Wednesday, October 7, 2026
spot_img

ಬಲಾಢ್ಯರನ್ನು ತೆರವುಗೊಳಿಸಿದರೆ ತಮಿಳು ಕಾಲೋನಿ ತೆರವಿಗೆ ಬದ್ದ

ಬಲಾಢ್ಯರನ್ಮು ತೆರವುಗೊಳಿಸಿದರೆ ತಮಿಳು ಕಾಲೋನಿ ತೆರವಿಗೆ ಬದ್ದ:ಗುರುಪ್ರಸಾದ್

ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ೧೫ ಎಕರೆ ಭೂಮಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಬಲಾಢ್ಯರನ್ಮು ತೆರವುಗೊಳಿಸಿದರೆ ತಮಿಳು ಕಾಲೋನಿ ತೆರವುಗೊಳಿಸಲು ನಾವು ಬದ್ದ ಎಂದು ದಸಂಸ ರಾಜ್ಯ ನಾಯಕ ಗುರುಪ್ರಸಾದ್ ಕೆರಗೋಡು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೆಡಿಕಲ್ ಕಾಲೇಜಿಗೆ ಸೇರಿದ ಭೂಮಿಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ.ಆದರೆ ತಮಿಳರನ್ನು ಮಾತ್ರವೇ ಗುರಿ ಮಾಡಲಾಗುತ್ತಿದೆ.ಮಂಡ್ಯ ಸೇರಿದಂತೆ ಕರ್ನಾಟಕದ ಅಭಿವೃದ್ಧಿಗೆ ತಮಿಳರು ರಕ್ತ ಬೆವರು ಸುರಿಸಿದ್ದಾರೆ.
ಅವರ ಪೂರ್ವಿಕರು ಕನ್ನಂಬಾಡಿ ಕಟ್ಟಲು ಬಂದವರು.ಆಸ್ಪತ್ರೆ ವಿಸ್ತರಣೆಗಾಗಿ ತಮಿಳು ಕಾಲೋನಿ ತೆರವುಗೊಳಿಸಲು ನಮ್ಮ ಯಾವುದೆ ಅಭ್ಯಂತರ ಇಲ್ಲ ಆದರೆ ಅವರಿಗೂ ಒಂದು ಘನತೆಯುಕ್ತ ಬದುಕನ್ನು ಕಟ್ಟಿಕೊಡಬೇಕು ಬಡವರು ಅನ್ಯಭಾಷಿಕರು ಎನ್ನುವ ಕಾರಣಕ್ಕೆ ತಮಿಳರನ್ಮು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.

ಸಿಪಿಎಂ ಪಕ್ಷದ ಟಿ ಎಲ್ ಕೃಷ್ಣೇಗೌಡ ಮಾತನಾಡಿ. ಭಾಷ ಸಂಕುಚಿತ ಶಕ್ತಿಗಳು ತಮಿಳು ಕಾಲೋನಿ ತೆರವುಗೊಳಿಸುವಂತೆ ಸರಕಾರದ ಮೇಲೆ ಒತ್ತಡ ಹೇರುತ್ತಿವೆ.ತಮಿಳು ಕಾಲೋನಿ ನಿವಾಸಿಗಳಿಗೆ ಘನತೆಯುಕ್ತ ಬದುಕನ್ನು ಕಟ್ಟಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ.

ಅಷ್ಟಕ್ಕು ಆಸ್ಪತ್ರೆ ವಿಸ್ತರಣೆಗೆ ಎಷ್ಟು ಭೂಮಿ ಬೇಕು ಎಂಬ ನೀಲನಕ್ಷೇ ಸಿದ್ದ ಮಾಡದೆ ಆಸ್ಪತ್ರೆ ವಿಸ್ತರಣೆಗೆ ಭೂಮಿ ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ದಸಂಸದ ಎಂ.ವಿ.ಕೃಷ್ಣ.ಸಿ ಕುಮಾರಿ.ವಕೀಲ ವಿಶ್ವನಾಥ್ ಗೋಷ್ಡಿಯಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!