ಒಂದೇ ವೇದಿಕೆಯಲ್ಲಿ ಒಬ್ಬರು ಹಗರಣಗಳ ಸಮರ್ಥನೆ.ಮತ್ತೊಬ್ಬರದು ಹೋರಾಟದ ಎಚ್ಚರಿಕೆ
ಮನ್ ಮುಲ್ ನಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಹಗರಣದ ಸಂಬಂದ ಜಿಲ್ಲಾ ಬಿಜೆಪಿ ಘಟಕ ಆಯೋಜಿಸಿತ್ತು.
.ಆರಂಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಮನ್ ಮುಲ್ ಹಾಲಿನ ಪುಡಿ ಕಲಬೆರಕೆ ವಿರುದ್ದ ಸಿಬಿಐ ತನಿಖೆಗೆ ಆಗ್ರಹಿಸಿ ಹೋರಾಟ ರೂಪಿಸಿ ಸಿಬಿಐ ತನಿಖೆಗೆ ಆಗ್ರಹಿಸಲಾಗುವುದೆಂದರು.
ನಂತರ ಮದ್ದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಹುರಿಯಾಳಾಗಿದ್ದ ಸ್ವತಃ ಹಾಲೀ ಮನ್ ಮುಲ್ ನಿರ್ದೇಶಕ ಎಸ್ ಪಿ ಸ್ವಾಮಿ ಮನ್ ಮುಲ್ ನಲ್ಲಿ ಯಾವುದೆ ಹಗರಣ ನಡೆದಿಲ್ಲ.ಆಗಿರುವುದು ಕಳಪೆ ಹಾಲಿನ ಪುಡಿ ಘಟನೆಯಷ್ಟೆ..ಅದು ಮಾಧ್ಯಮಾದಲ್ಲಿ ವರದಿಯಾದಂತೆ ನೂರು ಕೋಟಿ ಹಗರಣವಲ್ಲ ಕೇವಲ ಮೂರು ಕೋಟಿ ಹಗರಣ ಎಂದು ಸಮರ್ಥನೆಗೆ ಮುಂದಾದರು.
ಒಂದೇ ವೇದಿಕೆಯಲ್ಲಿ ಬಿಜೆಪಿಯ ಇಬ್ಬರು ನಾಯಕರ ದ್ವಂದ್ವ ಹೇಳಿಕೆಗಳ ಕುರಿತು ಪತ್ರಕರ್ತರು ಪ್ರಶ್ನಿಸುತ್ತಿದ್ದಂತೆ ಸ್ವಾಮಿಯವರಿಂದ ಮೈಕ್ ಕಸಿದ ಇಂದ್ರೇಶ್ ನಮ್ಮ ಪಕ್ಷದವರೆ ತಪ್ಪು ಮಾಡಿದ್ದರೂ ವದ್ದು ಒಳಾಗಾಕಲಿ ಎಂದು ಸಮಾಜಾಯಿಷಿ ನೀಡಿ ಮುಜುಗರ ತಪ್ಪಿಸಿಕೊಳ್ಳುವ ಯತ್ನ ನಡೆಸಿದರು.


