Friday, July 11, 2025
spot_img

ಹಣ-ಆಸ್ತಿಗಿಂತ ಆರೋಗ್ಯ ಮುಖ್ಯ :ಡಾ.ಅರವಿಂದ್

ಹಣ– ಆಸ್ತಿಗಿಂತ ಆರೋಗ್ಯ ಮುಖ್ಯ
ಪಾಂಡವಪುರ: ಆರೋಗ್ಯಕ್ಕಿಂತ ದೊಡ್ಡ ಭಾಗ್ಯವಿಲ್ಲ. ಹಣ, ಆಸ್ತಿ ಸಂಪಾದನೆಗಿಂತ ಆರೋಗ್ಯವಾಗಿರುವುದು ಮುಖ್ಯ ಎಂದು‌ ಪಟ್ಟಣದ ಸರ್ಕಾರಿ ಉಪವಿಭಾಗಿಯ ವೈದ್ಯಾಧಿಕಾರಿ ಡಾ ಅರವಿಂದ್ ಕಿವಿಮಾತು ಹೇಳಿದರು.
ತಾಲ್ಲೂಕಿನ ಹಾಗನಹಳ್ಳಿಯಲ್ಲಿ ಪ್ರಗತಿ ಸೇವಾ ಟ್ರಸ್ಟ್ ಪಾಂಡವಪುರ ಹಾಗೂ ಅಮ್ಮನ ಆಸರೆ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಡಾ ನಾಗೇಶ್ ರಾಗಿಮುದ್ದನಹಳ್ಳಿರವರ ಜನ್ಮದಿನದ ಅಂಗವಾಗಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣೆ ಮತ್ತು ಸಾಧನ ಸಾಹಿತ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆರೋಗ್ಯವಂತರು ದೇಶದಲ್ಲಿ ಸಾಧನೆಯನ್ನು ಸಾಧಿಸಲು ಸಾಧ್ಯ. ಪ್ರತಿಯೊಬ್ಬರಿಗೂ ಈ ಸತ್ಯ ಅರಿತು ಉತ್ತಮ ಆರೋಗ್ಯದೊಂದಿಗೆ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಂಕಲ್ಪ ಮಾಡಿಬೇಕಿದೆ.
ಪರಿಸರ ಸಂರಕ್ಷಣೆಯಲ್ಲಿನ ವೈಫಲ್ಯದಿಂದ ಇಂದು ಸೊಳ್ಳೆ ಕಾಟ ಹೆಚ್ಚಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಮನೆ ಮತ್ತು ಶಾಲೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ. ಸುತ್ತಲ ಪರಿಸರ ಸ್ವಚ್ಛವಾಗಿದ್ದರೆ ಯಾವುದೇ ಕಾಯಿಲೆ ಬರುವುದಿಲ್ಲ’ ಎಂದು ಹೇಳಿದರು.
ಜತೆಗೆ ನಾಗೇಶ್ ರಾಗಿಮುದ್ದನಹಳ್ಳಿ ಅವರು ಪ್ರತಿವರ್ಷ ತಮ್ಮ ಜನ್ಮದಿನದಂದು ಸಸಿನೆಟ್ಟು ರಕ್ಷಣೆ ಮಾಡುವುದು.ಹಾಗೂ ವಿವಿಧ ಕ್ಷೇತ್ರದಲ್ಲಿ‌ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸುವ ಸಂಪ್ರದಾಯವನ್ನು ಸರಿ ಸುಮಾರು 20 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.‌ ಸಮಾಜಕ್ಕೆ ಇವರ ಸೇವೆ ಅನನ್ಯವಾಗಿದೆ ಎಂದರು.
ಕಾರ್ಯಕ್ರಮದ ಎಂ. ಎಚ್ ವಿಜಯಕುಮಾರ್ ಮಾತನಾಡಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಿಸಬೇಕಿದೆ. ಈ‌ರೀತಿ ಕಾರ್ಯಕ್ರಮ ಆಯೋಜಿಸುವುದರಲ್ಲಿ ಡಾ ನಾಗೇಶ್ ರಾಗಿಮುದ್ದನಹಳ್ಳಿ ಅವರು ಕೇಂದ್ರ ಬಿಂದು ಆಗಿದ್ದಾರೆ. ಮಕ್ಕಳಿಗೆ ಉತ್ತಮ ಬಾಂಧವ್ಯದ ಮಹತ್ವ ಮತ್ತು ಸಂಸ್ಕಾರಗಳನ್ನು ಪೋಷಕಕರು ಕಲಿಸಬೇಕಿದೆ ಎಂದರು.


ಸಾಧನಾ ಸಾಹಿತ್ಯ ಪ್ರಶಸ್ತಿ: ಮಾಧ್ಯಮ ಕ್ಷೇತ್ರ ರಚಿತಕಾರ್ಯಪ್ಪ, ಬಿ.ಎನ್.ಪ್ರಸನ್ನ ಕುಮಾರ್, ಎಸ್.ಜೆ‌ಕುಮಾರ್. ಅಮೀತ್, ಕೃಷ್ಣೇಗೌಡ ಅವರಿಗೆ ಸನ್ಮಾನಿಸಿ ಸಾಧನಾ ಸಾಹಿತ್ಯ ಪ್ರಶಸ್ತಿ ‌ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ ಮಾರುತಿ ಮತ್ತು ಆಶ್ರಮದ ಪ್ರಭುಸ್ವಾಮಿ, ಕಾರ್ಯದರ್ಶಿ ಪುಪ್ಪವತಿ, ಚಿನಕುರಳಿ ವೈದ್ಯಾಧಿಕಾರಿ ಡಾ ಸಂದೀಪ್, ಡಾ ಬಿಸಿ ವಿಜಯಕುಮಾರ್, ಪದ್ಮಾವತಿ ಬೆಟ್ಟಯ್ಯ. ಕಾರ್ಯದರ್ಶಿ ಚಿಕ್ಕಲಿಂಗಸ್ವಾಮಿ ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!