Saturday, June 20, 2026
spot_img

ಬೆಳೆಗಳಿಗೆ ನೀರು ಹರಿಸಲು ಮೈಶುಗ ರ್ ಉಳಿಸಿ ಹೋರಾಟ ಸಮಿತಿ ಮನವಿ

ವಿಷಯ: ಕೃಷ್ಣರಾಜಸಾಗರ ಅಣೆಕಟ್ಟಿನಿಂದ ಬೆಳೆದಿರುವ ಕಬ್ಬಿಗೆ ಒಂದು ಕಟ್ಟು ನೀರು ಬಿಡಲು ಜಿಲ್ಲಾಧಿಕಾರಿಗೆ ಮನವಿ

ಈ ಬಾರಿಯ ಮುಂಗಾರು ಕೊರತೆಯಿಂದ ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬು ಒಣಗುತ್ತಿದ್ದು.ಕೆ ಆರ್ ಎಸ್ ಅಣೆಕಟ್ಟಿನಿಂದ ಒಂದು ಕಟ್ಟು ನೀರು ಹರಿಸುವಂತೆ ಮೈಶುಗರ್ ಉಳಿಸಿ ಹೋರಾಟ ಸಮಿತಿ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಗಾರರು ಇದ್ದು

ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದೆ ಇರುವುದರಿಂದ ಕಬ್ಬಿನ ಬೆಳೆಗಳು ಒಣಗುವಂತಹ ಪರಿಸ್ಥಿತಿಯಲ್ಲಿದೆ. ಸಕ್ಕರೆ ಕಾರ್ಖಾನೆಗಳು ಸಕಾಲದಲ್ಲಿ ಆರಂಭವಾಗದೆ ವರ್ಷದ ಬೆಳೆ ಕೈತಪ್ಪಿ ರೈತರ ಹೆಗಲ ಮೇಲೆ ಸಾಲದ ಹೊರೆ ಬೀಳುತ್ತಿದೆ.

ರೈತರು ಸಾಲ ಸೋಲ ಮಾಡಿ ಕಬ್ಬು ಬೆಳೆಯಲು ಬಂಡವಾಳ ಹೂಡಿದ್ದಾರೆ ಬೆಳೆದಿರುವ ಬೆಳೆ ಕೈಗೆ ಸಿಗದೇ ಹೋದರೆ ಇದರ ಪರಿಣಾಮ ರೈತರು ಮತ್ತಷ್ಟು ಸಾಲಗಾರರಾಗಿ ಸಂಕಷ್ಟಕ್ಕೆ ಸಿಲುಕಿ ಕೊಂಡು ಆತ್ಮಹತ್ಯೆ ಅಂಚಿಗೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಆದ್ದರಿಂದ ತಾವುಗಳು ಜಿಲ್ಲೆಯ ರೈತರ ಕಬ್ಬು ಬೆಳೆಗಾರರ ಗಂಭೀರ ಸಮಸ್ಯೆಗಳನ್ನು ಗಮನಿಸಿ ತುರ್ತಾಗಿ ಕೆ ಆರ್ ಎಸ್ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಿದರೆ ಲಕ್ಷಾಂತರ ರೈತರಿಗೆ ಅನುಕೂಲವಾಗುತ್ತದೆ. 2012 ರಲ್ಲಿ ಕೃಷ್ಣರಾಜ ಸಾಗರದಲ್ಲಿ ನೀರಿನ ಮಟ್ಟ 70 ಅಡಿ ಇದ್ದಾಗಲೂ ರೈತರ ಬೆಳೆಗೆ ನೀರು ಹರಿಸಿದ ನಿದರ್ಶನವಿದೆ.ಇದನ್ನೆಲ್ಲ ಗಮನಿಸಿ ನೀರು ಬಿಡುಗಡೆಗೊಳಿಸಿ ರೈತರ ಬೆಳೆ ಉಳಿಸಬೇಕು ಎಂದರು.

ರೈತರು ಬೆಳೆದ ಬೆಳೆ ಒಣಗುತ್ತಿರುವುದರಿಂದ ಬೆಳೆ ನಷ್ಟ ಪರಿಹಾರ ನೀಡುವುದು ಅನಿವಾರ್ಯವಾಗಿದೆ. ಹಾಗೂ ರೈತರ ಸಾಲಗಳ ಮನ್ನಾ ಮಾಡಬೇಕು ಮೈ ಶುಗರ್ ಕಾರ್ಖಾನೆ ಉಳಿಸಿ ಹೋರಾಟ ಸಮಿತಿ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದೆ.

