#ಶಿಕ್ಷಕರ_ಕ್ಷೇತ್ರ_ಎಂದರೆ?
————15ವರ್ಷದ ಹಿಂದೆ
ನಾನೊಮ್ಮೆ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ನೋಡಲು ಹೊಂಟೆನು.
ಅವರು ಹಾಸನದ ಅರಕಲಗೂಡಿನ ಶಾಸಕರು. ಶಿಕ್ಷಕರ ಪದವೀಧರರ ಚುನಾವಣೆಗಳ ಮಾಡುವುದರಲ್ಲಿ #expert..
ಅದು ಮೈಸೂರಿನ ಪ್ರತಿಷ್ಟಿತ ladge. ಆ ಲಾಡಜನು ಒಬ್ಬ ಶಿಕ್ಷಕರ ಸಂಘದ ಮುಂದಾಳು ಫುಲ್ book ಮಾಡಿದ್ದನು.
ಅಲ್ಲಿ 60ಜನ ಶಿಕ್ಷಕರನ್ನು ಕೂಡಿ ಹಾಕಲಾಗಿತ್ತು. ಅವರು ಪೂರ್ಣ ಪ್ರಮಾಣದ ತೀರ್ಥಯಾತ್ರೆ ಮಾಡುತ್ತಿದ್ದರು.
ಅರಕಲಗೂಡಿನ ಶಾಕರಿಗೆ ಅವರನ್ನು ತೋರಿಸುವುದು ಈ ಕಾರ್ಯಕ್ರಮದ ಉದ್ದಿಶ್ಯವಾಗಿತ್ತು.
ಇವರ ತೋರಿಸಿ, ಇವರನ್ನು ಶಾಸಕರ ಜೊತೆ ಮಾತನಾಡಿಸಿ, ಈ ಫುಲ್ gang ನಿಮ್ಮ ಕಡೆಗಿದೆ ವ್ಯಾಪಾರ ಮಾಡಿಕೊಳ್ಳಿ ಎಂಬುದರ ಪೂರ್ವಭಾವಿ ಸಿದ್ಧತೆಯ ಭಾಗ ಈ ತೀರ್ಥಯಾತ್ರೆ!
ತೀರ್ಥಯಾತ್ರೆ ಅಂದ್ರೆ ಕಳ್ಳು ತುಂಬೋವಷ್ಟು costly ಎಣ್ಣೆ ಹಾಕೊಂಡು ಹೊಟ್ಟೆ ಹರಿದೋಗಿ, ಹೊಲಗೆ ಹಾಕೊಂಗೆ ಹಂದಿ ಕುರಿ ಕೋಳಿ ಬಾಡನು ತಿನ್ಕೊಂಡು ಉಳ್ಳಾಡೋದು ಅಂತ.
ಸೇಲಿಗೆ ready ಇದ್ದ ಶಿಕ್ಷಕರ ಕೊಂಡುಕೊಳ್ಳುವ ಅಭ್ಯರ್ಥಿ ಜೊತೆ ನಿಯೋಜಿತ ಶಾಶಕ ಬರುವ ಹೊತ್ತಿದೆ ರಾತ್ರಿ 10-30, 11ಗಂಟೆ ಆಗಿತ್ತು.
60ಜನ ಸೇಲಿಗಿದ್ದ ಶಿಕ್ಷಕರು ಆಗಲೇ ಎಣ್ಣೆ ಬಗ್ಗಿಸಿಕೊಂಡು ಬರಪೂರ ಬಾಡು ತಿಂದು ವಾಲಾಡಿ ಉಳ್ಳಾಡುತ್ತಿದ್ದರು.
ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಜೊತೆ ನಿಯೋಜಿತ ಶಾಸಕ ಬಂದನು.
ಬಂದಿದ್ದೆ ತಡ ಆಗಾಗಲೇ ಎಣ್ಣೆ ಹೊಡೆದು ಟೈಟ್ ಆಗಿ ಅರೆ ಬೆತ್ತಲಲ್ಲಿದ್ದ ಶಿಕ್ಷಕರು, ಅಡ್ರ ತೊಡ್ರ ಕಾಲು ಎತ್ತಾಕಿಕೊಂಡು, attention positionಲಿ ನಿಂತು ತಮ್ಮಗಳ ನಿಷ್ಠೆ ತೋರುವ ಪ್ರಯತ್ನ ಮಾಡುತ್ತಿದ್ದರು.
