Sunday, July 19, 2026
spot_img

ಮೈಶುಗರ್ ಮಾದರಿ ಕಾರ್ಖಾನೆ ಎಂದು ಘೋಷಿಸಲು ಆಗ್ರಹ

ಮೈಶುಗರ್ ಮಾದರಿ ಕಾರ್ಖಾನೆಯಾಗಿ ಘೋಷಿಸಲು ಒತ್ತಾಯ

 

 

ಮೈಶುಗರ್ ಕಾರ್ಖಾನೆಯ ಪುಶ್ಚೇತನಕ್ಕಾಗಿ ಅಗತ್ಯ ಬಾಯ್ಲಿಂಗ್ ಹೌಸ್.ಡಿಸ್ಟಲರಿ ಕೋಜನ್ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯಾರಂಭ ಮಾಡಲು ಅಗತ್ಯ ಆಧುನೀಕರಣಗೊಳಿಸಿ ರಾಜ್ಯದ ಮಾದರಿ ಸಕ್ಕರೆ ಕಾರ್ಖಾನೆಯಾಗಿ ಘೋಷಿಸುವಂತೆ ಮೈಶುಗರ್ ಉಳಿಸಿ ಹೋರಾಟ ಸಮಿತಿ ಆಗ್ರಹಿಸಿದೆ.

ನಗರದ ರೈತಸಭಾಂಗಣಾದ ಆವರಣದಲ್ಲಿನ ರಾಷ್ಟಕವಿ ಕುವೆಂಪು ಪ್ರತಿಮೆ ಎದುರು ಜೂ ೧೫ ರಿಂದ ಹಮ್ಮಿಕೊಂಡಿರುವ ರೈತ ಜನಾಂದೋಲನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಸಮಿತಿಯ ಮುಖಂಡರು ಮಾದರಿ ಕಾರ್ಖಾನೆಯಾಗಿ ಘೋಷಿಸಿ ದಕ್ಷ ಆಡಳಿತ ವ್ಯವಸ್ಥೆ ರೂಪಿಸಿದರೆ ಉಪ ಉತ್ಪನ್ನಗಳನ್ನು ಆಧರಿಸಿ ಟನ್ ಕಬ್ಬಿಗೆ ಐದು ಸಾವಿರ ರೂಪಾಯಿ ನೀಡಬಹುದು.ಒಂದು ಸಾವಿರಕ್ಕು ಹೆಚ್ಚಿನ ಸ್ಥಳೀಯ ಯುವಕರಿಗೆ ಉದ್ಯೋಗ ಒದಗಿಸಬಹುದು.ಈಗಾಗಲೇ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ೪೫೦ ಕೋಟಿ ಲಾಭ ಮಾಡಿ ದಕ್ಷ ಆಡಳಿತವಿದ್ದರೆ ಸರಕಾರಿ ಉದ್ದಿಮೆಗಳು ಲಾಭ ಸಾಧಿಸಬಹುದು ಎಂಬದನ್ನು ಸಾಬೀತು ಮಾಡಿವೆ.ಜಿಲ್ಲೆಯಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿದ್ದರು ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ನಷ್ಟಕ್ಕೆ ದೂಡುವಲ್ಲಿ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳೇ ಹೊಣೆ ಹೊರತು ರೈತರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದರಿ ಕಾರ್ಖಾನೆ ಘೋಷಣೆಯಿಂದ ರಾಜ್ಯದ ಒಂದು ಕೋಟಿಗೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ.ಕಬ್ಬಿಗೆ ವೈಜ್ಞಾನಿಕ ಬೆಲೆ ದೊರಕುವ ಜತೆಗೆ ಉದ್ಯೋಗವು ಸೃಷ್ಡಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮನ್ ಮೂಲ್ ಡೈರಿಯಿಂದ ಹತ್ತು ಸಾವಿರಕ್ಕು ಹೆಚ್ಚಿನ ಉದ್ಯೋಗ ದೊರಕಿದೆ.ಒಂದು ಲಕ್ಷಕ್ಕು ಹೆಚ್ಚು ಹೈನುಗಾರಿಕೆ ಕುಟುಂಬಗಳು ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ.

ಆದರೆ ಮೈಶುಗರ್ ಕಾರ್ಖಾನೆಯನ್ನು ಅಭಿವೃದ್ದಿಪಡಿಸುವ ಬದಲು ಅದರ ಆಸ್ತಿಗಳನ್ನು ಅಗ್ಗದ ದರಕ್ಕೆ ಮಾರಿ ಉದ್ದೇಶಪೂರ್ವಕವಾಗಿ ಕಾರ್ಖಾನೆಯನ್ನು ನಷ್ಟಕ್ಕೆ ದೂಡುವ ಪ್ರಯತ್ನ ನಡೆದಿದೆ
ಎಂದು ಆಪಾದಿಸಿದರು.

