಾಯುಕ್ತರಿಗೆ ಶಿಫಾರಸು ಮಾಡಿದೆ.
ಒತ್ತುವರಿ ತೆರವಿಗೆ ಮಿಮ್ಸ್ ಮುಖ್ಯ ಆಡಳಿತಾಧಿಕಾರಿಗಳು ಕರ್ನಾಟಕ ಸಾರ್ವಜನಿಕ ಆವರಣ (ಅನಧಿಕೃತ ಅಕ್ರಮಿತರ ಒಕ್ಕಲೆಬ್ಬಿಸುವಿಕೆ) ಅಧಿನಿಯಮ 1974ರ ಅಡಿ ನೋಟಿಸ್ ನೀಡಬೇಕು ಎಂದು ಸೂಚಿಸಲಾಗಿದ್ದು.

ಅದರನ್ವಯ ಈಗಾಗಲೇ ಹಲವರಿಗೆ ನೋಟಿಸ್ ಜಾರಿಯಾಗಿದ್ದು ಕೆಲವರು ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ.ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ೧೪ ಎಕರೆಗೂ ಹೆಚ್ಚಿನ ಭೂಮಿ ತಮಿಳು ಕಾಲೋನಿ ಸೇರಿದಂತೆ ವಿವಿಧ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದು ವರದಿಯಲ್ಲಿ ಸಾಬೀತಾಗಿದ್ದು.

ಆಸ್ಪತ್ರೆಯ ವಿಸ್ತರಣೆಗೆ ಜಿಲ್ಲೆಯ ಜನರಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲು ಒತ್ತುವರಿ ತೆರವು ಅನಿವಾರ್ಯವಾಗಿದೆ.ಆದರೆ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಒತ್ತುವರಿ ತೆರವಾಗದ ಜಿನ್ ಕನ್ನಡ ಪರ ರೈತಪರ ಸಂಘಟನೆಗಳು ನಿರಂತರ ಹೋರಾಟ ನಡೆಸಿದ ಪರಿಣಾಮ ಒತ್ತುವರಿ ತೆರವು ತಾರ್ಕಿಕ ಅಂತ್ಯದತ್ತ ಸಾಗಿದೆ.
ಈ ನಡುವೆ ತಮಿಳು ಕಾಲೋನಿ ಪರ ಕೆಲ ಸಂಘಟನೆಗಳು ಬಲಾಢ್ಯರ ಒತ್ತುವರಿ ತೆರವುಗೊಳಿಸದಿದ್ದರೆ ತಾವು ತೆರವುಗೊಳಿಸುವುದಿಲ್ಲ ಎಂದು ಸವಾಲು ಎಸೆದಿವೆ.

ಒತ್ತುವರಿಯಲ್ಲಿ ಸುಮಾರು ಹತ್ತು ಎಕರೆ ಭೂಮಿ ಆಕ್ರಮಿಸಿರುವ ತಮಿಳು ಕಾಲೋನಿ ಒತ್ತುವರಿಯಲ್ಲಿ ಸಿಂಹಪಾಲು ಪಡೆದಿದೆ.

ನ್ಯಾಯಾಲಯದಲ್ಲಿ ೨೩ ಮಂದಿ ಕುಟುಂಬಗಳನ್ನು ತೆರವುಗೊಳಿಸದಂತೆ ನ್ಯಾಯಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು.ಇನ್ನುಳಿದ ತಮಿಳು ವಾಸಿಗಳು ಹಾಗೂ ಬಲಾಢ್ಯರನ್ಮು ತೆರವುಗೊಳಿಸಲು ಕಾನೂನಿನ ಯಾವುದೆ ಅಡ್ಡಿ ಇಲ್ಲವಾಗಿದೆ.

ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಗಟ್ಟಿಯಾದ ನಿರ್ಧಾರ ಕೈಗೊಂಡರೆ ಒತ್ತುವರಿ ತೆರವು ಅಸಾಧ್ಯವಲ್ಲ ಎಂಬುದು ಜಿಲ್ಲೆಯ ಜನರ ಅಭಿಪ್ರಾಯವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!