ಅವರ ಪ್ರಯತ್ನ ಪಲಕೊಡುತ್ತಿರಲಿಲ್ಲ. ಊಲಾಡುತ್ತಲೆ ಇದ್ದರು.
10ನಿಮಿಷ ಎಲ್ಲರ ಮುಖವನ್ನು ನೋಡಿ ತಲೆ ಎಣಿಸಿಕೊಂಡ ನಿಯೋಜಿತ ಶಾಸಕನು, ಶಿಕ್ಷಕರ ಮಂದೆಯ ಮುಂದಾಳನ್ನು ಬಾಯಿಲ್ಲಿ ಅಂತ ಕರಕೊಂಡು ಕಾರಿನ ಕಡೆಗೆ ಹೊರಟನು.
ಶಾಸಕರನು ಮತ್ತು ಅಭ್ಯರ್ಥಿಯನು ಹಿಂಬಾಲಿಸಿ ಶಿಕ್ಷಕರನು ವ್ಯಾಪಾರಕ್ಕೆ ಕರಕೊಂಡು ಬಂದು ಕುಡಿಹಾಕಿದ್ದ, ಶಿಕ್ಷಕರ ಮುಖಂಡನು ಹೊರಟನು.
ಅಲ್ಲಿ dealing ನಡೆಯುವುದಿತ್ತು. ತಲೆಗಿಷ್ಟು ದುಡ್ಡು fix ಮಾಡಿ ಓಟನು confirm ಮಾಡಬೇಕಿತ್ತು.
ಆದರೆ ಅಲ್ಲಿ ಹoಗಾಗಲಿಲ್ಲ. #expert ಶಾಸಕ ಹೇಳಿದನು ಅಲ್ಲಾ ಕಣೋ 60ಜನ ಅಂತಿದ್ದೀಯಾ ಎಲ್ಲಿದ್ದಾರೆ ಅಲ್ಲಿ! 28ಜನ ಮಾತ್ರ ಮಾರಾಟಕ್ಕೆ ready ಇರುವ ಶಿಕ್ಷಕರು ಇದ್ದಾರೆ ಎಂದನು.
ಈ ಮಾತು ಕೇಳಿದ ತಕ್ಷಣ ಶಿಕ್ಷಕರ ಮುಂದಾಳು ಗಾಬರಿಗೆ ಬಿದ್ದನು. ಶಾಸಕನು ಬರೀ ತಲೆ ಎಣಿಸಿಕೊಂಡು ದುಡ್ಡು ಕೊಟ್ಟು ಹೊರಡುತ್ತಾನೆ ಎಂಬುದು ಮುಂದಾಳಿನ ನಿರೀಕ್ಷೆ ಆಗಿತ್ತು. Expert ಶಾಸಕನ ಸೂಕ್ಶ್ಮತೆಯ ಮುಂದೆ ಇವನ ತಂತ್ರ ಠುಸ್ ಆಯಿತು.
ಆ ಸಂದರ್ಭಕ್ಕೆ, ಶಾಸಕನು 28ಜನರನ್ನು ಕೊಂಡುಕೊಳ್ಳಲಿಲ್ಲ. ಇವರೆಲ್ಲ ಚಂದಾಗಿದ್ದಾಗ ಇನ್ನೊಂದು ಬಾರೀ ಪೆರೇಡ್ ಮಾಡಿಸು ಅಂತ ಖರ್ಚಿಗೆ ಕಾಸನ್ನು ಕೊಡದೆ ಹೊಂಟೋದನು..
ಮುಂದಕ್ಕೆ ಅದೇನೇನಾಯ್ತೋ ಗೊತ್ತಿಲ್ಲ.
ಶಿಕ್ಷಕರ ಕ್ಷೇತ್ರದ ಚುನಾವಣೆಗಳು ಅಂದರೆ ಹೆಂಗಿರುತ್ತವೆ ಅನ್ನೋ ಕಾರಣಕ್ಕೆ ಈ ವಿಷಯ ಹೇಳಿದೆನು ಅಷ್ಟೇಯಾ..
#ಜೈತೀರ್ಥಯಾತ್ರೆ..
#ಜೈಶಿಕ್ಷಕ..
ಷಣ್ಮುಖೇಗೌಡ