ರೈತ ಜನಾಂದೋಲನಾ ಜಾಥವೂ ಜೂ ೧೫ ರಿಂದ ಮೈಶುಗರ್ ವ್ಯಾಪ್ತಿಯ ೧೧೦ ಹಳ್ಳಿಗಳಲ್ಲಿ ಸಂಚರಿಸಲಿದ್ದು.ಮೈಶುಗರ್ ನ ಆಗುಹೋಗು ಹಾಗೂ ಸುಧಾರಣೆ ಬಗ್ಗೆ ಜಾಗೃತಿ ಮೂಡಿಸಲಿದೆ.ರೈತರು ವಿದ್ಯಾರ್ಥಿಗಳು ಜಿಲ್ಲೆಯ ಯುವಜನ ಈ ಜನಾಂದೋಲದೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ರೈತಸಂಘದ ಉಪಾಧ್ಯಕ್ಷ ಶಿವಳ್ಳಿ ಚಂದ್ರು.ಕೊಮ್ಮೇರಹಳ್ಳಿ ಆನಂದ್.ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ.ಸೋಮಶೇಖರ.ವೆಂಕಟೇಶ್. ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ. ಎಸ್ ಕೆ ರಾಜೂಗೌಡ.ರಾಜೇಂದ್ರ ಸಿಂಗ್ ಬಾಬು.ಸಿಐಟಿಯೂನ ಸಿ.ಕುಮಾರಿ. ಚಂದ್ರು.
ಭ್ರಷ್ಟಾಚಾರ ವಿರೋಧಿ ವೇದಿಕೆಯ ಶಿವರಾಮೇಗೌಡ.ಕಿರಣ್ ಕುಮಾರ್ ಭಾಗೀಯಾಗಿದ್ದರು.

ಜನಾಂದೋಲನದ ಆಗ್ರಹಗಳು

೧.ಮೈಶುಗರ್ ಸಮಗ್ರ ವ್ಯವಹಾರಗಳ ಶ್ವೇತಪತ್ರವನ್ನು ಹೊರಡಿಸಿ ಜನರ ಮುಂದಿಡಬೇಕು

೨.ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ರಾಜ್ಯದ ಮಾದರಿ ಕಾರ್ಖಾನೆ ಎಂದು ಘೋಷಿಸಿ ಅಗತ್ಯ ಬಾಯ್ಲಿಂಗ್ ಹೌಸ್.ಡಿಸ್ಟಿಲರಿ ಸ್ಥಾಪನೆ ಅಗತ್ಯ ಉದ್ಯೋಗ ಸೃಷ್ಟಿಸಿ.ಉಪ ಉತ್ಪನ್ನಗಳನ್ನು ಸೇರಿಸಿ ರಾಜ್ಯದ ಕಬ್ಬು ದರ ನಿಗದಿಗೆ ಮಾದರಿ ಕಾರ್ಖಾನೆಯಾಗಿ ಅಭಿವೃದ್ದಿಪಡಿಸಿ.ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ.ರಾಜಕೀಯ ಹಸ್ತಕ್ಷೇಪ ನಿಲ್ಲಿಸಿ.

೩.ಮೈಶುಗರ್ ಗೆ ಸೇರಿದ ಯಾವುದೆ ಆಸ್ತಿಯನ್ನು ಲೀಸು ಬಾಡಿಗೆ ಕ್ರಯದ ಹೆಸರಿನಲ್ಲಿ ವಿಲೇವಾರಿ ಮಾಡದಂತೆ ತಕ್ಷಣ ನಿರ್ಬಂಧ ಹೇರಬೇಕು

೪.ಮೈಶುಗರ್ ನಲ್ಲಿ ಅಕ್ರಮದ ಮೂಲಕ ಕಾರ್ಖಾನೆಯ ನಷ್ಟಕ್ಕೆ ಕಾರಣರಾದ ಈ ಹಿಂದಿನ ಅಧ್ಯಕ್ಷ ನಾಗರಾಜಪ್ಪ ವಿರುದ್ದ. ಹೈಕೋರ್ಟ್ ನೀಡಿರುವ ಆಸ್ತಿ ಮುಟ್ಟುಗೋಲು ಆದೇಶವನ್ನು ಜಾರಿಗೊಳಿಸಿ.ಯಾವುದೆ ನಿಗಮ ಮಂಡಳಿ ಅಧ್ಯಕ್ಷರಿಗೆ ಸದಸ್ಯರಿಗೆ ಉತ್ತರದಾಯಿತ್ವ ನಿಗದಿಪಡಿಸಿ.

೫.ಕಾರ್ಖಾನೆಯನ್ನು ಅಭಿವೃದ್ದಿಪಡಿಸುವುದರಿಂದ ಲಭ್ಯವಾಗುವ ಒಂದು ಸಾವಿರ ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಿ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!