ತಲೆಮರೆಸಿಕೊಂಡಿರುವ ಸರ್ಕಾರಿ ವೈದ್ಯ.!?.
ಡಾ.ಪ್ರಿಯಾಂಕಗೋಟ್ಯಾಳ
ಕೆ.ಆರ್ .ಪೇಟೆ ಸರ್ಕಾರಿ ವೈದ್ಯಯಾಗಿದ್ದರೂ ಖಾಸಗಿ ಸ್ಕ್ಯಾನಿಂಗ್ ಸೆಂಟರ್ ನೊಂದಿಗೆ ಒಳಒಪ್ಪಂದ ಮಾಡಿಕೊಂಡು ಖಾಸಗಿ ಸಂಸ್ಥೆಯ ಹೆಸರಿನ ಚೀಟಿ ಬಳಸಿ ಸಾವಿರಾರು ಸ್ಕ್ಯಾನಿಂಗ್ ಮಾಡಿಸಿರುವ ಆರೋಪ ಹೊತ್ತಿರುವ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯ ಡಾ.ಪ್ರಿಯಾಂಕ ಗೋಟ್ಯಾಳ ವಿರುದ್ದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಬಂಧನದ ಭೀತಿಯಿಂದ ಮೊಬೈಲ್ ಆಫ್ಮಾಡಿಕೊಂಡು ಡಾ.ಪ್ರಿಯಾಂಕ ತಲೆ ಕರೆಸಿ ಕೊಂಡಿದ್ದು ಆಕೆಯ ಬಂಧನಕ್ಕಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಾಕಷ್ಟು ಅಕ್ರಮ ಮಾಡಿರುವ ಡಾ.ಪ್ರಿಯಾಂಕ ಗೋಟ್ಯಾಳ ಅವರನ್ನು ಪತ್ತೆ ಮಾಡಿ ತಕ್ಷಣ ಬಂಧಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ..
ಸಾಮಾಜಿಕ ಜಾಲತಾಣಗಳಲ್ಲಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಇರುವವರ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿವೆ.


