Saturday, October 3, 2026
spot_img

ಮಹಿಳಾ ಅಧಿಕಾರಿಯನ್ನು ಕಟ್ಟಾಕಿ ಹೊಡೀತಿನಿ ಎಂದ ಮನ್ ಮುಲ್ ನಿರ್ದೇಶಕ!

ಮಹಿಳಾ ಅಧಿಕಾರಿಯನ್ನು ಕಟ್ಟಾಕಿ ಹೊಡೀತೀನಿ ಎಂದ ಮನ್ ಮುಲ್ ಪುಂಡ ನಿರ್ದೇಶಕ !

ಮನ್ ಮುಲ್ ಆಡಳಿತ ಮಂಡಳಿಗೆ ಸರಕಾರದಿಂದ ನಾಮ ನಿರ್ದೇಶನಗೊಂಡಿದ್ದ ಮಹಿಳಾ ಅಧಿಕಾರಿಯನ್ನು ಕಟ್ಟಾಕಿ ಹೊಡೀತಿನಿ ಎಂದು ಮನ್ ಮುಲ್ ನಿರ್ದೇಶಕನೊಬ್ಬ ಆಡಳಿತ ಮಂಡಳಿಯ ಸದಸ್ಯರೆದುರು ಧಮಕಿ ಹಾಕಿದ ಘಟನೆ ತಡವಾಗಿ ಬಯಲಿಗೆ ಬಂದಿದೆ.

ಈ ಕುರಿತು ಇಂದು ಮಂಡ್ಯ ಪತ್ರಿಕಾ ಭವನದಲ್ಲಿ ಮಾತನಾಡಿದ ಸ್ವತಃ ಮನ್ ಮುಲ್ ನಿರ್ದೇಶಕ ಶಾಸಕ ಎಚ್ ಟಿ ಮಂಜು.ಕಳೆದ ಕೆಲ ತಿಂಗಳುಗಳ ಹಿಂದೆ ಆಡಳಿತ ಮಂಡಳಿಯ ಸದಸ್ಯರ ಎದುರೆ ಆಡಳಿತ ಮಂಡಳಿಗೆ ನಾಮ ನಿರ್ದೇಶನಗೊಂಡಿದ್ದ ಮಹಿಳಾ ಅಧಿಕಾರಿಣಿಯೊಬ್ಬರಿಗೆ ಪುಂಡ ನಿರ್ದೇಶಕ ತನಗೆ ವ್ಯತಿರಿಕ್ತವಾಗಿ ಇದ್ದರು ಎಂಬ ಕಾರಣಕ್ಕೆ ಕಟ್ಟಾಕಿ ಹೊಡೀಯುವುದಾಗಿ ಮಹಿಳೆ ಎಂಬ ರಿಯಾಯತಿಯೂ ತೋರದೆ ಧಮಕಿ ಹಾಕಿದ್ದಾನೆ.

ಈ ಕುರಿತು ಸ್ವತ ಸಚಿವ ಚಲುವರಾಯಸ್ವಾಮಿ ಗಮನಕ್ಕೆ ತಂದರೂ ಸದರಿ ನಿರ್ದೇಶಕನ ವಿರುದ್ಧ ಯಾವುದೆ ಕ್ರಮವಾಗಿಲ್ಲ.ಬಹುತೇಕ ನಿರ್ದೇಶಕರ ಪಾಳೇಗಾರಿಕೆ ಧೋರಣೆಯನ್ನು ವಿವರಿಸುತ್ತಾ ಈ ಘಟನೆಯನ್ನು ಮಾಧ್ಯಮದೆದುರು ಬಿಚ್ಚಿಟ್ಟರು.

ಈ ಹಿಂದೆ ಸಹ ಮನ್ ಮುಲ್ ನಿರ್ದೇಶಕರು ಅಲ್ಲಿನ ಮಹಿಳಾ ನೌಕರರಿಗೂ ಸಹ ಲೈಂಗಿಕ ಅಭಿರುಚಿಯ ಮೆಸೇಜ್ ಮಾಡಿ ಕುಖ್ಯಾತಿಯಾಗಿದ್ದರು.ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ಸೇರಿದ ಈ ನಿರ್ದೇಶಕರುಗಳು ತಮ್ಮ ರಾಜಕೀಯ ನಾಯಕರ ಬೆಂಬಲದ ಕಾರಣಕ್ಕೆ ಹಗರಣಗಳ ನ್ನು ನಡೆಸಿ ಮನ್ ಮುಲ್ ಮುಳುಗಿಸುತ್ತಿರುವ ಜತೆಗೆ ಈ ರೀತಿಯ ದೌರ್ಜನ್ಯಗಳಿಗೂ ಚಾಲ್ತೀಯಲ್ಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!