ಮೇಲುಕೋಟೆ ವಿಧಾನಸಭಾ ಶಾಸಕರ ವಿರುದ್ಧ ಕೆಲವರು ಅಪಪ್ರಚಾರ ನಡೆಸುತ್ತಿದ್ದು. ಅಪಪ್ರಚಾರ ಮಾಡುವವರ ವಿರುದ್ಧ ಕ್ಷೇತ್ರದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ಶಿವಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು .
ಮಂಡ್ಯ ನಗರದ ಪತ್ರಿಕ ಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಉತ್ತಮವಾದಂತಹ ಕ್ಷೇತ್ರ ಅಭಿವೃದ್ಧಿಯನ್ನು ಮಾಡುತ್ತಿರುವುದನ್ನು ಸಹಿಸಿಕೊಳ್ಳದೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ.
ವಿದೇಶಕ್ಕೆ ಹೋಗಲು ಪ್ರಮುಖ ಕಾರಣ ತನ್ನ ಮಡದಿಗೆ ಅನಾರೋಗ್ಯದ ಕಾರಣ ಯೋಗಕ್ಷೇಮ ವಿಚಾರಿಸಲು ಹೋಗುತ್ತಿದ್ದಾರೆ ಹೊರತು ಮೋಜು ಮಸ್ತಿ ಮಾಡುವುದಕ್ಕೆ ಹೋಗುತ್ತಿಲ್ಲ.
ಈ ಸತ್ಯ ಅರ್ಥ ಮಾಡಿಕೊಳ್ಳದೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ
ನಮ್ಮ ಕ್ಷೇತ್ರದಲ್ಲಿ ಜನಸಾಮಾನ್ಯರ ಸಮಸ್ಯೆಗಳು ಕುರಿತು ಕಾಳಜಿ ಮಾಡುವ ಜಿಲ್ಲೆಯ ಏಕೈಕ ಶಾಸಕರು ಎಂದರೆ ತಪ್ಪಾಗಲಾರದು .
ಯಾರದೋ ಮಾತನ್ನು ಕೇಳಿ ಅಪಪ್ರಚಾರ ಮಾಡುತ್ತಿರುವವರ ವರ್ತನೆ ಅವರಿಗೆ ಶೋಭೆ ತರುವಂತದ್ದುಲ್ಲ.
ಇದೇ ರೀತಿ ಮುಂದುವರೆದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು
ಕ್ಷೇತ್ರದಲ್ಲಿ 1250ಕ್ಕೂ ಕೋಟಿ ರೂಪಾಯಿಗಳ ಅನುದಾನ ತಂದಿದ್ದಾರೆ. ಗ್ರಾಮಗಳ ಮೂಲಭೂತ ಸೌಕರ್ಯಗಳು ಸೇರಿದಂತೆ ರಸ್ತೆ ಹಾಗೂ ಚರಂಡಿಗಳು ನಿವೇಶನಗಳು ಸಂಬಂಧಿಸಿದಂತೆ ಅಭಿವೃದ್ಧಿ ಮಾಡಿದ್ದಾರೆ .
ಸರ್ಕಾರಿ ಕೆಲಸ ಮನೆ ಮನೆ ಬಾಗಿಲಿಗೆ ಎಂಬ ಕಾರ್ಯಕ್ರಮವನ್ನು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ದರ್ಶನ್ ಪುಟ್ಟಣ್ಣಯ್ಯ ಪರಿಚಯಿಸಿದ್ದಾರೆ.
ಕಾವೇರಿ ವಿಚಾರ ಸಂಬಂಧಿಸಿ ದಂತೆ ಮುಖ್ಯಮಂತ್ರಿ ಸಂಬಂಧಪಟ್ಟ ಸಚಿವರ ಜೊತೆ ಸುದೀರ್ಘ ಚರ್ಚೆ ಮಾಡಿದ್ದಾರೆ ಹಾಗೂ ನಮ್ಮ ಜೊತೆ ಹೋರಾಟಕ್ಕೆ ಭಾಗಿಯಾಗಿರುವುದು ಗೊತ್ತಿರುವ ಸಂಗತಿಯಾಗಿದೆ ಎಂದರು.
ಭೂಮಿ ಒತ್ತುವರಿ ಸಂಬಂಧಿಸಿದಂತೆ ತೆರವುಗೊಳಿಸುವ ಕಾರ್ಯಚರಣೆಗಳು ಮಾಡುತ್ತಿದ್ದಾರೆ.
ಕಾನೂನು ವಿರುದ್ಧವಾಗಿರುವ ಯಾವುದೇ ಪ್ರಕರಣಗಳಿಗೆ ಮಾನ್ಯತೆ ನೀಡದ ಕಾರಣ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಮಲ್ಲಿಗೆರೆ, ಪ್ರಕಾಶ್, ನಾಗರಾಜು ಗಾಣದಾಳು, ಕಾಳೇಗೌಡ ಪುಟ್ಟಿಕೊಪ್ಪಲು, ಮಂಜುನಾಥ್, ಶಿವಣ್ಣ ಭಾಗವಹಿಸಿದರು.