ಮುಂದುವರಿದು ಕೃಷ್ಣರಾಜ ಸಾಗರ ನಿರ್ಮಾಣದ ಪ್ರಧಾನ ಗುರಿ ರೈತರ ಕೃಷಿ ಭೂಮಿಗೆ ನೀರೊದೊಗಿಸುವುದಾಗಿತ್ತೇ ವಿನಾ ಅನಿಯಂತ್ರತ ವಲಸೆ ಹಾಗೂ ರಿಯಲ್ ಎಸ್ಟೇಟ್ ವಿಸ್ತರಣೆಯಿಂದ ನಲುಗುತ್ತಿರುವ ಬೆಂಗಳೂರಿಗೆ ಅನಿಯಮಿತವಾಗಿ ನೀರು ಒದಗಿಸುವುದಾಗಿರಲಿಲ್ಲ.
ಆದ್ದರಿಂದ ಬೆಂಗಳೂರಿಗೆ ನೀರು ಒದಗಿಸುವ ಉದ್ದೇಶಿತ ೬ ನೇ ಹಂತದ ಕುಡಿಯುವ ನೀರಿನ ಯೋಜನೆ ಕೈಬಿಡಬೇಕು.ಈ ಯೋಜನೆಯಿಂದ ಮಂಡ್ಯ ಜಿಲ್ಲೆಯ ರೈತರು ಒಂದು ಬೆಳೆಗೆ ಸಿಮೀತವಾಗಬೇಕಾಗುತ್ತದೆ.

ಮಳೆ ನಷ್ಟದಿಂದ ಉಂಟಾಗುವ ಬೆಳೆನಷ್ಟಕ್ಕೆ ಅಗತ್ಯ ವೈಜ್ಞಾನಿಕ ಪರಿಹಾರ ಘೋಷಿಸುವಂತೆ ಒತ್ತಾಯಿಸುತ್ತೇವೆ.

ಬೇಡಿಕೆಗಳು
1. ತುರ್ತಾಗಿ ಕೆ ಆರ್‌ಎಸ್ ಅಣೆಕಟ್ಟೆಯಿಂದ ಒಣಗುತ್ತಿರುವ ಕಬ್ಬಿಗೆ ಒಂದು ಕಟ್ಟು ನೀರು ಬಿಡುಗಡೆ ಮಾಡಬೇಕು.
2.ಒಣಗುತ್ತಿರುವ ಎಲ್ಲ ಬಗೆಯ ಫಸಲು ಗಳಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು

3.ಬೆಂಗಳೂರಿಗೆ ನೀರೊದಗಿಸುವ 6ನೇ‌ ಹಂತದ ಕುಡಿಯುವ ನೀರಿನ ಯೋಜನೆ ಕೈ ಬಿಡಬೇಕು ಎಂದು ಆಗ್ರಹಿಸಲಾಗಿದೆ.ಎಂ ಬಿ ನಾಗಣ್ಣಗೌಡರಾಜ್ಯ ವಕ್ತಾರರು ಕರುನಾಡ ಸೇವಕರ ಸಂಘಟನೆ

ಎಚ್ ಡಿ ಜಯರಾಮ್
ಜಿಲ್ಲಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ

ಎನ್ ರಾಜೇಂದ್ರ ಸಿಂಗ್ ಬಾಬು
ಅಧ್ಯಕ್ಷರು ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟ
ಆಟೋ ವೆಂಕಟೇಶ್
ಆಟೋ ಘಟಕದ ಅಧ್ಯಕ್ಷರು
ಗೋವಿಂದರಾಜು
ಸೋಮಶೇಖರ್
ಶ್ರೀನಿವಾಸ್

ಪ್ರಾಂತ ರೈತಸಂಘದ ಎಲ್ ಎನ್ ಭರತ್ ರಾಜು ಮೊದಲಾದವರಿದ್ದರು. ಅಪರ ಜಿಲ್ಲಾಧಿಕಾರಿ ಶಿವನಂದಾ ಮುರ್ತಿ ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!