
ಮೈಶುಗರ್ ಉಳಿವಿಗಾಗಿ ನಗರದಲ್ಲಿ ಜನಾಂದೋಲನಾ ಜಾಥ
ಮೈಶುಗರ್ ಕಾರ್ಖಾನೆಯ ಅವ್ಯವಹಾರಗಳ ಸಮಗ್ರ ತನಿಖೆ ಹಾಗೂ ಟನ್ ಕಬ್ಬಿಗೆ ₹5000 ನೀಡುವಂತೆ ಆಗ್ರಹಿಸಿ ಮೈಶುಗರ್ ಉಳಿಸಿ ಹೋರಾಟ ಸಮಿತಿ ನಡೆಸುತ್ತಿರುವ ಮೊದಲ ಹಂತದ ರೈತ ಜನಾಂದೋಲನಾ ಜಾಥ ನಗರದಲ್ಲಿ ಬುಧವಾರ ವಾಹನ ಜಾಥ ನಡೆಸಿತು.
ಕಾಳಿಕಾಂಬ ದೇವಾಲಯದಿಂದ ಹೊರಟ ವಾಹನ ಜಾಥ ನಗರದ ವರ್ತಕರು ನಾಗರೀಕರಿಗೆ ಕರಪತ್ರಗಳನ್ನು ವಿತರಿಸಿದರು.ಅಲ್ಲಲ್ಲಿ ವೃತ್ತಗಳಲ್ಲಿ ಕಿರುಸಭೆಗಳನ್ನು ನಡೆಸಿ ಮೈಶುಗರ್ ಕಾರ್ಖಾನೆಯು ಸಕಾಲಕ್ಕೆ ಆರಂಭವಾಗದೆ ಕೃಷ್ಣರಾಜ ಸಾಗರದಲ್ಲಿ ಅಗತ್ಯ ನೀರು ಸಂಗ್ರಹವಿಲ್ಲದೆ ಬೆಳೆದ ಬೆಳೆ ಒಣಗುತ್ತಿದೆ.
ಇಂಥಹ ಸಂಧರ್ಭದಲ್ಲಿ ಬೆಂದಮನೆಯಲ್ಲಿ ಗಳ ಹಿರಿಯುವಂತೆ ಮೈಶುಗರ್ ಕಾರ್ಖಾನೆಯಲ್ಲಿ ಅನಗತ್ಯ ಸಿವಿಲ್ ಕಾಮಗಾರಿಗಳು.ಯಂತ್ರೋಪಕರಣಗಳು ಹಾಗೂ ಮೈಶುಗರ್ ಆಸ್ತಿಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ.
ಸಕಾಲಕ್ಕೆ ಕಬ್ಬು ಅರೆಯದಿದ್ದರೆ ರೈತರ ವರ್ಷದ ಶ್ರಮ ನೆಲಕಚ್ಚುತ್ತಿದೆ.ಮೈಶುಗರ್ ನ ಅದಕ್ಷ ಹಾಗೂ ಭ್ರಷ್ಡ ಅಧ್ಯಕ್ಷರಿಂದ ರೈತರ ತಲೆ ಮೇಲೆ ಸಾಲದ ಹೊರೆ ಹೊರಿಸಲಾಗುತ್ತಿದೆ.
ಈ ಕುರಿತು ಮುಂದಿನ ದಿನಗಳಲ್ಲಿ ತೀವ್ರ ಥರದ ಹೋರಾಟಕ್ಕೆ ಧುಮುಕಿ ಕಾರ್ಖಾನೆ ಉಳಿಸುವಂತೆ ಸಭೆಗಳಲ್ಲಿ ಕರೆ ನೀಡಲಾಯಿತು.
ಪೇಟೆ ಬೀದಿ ರಾಜೇಂದ್ರ ಪ್ರಸಾದ್ ರಸ್ತೆ.ನೂರಡಿ ರಸ್ತೆ ವಿವಿ ರಸ್ತೆ. ಗುತ್ತಲು ರಸ್ತೆ ಸೇರಿದಂತೆ ನಗರದ ಹಲವೆಡೆ ಜಾಥ ಸಂಚರಿಸಿತು.
ಜಾಥದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ.ವೆಂಕಟೇಶ್ ಸೋಮಶೇಖರ. ಸಿಐಟಿಯೂನ ಸಿ.ಕುಮಾರಿ.ಚಂದ್ರು. ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ. ಎಸ್ ಕೆ ರಾಜೂಗೌಡ.ರಾಜೇಂದ್ರ. ಕರ್ನಾಟಕದ ರಾಷ್ಟ್ರ ಸಮಿತಿ ಪಕ್ಷದ ರಮೇಶ್ ಗೌಡ.ಮಲ್ಲೇಶ್ ಮೈಶುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಸಾತನೂರು ವೇಣುಗೋಪಾಲ.ಚಿನ್ನರಾಜು ವೆಂಕಟಲಕ್ಷ್ಮೀ.ಶಿವರಾಮು ಕಿರಣ್ ಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗೀಯಾಗಿದ್ದರು.


